ವ್ಯಕ್ತಿಯನ್ನು ಕೊಲೆಗೈದು ಪೊದೆಗೆ ಎಸೆದ ಓರ್ವನ ಬಂಧನ

Wednesday, October 4th, 2023
Habeeb

ಕಾಸರಗೋಡು : ಕೊಲೆ ಪ್ರಕರಣದ ಆರೋಪಿಯೋರ್ವನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಶಾಂತಿಪಳ್ಳದ ಅಬ್ದುಲ್ ರಶೀದ್ (42) ಎಂಬಾತನನ್ನು ಕೊಲೆ ಮಾಡಿದ ಆರೋಪಿ, ಅಭಿಲಾಷ್ ಯಾನೆ ಹಬೀಬ್ (34 ) ಬಂಧಿತ ಆರೋಪಿ. 2019 ರ ಅಕ್ಟೋಬರ್ 18 ರಂದು ಉಳಿಯತ್ತಡ್ಕದ ಶಾನ್ ವಾಸ್ ನನ್ನು ಕೊಲೆಗೈದು ಬಾವಿಗೆಸದ ಪ್ರಕರಣದ ಆರೋಪಿಯಾಗಿದ್ದ ರಶೀದ್ ನ ಮೃತದೇಹ ಸೋಮವಾರ ಬೆಳಿಗ್ಗೆ […]

ಮಾರಕಾಸ್ತ್ರಗಳಿಂದ ಕಡಿದು ಎಲ್ಐಸಿ ಏಜೆಂಟ್ ಕೊಲೆ

Thursday, January 13th, 2022
Shantappa-Gowda

ಬೆಳ್ತಂಗಡಿ : ವ್ಯಕ್ತಿಯೋರ್ವನನ್ನು  ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ಯಿ ಕೃಷಿಕ ಮತ್ತು ಎಲ್ಐಸಿ ಏಜೆಂಟ್ ಪ್ರತಿನಿಧಿಯಾಗಿರುವ ಶಾಂತಪ್ಪ ಗೌಡ ದೇವಸ್ಯ(40) ಎಂದು ಗುರುತಿಸಲಾಗಿದೆ. ಜಾಗದ ವಿಚಾರವಾಗಿ ಕೊಲೆ ಮಾಡಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಮಾಡಿದ ಆರೋಪಿ ಜಯಚಂದ್ರ ಎಂಬಾತ ಪರಾರಿಯಾಗಿದ್ದಾನೆ.

ಕಾರ್ಪೊರೇಟರ್ ಕೊಲೆ ಮಾಡಲು ಸಂಚು, , ರೌಡಿಶೀಟರ್ ಪಿಂಕಿ ನವಾಜ್ ಸೇರಿದಂತೆ ಐವರ ಬಂಧನ

Friday, October 22nd, 2021
pinki Nawaz

ಮಂಗಳೂರು: ಸುರತ್ಕಲ್ ಬಸ್ ನಿಲ್ದಾಣಕ್ಕೆ ದಿ.ದೀಪಕ್ ರಾವ್ ಹೆಸರಿಟ್ಟ ಬಳಿಕ  ದೀಪಕ್ ರಾವ್ ಕೊಲೆ ಪ್ರಕರಣದ ಸಾಕ್ಷಿ ಆಗಿರುವ ಸ್ಥಳೀಯ ಕಾರ್ಪೊರೇಟರ್ ಒಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ ಆಡಿಯೋವೊಂದು ವೈರಲ್ ಆದ ಬಳಿಕ, ರೌಡಿಶೀಟರ್ ಪಿಂಕಿ ನವಾಜ್ ಸೇರಿದಂತೆ ಐವರನ್ನ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಪಿಂಕಿ ನವಾಜ್ ಬಂಧಿತನಾಗಿದ್ದ. ಜಾಮಿನಿನ ಮೇಲೆ ಬಿಡುಗಡೆಗೊಂಡಿರುವ ಪಿಂಕಿ ನವಾಜ್ ಇದೀಗ ಕೊಲೆ ಪ್ರಕರಣಕ್ಕೆ […]

ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಣ್ಣ

Sunday, July 25th, 2021
Rafeeq

ಕಾಸರಗೋಡು : ಸೀತಾಂಗೋಳಿಯ ಮುಗು ಎಂಬಲ್ಲಿ ತಮ್ಮನನ್ನು ಅಣ್ಣ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕೊಲೆಗೀಡಾದವರನ್ನು ಮುಗು ಉರ್ಮಿಯ ಅಬ್ದುಲ್ಲ ಮುಸ್ಲಿಯಾರ್ ರವರ ಪುತ್ರ ನಿಸಾರ್ (29) ಎಂದು ಗುರುತಿಸಲಾಗಿದೆ. ಸಹೋದರ ರಫೀಕ್ (31)ನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಿಸಾರ್‌‌ನನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಬದಿಯಡ್ಕ ಠಾಣಾ ಪೊಲೀಸರು ಘಟನಾ ಸ್ಥಳಕ್ಕಾಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಮಹಿಳೆಯ ಮನೆಗೆ ಅಕ್ರಮ ಪ್ರವೇಶಿಸಿ ಕೊಲೆ ಯತ್ನ, ಏಳು ಮಂದಿಯ ಬಂಧನ

Wednesday, June 2nd, 2021
Shaktinagara Attackers

ಮಂಗಳೂರು : ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶಿಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿ, ಮಹಿಳೆಗೆ  ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ 9 ಮಂದಿಗಳ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ರಂಜಿತ್ ಯಾನೆ ರಂಜು ಯಾನೆ ತಮ್ಮು (28), ಉರ್ವಸ್ಟೋರ್‌ನ ಸುಂಕದಕಟ್ಟೆ ನಿವಾಸಿ ಅವಿನಾಶ್ ಯಾನೆ ಅವಿ (23), ಪ್ರಜ್ವಲ್ ಯಾನೆ ಪಚ್ಚು(24), ದೀಕ್ಷಿತ್ ಯಾನೆ ದೀಚು(21), ಹೇಮಂತ್ ಯಾನೆ ಹೋಮು(19), ಧನು(19) ಹಾಗೂ ಯತಿರಾಜ್ ಯಾನೆ ಯತಿ(23) ಬಂಧಿತರು. ಬಂಧಿತರಿಂದ ಮಾರಕಾಸ್ತ್ರ ಹಾಗೂ […]

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಜಾಮೀನು ಅರ್ಜಿ ವಜಾ

Monday, May 24th, 2021
Vinay Kulkarni

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ವಿನಯ್ ಹಾಗೂ ಅವರ ಅಭಿಮಾನಿಗಳಿಗೆ ಹೈಕೋರ್ಟ್, ಜಾಮೀನು ಅರ್ಜಿಯನ್ನೇ ವಜಾಗೊಳಿಸುವ ಮೂಲಕ ಶಾಕ್ ನೀಡಿದೆ. ಹೌದು! ಚಾರ್ಜಶೀಟ್ ಸಲ್ಲಿಕೆಯಾದ ಬಳಿಕ ವಿನಯ್ ಪರ ವಕೀಲರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿ ವಜಾಗೊಂಡ ಬಳಿಕ ಮತ್ತೆ ಬೆಂಗಳೂರಿನ […]

ಕಾಂಗ್ರೆಸ್ ಮುಖಂಡನನ್ನ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ

Saturday, March 20th, 2021
Amzad

ಚಿಕ್ಕಬಳ್ಳಾಪುರ:  ಕಾಂಗ್ರೆಸ್ ಮುಖಂಡನನ್ನ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಶನಿವಾರ ನಡೆದಿದೆ. ಕೊಲೆಯಾದ ಕಾಂಗ್ರೆಸ್ ಮುಖಂಡ ಅಮಜದ್ (43) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಅಮಜದ್ ನನ್ನು ಒಮ್ನಿ ಕಾರಿನ ಮೂಲಕ ಹಿಂಬಾಲಿಸಿ ಬಂದ ಅಪರಿಚಿತರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಅಮಜದ್ ಮಿನಲ್ ಹಿನ್ನೆಲೆ ಹೊಂದಿದ್ದವನಾಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದ. ಶಿಡ್ಲಘಟ್ಟ ನಗರ ಪೊಲೀಸರು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆಯ ಉದ್ದೇಶ ತಿಳಿದುಬಂದಿಲ್ಲ. ಹಾಡಹಗಲೇ […]

ಡಿವೈಎಫ್ಐ ಕಾರ್ಯಕರ್ತನ ಕೊಲೆ ಕ್ರತ್ಯ ಖಂಡಿಸಿ ಪ್ರತಿಭಟನೆ

Saturday, December 26th, 2020
dyfi

ಮಂಜೇಶ್ವರ : ಕಾಞಂಗಾಡ್ ನ ಡಿವೈಎಫ್ಐ  ಕಾರ್ಯಕರ್ತ ಕಾಂ. ಅಬ್ದುಲ್ ರೆಹಮಾನ್ ರವರನ್ನು ಕೊಲೆ ಮಾಡಿದ ಮುಸ್ಲಿಂ ಲೀಗ್ ಗೂಂಡಾಗಳ ದುಷ್ಕ್ರತ್ಯವನ್ನು ಖಂಡಿಸಿ ಡಿವೈಎಫ್ಐ  ಕೊಡ್ಲಮೊಗರು ವಿಲ್ಲೇಜ್ ಸಮಿತಿಯ ನೇತ್ರತ್ವದಲ್ಲಿ ಬಾಕ್ರಬೈಲ್ ಜಂಕ್ಷನ್ ನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಮುಸ್ಲಿಂ ಲೀಗ್ ನ ಕೊಲೆ ರಾಜಕೀಯದ ವಿರುದ್ದ ಆವೇಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೇರಳದ ಜನತೆ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರೂ,CPIM ನಾಯಕರಾದ ಮೊಯಿದಿನ್ ಕುಂಞ […]

ರೌಡಿಶೀಟರ್ ಇಂದ್ರಜಿತ್ ಕೊಲೆ, ಎಂಟು ಮಂದಿ ಪೊಲೀಸರ ವಶಕ್ಕೆ

Friday, November 27th, 2020
Indrajeet

ಮಂಗಳೂರು : ರೌಡಿಶೀಟರ್ ಇಂದ್ರಜಿತ್‌ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕುದ್ರೋಳಿ ಕರ್ನಲ್ ಗಾರ್ಡನ್ ಬಳಿ ಬುಧವಾರ ತಡರಾತ್ರಿ ರೌಡಿಶೀಟರ್ ಇಂದ್ರಜಿತ್ (28) ಕೊಲೆಯಾಗಿತ್ತು. ಸ್ನೇಹಿತನೊಬ್ಬನ ವಿವಾಹದ ಮೆಹಂದಿ ಕಾರ್ಯಕ್ರಮಕ್ಕೆಂದು ಇಂದ್ರಜಿತ್ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಹೋಗಿದ್ದು, ಅಲ್ಲಿಂದ ಮರಳಿ ಬರುವ ಸಂದರ್ಭ ಕಾದು ಕುಳಿತಿದ್ದ ಹಂತಕರು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಬರ್ಕೆ ಪೊಲೀಸರು […]

ಸುರೇಂದ್ರ ಬಂಟ್ವಾಳ್ ಕೊಲೆ ಆರೋಪಿ ಸತೀಶ್ ಕುಲಾಲ್ ಮತ್ತು ಇನ್ನೊಬ್ಬ ಸಹಚರನ ಬಂಧನ

Sunday, October 25th, 2020
Surendra Bantwal

ಬಂಟ್ವಾಳ : ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ.20ರಂದು ರಾತ್ರಿ ಸುರೇಂದ್ರ ಬಂಟ್ವಾಳ್ ನನ್ನು ಬಿ.ಸಿ.ರೋಡಿನ ಪ್ಲ್ಯಾಟ್ ನಲ್ಲಿ ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಗಳಾದ ಸುರೇಂದ್ರನ ಆಪ್ತ ಸ್ನೇಹಿತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಮತ್ತು ಕಿನ್ನಿಗೋಳಿ ನಿವಾಸಿ ಗಿರೀಶ್ ಯಾನೆ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ […]