ಸ್ನೇಹಿತನಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿ, ಆತ್ಮಹತ್ಯೆ ಮಾಡಿಕೊಂಡ ಡಾಬಾ ಮಾಲಕ

Tuesday, July 28th, 2020
Dinesh Shetty

ಪಡುಬಿದ್ರೆ : ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜು ಬಳಿಯ ನಿವಾಸಿ, ಹೆಜಮಾಡಿ ಪರಿವಾರ ಡಾಬಾ ಮಾಲಕ ದಿನೇಶ್ ಶೆಟ್ಟಿ(45) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಜಮಾಡಿಯಲ್ಲಿ ಇಂದು ಬೆಳಕಿಗೆ ಬಂದಿದೆ. ಇವರಿಗೆ ಹೆಜಮಾಡಿಯಲ್ಲಿ ಮನೆಯಿದ್ದರೂ ಸುಮಾರು 9 ತಿಂಗಳ ಹಿಂದೆ ಮಂಗಳೂರಿನ ಕೊಟ್ಟಾರದಲ್ಲಿ ಮನೆ ನಿರ್ಮಿಸಿ ಅಲ್ಲೇ ವಾಸ್ತವ್ಯವಿದ್ದರು. 4 ದಿನಗಳ ಹಿಂದ ಹೆಜಮಾಡಿಯಲ್ಲಿರುವ ಮನೆಗೆ ಬಂದು ಒಬ್ಬಂಟಿಯಾಗಿ ವಾಸವಿದ್ದರೆನ್ನಲಾಗಿದೆ. ಎರ್ಮಾಳ್‌ನ ಸ್ನೇಹಿತನೊಬ್ಬನಿಗೆ ರವಿವಾರ ಕರೆ ಮಾಡಿದ್ದ ದಿನೇಶ್ ಶೆಟ್ಟಿ ಯಾವುದೋ ಕೆಲಸದ ನಿಮಿತ್ತ […]

ಮಂಗಳೂರಿನಲ್ಲಿ ಧಾರಾಕಾರ ಮಳೆ; ವಾಹನಗಳ ಓಡಾಟಕ್ಕೆ ಸಮಸ್ಯೆ

Monday, August 26th, 2019
kottaara

ಮಂಗಳೂರು : ನಗರದಲ್ಲಿ ಸುರಿದ ಭಾರೀ ಮಳೆಗೆ ಮಂಗಳೂರು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ನೀರು ತುಂಬಿದ ಪರಿಣಾಮ ಸಂಚಾರ ಅಸ್ತವ್ಯಸ್ತ ಗೊಂಡಿದೆ. ಸೋಮವಾರ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ನಗರದ ಕೊಟ್ಟಾರ , ಕಾಪಿಕಾಡ್, ಬಿಜೈ, ನಂತೂರು, ಅಳಕೆ ಪರಿಸರದಲ್ಲಿ ನೀರು ತುಂಬಿದ್ದು ಸಂಚಾರ ದುಸ್ತರಗೊಂಡಿದೆ. ಈ ಮಧ್ಯೆ ನಗರದ ಸುಲ್ತಾನ ಬತ್ತೇರಿಯಲ್ಲೂ ನೀರು ಕೆಲವು ಅಂಗಳ ದಾಟಿವೆ. ಮಠದ ಕಣಿಯಲ್ಲಿರುವ 4 ಮನೆಗಳು ಕೂಡ ಅಪಾಯದಲ್ಲಿದೆ.    

ಜಿಲ್ಲೆಯಾದ್ಯಂತ ಭಾರಿ ಮಳೆ..ಹಲವೆಡೆ ತಗ್ಗು ಪ್ರದೇಶಗಳು ಜಲಾವೃತ!

Saturday, August 11th, 2018
heavy-rain

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಂಗಳೂರು ನಗರದ ಕೊಟ್ಟಾರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕೊಟ್ಟಾರದಲ್ಲಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿದ್ದು, ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿರುವ ನೇತ್ರಾವತಿ, ಫಲ್ಗುಣಿ, ನಂದಿನಿ, ಕುಮಾರಧಾರ ನದಿಗಳು ತುಂಬಿ ಹರಿಯುತ್ತಿವೆ.

ಕೊಟ್ಟಾರ ಬಳಿ ಹೆದ್ದಾರಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐವನ್ ಸೂಚನೆ

Saturday, October 11th, 2014
ಕೊಟ್ಟಾರ ಬಳಿ ಹೆದ್ದಾರಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಐವನ್ ಸೂಚನೆ

ಮಂಗಳೂರು : ಕೊಡಿಕಲ್ ಕೂಡು ರಸ್ತೆಯ ಬಳಿಯೇ ಫೈಓವರ್ ಸೇತುವೆಯೂ ಸಂಪರ್ಕಿಸುತ್ತಿರುವುದರಿಂದ ಇಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿರುವ ಈ ಪ್ರದೇಶದಲ್ಲಿ ಸೂಕ್ತ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನಗರ ಟ್ರಾಫಿಕ್ ಪೊಲೀಸ್ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಮಸ್ಯೆಯ ಸ್ಥಳಕ್ಕೆ ಸೆ.10ರಂದು ಮಧ್ಯಾಹ್ನ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸಮಸ್ಯೆಯ ಪರಿಹಾಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಫೈಓವರ್ ಅಂತ್ಯವಾಗುವಲ್ಲಿ ಕೊಡಿಕಲ್ […]

ಕೊಟ್ಟಾರ ಸಮೀಪ ಬಂಗ್ರಕೂಳೂರು ಬಳಿ ಸೇತುವೆಗೆ ಡಿಕ್ಕಿ ಹೊಡೆದ ಬಸ್, ತಪ್ಪಿದ ಅನಾಹುತ

Tuesday, May 28th, 2013
bus skids Bangrakulur

ಮಂಗಳೂರು : ಮಂಗಳವಾರ ಹುಬ್ಬಳ್ಳಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಾರ ಸಮೀಪದ ಬಂಗ್ರಕೂಳೂರು ಬಳಿಯ ಕಿರು ಸೇತುವೆಯ ತಡೆಗೋಡೆಗೆ ಹೊಡೆದು ನಿಂತ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಮಂಗಳೂರಿನ ಕೂಳೂರು ಸಮೀಪಿಸುತ್ತಿದ್ದಂತೆ ಬಸ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು, ಬಸ್ ನ ಸ್ಟೀರಿಂಗ್ ವ್ಹೀಲ್ ತುಂಡಾಗಿದೆ. ಚಾಲಕ ಬಸ್ ನ್ನು ನಿಧಾನವಾಗಿ ಚಲಾಯಿಸಿಕೊಂಡು ಬಂದರೂ ಬಂಗ್ರಕೂಳೂರು ಸಮೀಪ  ಸುರಿದ ಮಳೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್  ಕಿರು […]

ಕೊಟ್ಟಾರ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ, ತಪ್ಪಿದ ಅಪಾಯ

Tuesday, January 22nd, 2013
Fire in car near kottara

ಮಂಗಳೂರು : ನಗರದ ಕೊಟ್ಟಾರ ಜಂಕ್ಷನ್ ಬಳಿ ಸೋಮವಾರ ರಾತ್ರಿ ಮುನಾಫ್ ಶೇಖ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕಾಸರಗೋಡಿನಿಂದ ಪುಣೆಗೆ ತೆರಳುತ್ತಿದ್ದ ಸಂದರ್ಭ ಕಾರಿನ ಮುಂಭಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರ ಹಾಗೂ ಅಗ್ನಿಶಾಮಕ ಇಲಾಖೆಯವರ ಸಕಾಲಿಕ ಕಾರ್ಯಾಚಣೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಮುನಾಫ್ ಶೇಖ್ ತಮ್ಮ ಕಾರನ್ನು ರಸ್ತಯ ಬದಿ ನಿಲ್ಲಿಸಿ ಕಾರಿನ ಮುಂಭಾಗದ ಕವಚವನ್ನು ತೆರೆಯಲು ಪ್ರಯತ್ನಿಸಿದಾಗ ಅದು ತೆರೆಯಲು ಸಾಧ್ಯವಾಗದ ಸಂದರ್ಭ ಕೂಡಲೇ ಕಾರ್ಯ ಪ್ರವೃತ್ತರಾದ […]