ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 220 ಮಂದಿಗೆ ಕೊರೊನಾ ಸೋಂಕು, 5 ಮಂದಿ ಬಲಿ

Saturday, October 17th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 220 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶುಕ್ರವಾರ 391 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಶುಕ್ರವಾರದ ರಾಜ್ಯ ಆರೋಗ್ಯ ಬಲಿಟಿನ್ ಮಾಹಿತಿ ಪ್ರಕಾರ 5 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಕೊರೊನಾ ಸೋಂಕಿಗೆ ಒಟ್ಟು  624 ಸಾವು ಸಂಭವಿಸಿದೆ. ಶುಕ್ರವಾರದ 391 ಮಂದಿ ಒಳಗೊಂಡು ಈವರೆಗೆ ಒಟ್ಟು ಗುಣಮುಖರಾದವರು 23804 ಮಂದಿ. ದ.ಕ ಜಿಲ್ಲೆಯಲ್ಲಿ ಈವರೆಗೆ  ಸಕ್ರಿಯ ಪ್ರಕರಣಗಳ ಸಂಖ್ಯೆ  3531, ಒಟ್ಟು ಕೊರೊನಾ ನೆಗೆಟಿವ್ ಪ್ರಕರಣಗಳು 189046,  ಪಾಸಿಟಿವ್ ಪ್ರಕರಣಗಳು 27959, ಈವರೆಗೆ 217005 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ – 258, ಸಾವು 9, ಉಡುಪಿ ಜಿಲ್ಲೆ – 158, ಸಾವು 3, ಕಾಸರಗೋಡು -257

Sunday, October 4th, 2020
Corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 258 ಮಂದಿಗೆ ಕೊರೊನಾ ದೃಢಪಟ್ಟಿದ್ದು 9 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 566 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,019 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 344 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 17,709 ಮಂದಿ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ 5,744 ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,361 ಮಾಸ್ಕ್ ಉಲ್ಲಂಘನೆ ಪ್ರಕರಣ ವರದಿಯಾಗಿದ್ದು, 5,30,885 ದಂಡ ವಸೂಲಿ […]

ಕೊರೊನಾ ಸೋಂಕು : ದಕ್ಷಿಣ ಕನ್ನಡ – 456, ಸಾವು 1, ಉಡುಪಿ ನಾಲ್ಕು ದಿನಗಳಲ್ಲಿ 845

Friday, September 18th, 2020
corona

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿತರ ಸಂಖ್ಯೆ 456 ಕ್ಕೆ ಏರಿಕೆಯಾಗಿದೆ. 11 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಕೊರೊನಾದಿಂದ ಸಾವನ್ನಪ್ಪಿದ 11 ಮಂದಿಯಲ್ಲಿ 6 ಮಂದಿ ಮಂಗಳೂರು ತಾಲೂಕಿನವರಾದರೆ, ತಲಾ ಒಬ್ಬರು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 472 ಕ್ಕೆ ಏರಿಕೆಯಾಗಿದೆ. 456 ಮಂದಿ ಕೊರೊನಾ ಸೋಂಕಿತರಲ್ಲಿ 242 ಮಂದಿ ಮಂಗಳೂರು ತಾಲೂಕು, 86 ಬಂಟ್ವಾಳ ತಾಲೂಕು, 27 ಪುತ್ತೂರು ತಾಲೂಕು, 26 ಸುಳ್ಯ ತಾಲೂಕು, 40 ಬೆಳ್ತಂಗಡಿ ತಾಲೂಕು […]

ಕೊರೊನಾ ಸೋಂಕು : ದಕ್ಷಿಣ ಕನ್ನಡ 310, ಉಡುಪಿ 258, ಕಾಸರಗೋಡು 270

Wednesday, September 9th, 2020
CORONA

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 310 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15,762 ಕ್ಕೆ ಏರಿಕೆಯಾಗಿದೆ. ಇಂದಿನ ಪ್ರಕರಣಗಳ ಪೈಕಿ  ಮಂಗಳೂರಿನಲ್ಲಿ 188, ಬಂಟ್ವಾಳದಲ್ಲಿ 27, ಪುತ್ತೂರಿನಲ್ಲಿ 25, ಸುಳ್ಯದಲ್ಲಿ 25, ಬೆಳ್ತಂಗಡಿಯಲ್ಲಿ 26 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 19 ಮಂದಿಗೆ ಪಾಸಿಟಿವ್‌ ಆಗಿದೆ. ಬುಧವಾರ ಜಿಲ್ಲೆಯಲ್ಲಿ ಆರು ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈ ಪೈಕಿ ಐವರು ಮಂಗಳೂರಿನವರಾದರೆ ಒಬ್ಬರು ಇತರೆ ಜಿಲ್ಲೆಯವರಾಗಿದ್ದಾರೆ. ಈವರೆಗೆ […]

ಕೊರೊನಾ ಸೋಂಕು : ದಕ್ಷಿಣ ಕನ್ನಡ 428, ಉಡುಪಿ 186 , ಕಾಸರಗೋಡು 236

Saturday, September 5th, 2020
corona

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ  428 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾಗೆ 7 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟ 7 ಮಂದಿಯಲ್ಲಿ 4 ಮಂದಿ ಮಂಗಳೂರು ತಾಲೂಕು, ಒಬ್ಬರು ಪುತ್ತೂರು ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವ ರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 391ಕ್ಕೆ ಏರಿಕೆಯಾಗಿದೆ. ಮಂಗಳೂರು ತಾಲೂಕಿನ 222 ಮಂದಿ, ಬಂಟ್ವಾಳ ತಾಲೂಕಿನ 61, ಪುತ್ತೂರು ತಾಲೂಕಿನ 54 , ಸುಳ್ಯ ತಾಲೂಕಿನ 45, ಬೆಳ್ತಂಗಡಿ ತಾಲೂಕಿನ 28 ಮತ್ತು ಹೊರಜಿಲ್ಲೆಯ 18 […]

ಕೊರೊನಾ ಸೋಂಕು : ದಕ್ಷಿಣ ಕನ್ನಡ 272, ಉಡುಪಿ ಜಿಲ್ಲೆ172

Sunday, August 30th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ 272 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12109 ಕ್ಕೆ ಏರಿಕೆಯಾಗಿದೆ. ಶನಿವಾರ  ಮಂಗಳೂರಿನಲ್ಲಿ 163, ಬಂಟ್ವಾಳದಲ್ಲಿ 30, ಪುತ್ತೂರಿನಲ್ಲಿ 33, ಸುಳ್ಯದಲ್ಲಿ 23, ಬೆಳ್ತಂಗಡಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 12 ಮಂದಿಗೆ ಪಾಸಿಟಿವ್‌ ಆಗಿದೆ. ಜಿಲ್ಲೆಯಲ್ಲಿ ಶನಿವಾರ  236 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9209 ಕ್ಕೆ ಏರಿದೆ. ಜಿಲ್ಲೆಯಲ್ಲಿ […]

ಕೊರೊನಾ ಸೋಂಕು ಆಗಸ್ಟ್ 24 : ದಕ್ಷಿಣ ಕನ್ನಡ 201, ಉಡುಪಿ 103, ಕಾಸರಗೋಡು 118

Monday, August 24th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 201 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10531ಕ್ಕೆ ಏರಿಕೆಯಾಗಿದೆ. ಸೋಮವಾರ  ಪತ್ತೆಯಾದ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 49 ಮಂದಿಗೆ ಸೋಂಕು ತಗುಲಿದೆ. 70 ಐಎಲ್‌ಐ ಪ್ರಕರಣಗಳಾಗಿವೆ. 9 ಸಾರಿ ಪ್ರಕರಣಗಳು ದೃಢಪಟ್ಟಿವೆ. 72 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ರಾಜ್ಯ ಪ್ರಯಾಣ ಮುಗಿಸಿ ಬಂದ ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆಗಸ್ಟ್ 24ರಂದು 241 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ […]

ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ 193 ಐದು ಸಾವು, ಉಡುಪಿ ಜಿಲ್ಲೆ 117 ಎರಡು ಸಾವು

Sunday, August 23rd, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಆಗಸ್ಟ್ 23 ರಂದು 193 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10330 ಕ್ಕೆ ಏರಿದೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರ  117 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10126 ಕ್ಕೆ ಏರಿಕೆಯಾಗಿದೆ. ಭಾನುವಾರದ ಪಾಸಿಟಿವ್ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 130, ಬಂಟ್ವಾಳದಲ್ಲಿ 21, ಸುಳ್ಯದಲ್ಲಿ 19, ಪುತ್ತೂರಿನಲ್ಲಿ 6, ಬೆಳ್ತಂಗಡಿಯಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 9 ಮಂದಿಗೆ ಪಾಸಿಟಿವ್‌ ಆಗಿದೆ.  193 ಸೋಂಕಿತರ […]

ಕೊರೊನಾ ಸೋಂಕು ಆಗಸ್ಟ್ 17 : ದಕ್ಷಿಣ ಕನ್ನಡ ಜಿಲ್ಲೆ 144, ಎಂಟು ಮಂದಿ ಸಾವು, ಉಡುಪಿ ಜಿಲ್ಲೆ 270

Tuesday, August 18th, 2020
CORONA

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 144 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೆ ಎಂಟು ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9,022ಕ್ಕೆ ಏರಿಕೆಯಾಗಿದೆ. ಮಂಗಳೂರಿನ ಮೂವರು, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ತಲಾ ಓರ್ವರು, ಮೂವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಪ್ರಮಾಣದ ದಿನೇದಿನೇ ಹೆಚ್ಚುತ್ತಲೇ ಸಾಗಿದೆ. ಸೋಮವಾರವೂ 144 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಸೋಂಕಿತರ ಸಂರ್ಪದಲ್ಲಿದ್ದ 21 […]

ಕೊರೊನಾ ಸೋಂಕು ಆಗಸ್ಟ್ 8 : ದಕ್ಷಿಣ ಕನ್ನಡ 194, ಸಾವು 6, ಉಡುಪಿ ಜಿಲ್ಲೆ 314, ಸಾವು 5, ಕಾಸರಗೋಡು 73

Sunday, August 9th, 2020
corona-virus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 194 ಕೊರೊನಾ ಸೋಂಕು  ಪ್ರಕರಣಗಳು, ಆರು ಸಾವು.  ಉಡುಪಿ ಜಿಲ್ಲೆಯಲ್ಲಿಂದು 314 ಮಂದಿಗೆ ಕೊರೊನಾ ಸೋಂಕು ಮತ್ತು ಐದು ಸಾವು ಶನಿವಾರ ವರದಿಯಾಗಿದೆ. ಶನಿವಾರ ಮಂಗಳೂರಿನಲ್ಲಿ 129, ಬಂಟ್ವಾಳದಲ್ಲಿ 15, ಬೆಳ್ತಂಗಡಿಯಲ್ಲಿ 16, ಪುತ್ತೂರಿನಲ್ಲಿ 16, ಸುಳ್ಯದಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 11 ಮಂದಿಗೆ ಪಾಸಿಟಿವ್‌ ಆಗಿದೆ.  ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7075 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಶನಿವಾರ 183 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ […]