ಮಾಂಸದ ಕೋಳಿ ಗಳ ಸಾಕಾಣಿಕೆಯಲ್ಲಿ ಮುನ್ನೆಚ್ಚರಿಕೆ ಕ್ರಮ

Tuesday, March 12th, 2024
poultry-farm

ಮಂಗಳೂರು : ಕೋಳಿ ಮನೆಗಳಲ್ಲಿ ದಿನದ 24 ಗಂಟೆಗಳ ಕಾಲ ತಂಪಾದ ಮತ್ತು ಶುಚಿಯಾದ ನೀರನ್ನು ಒದಗಿಸಬೇಕು. ಒಂದು ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪಬಹುದು. ಚೆನ್ನಾಗಿ ಗಾಳಿಯಾಡಲು ಅನುಕೂಲವಾಗುವಂತೆ ಎಲ್ಲಾ ತಡೆಗಳನ್ನು ತೆಗೆಯಬೇಕು. ಕೋಳಿ ಮನೆ ಮಾಡಿನ ಮೇಲ್ಭಾಗಕ್ಕೆ ಸುಣ್ಣ ಬಳಿಯಬೇಕು ಆಥವಾ ಹುಲ್ಲು ಅಡಿಕೆಗರಿ, ತೆಂಗಿನ ಗರಿಗಳಿಂದ ಹೊದಿಸಬೇಕು. ಅನುಕೂಲವಿದ್ದರೆ ಕೋಳಿ ಮನೆಯ ಮಾಡಿನ ಮೇಲೆ ಸ್ಪ್ರಿಂಕ್ಲರ್‍ನಿಂದ ನೀರು ಸಿಂಪಡಿಸಬೇಕು. ಕೋಳಿ ಮನೆಯ ಒಳಗೆ ಫ್ಯಾನ್ ಅಥವಾ ಫಾಗರ್ಸ್‍ಗಳನ್ನು ಅಳವಡಿಸಬೇಕು. ವಿಟಮಿನ್ ಸಿ ಮತ್ತು […]

ಕೊಣಾಜೆ ನಡುಪದವಿನಲ್ಲಿ ಚಿರತೆ ಹಿಡಿಯಲು ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

Saturday, October 7th, 2023
konaje- leopard

ಕೊಣಾಜೆ: ನಡುಪದವು ಬಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ‌ ಸಿಬ್ಬಂದಿ ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ್ದಾರೆ. ಕೊಣಾಜೆ ನಡುಪದವಿನಲ್ಲಿ ಗುರುವಾರ ರಾತ್ರಿ 9.30 ವೇಳೆಗೆ ವಾಕಿಂಗ್ ಹೋಗುತಿದ್ದ ಉಪನ್ಯಾಸಕರೊಬ್ಬರು ಅಲ್ಲೇ ಸಮೀಪದ ಲಾಡ ಬಳಿ ಚಿರತೆಯನ್ನು ನೋಡಿ ಭಯಭೀತಗೊಂಡಿದ್ದರು. ಅಲ್ಲದೆ ಅದೇ ರಾತ್ರಿ ಪರಿಸರದ ಮಹಿಳೆ‌ ಸೇರಿದಂತೆ ಒಟ್ಟು ಐದು ಜನರು ಚಿರತೆಯನ್ನು ನೋಡಿ ಭಯಗೊಂಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹಲವರಿಗೆ ಒಂದೇ […]

ಸರಕಾರೀ ಬಸ್ಸಲ್ಲಿ ಕೋಳಿಗೂ ಟಿಕೆಟ್ ವಿಧಿಸಿದ ಕಂಡಕ್ಟರ್

Wednesday, September 1st, 2021
chicken-ticket

ಚಿಕ್ಕಬಳ್ಳಾಪುರ : ಕೆಎಸ್‌ಆರ್‌ಟಿಸಿ ಬಸ್‌ನ ಕಂಡಕ್ಟರ್ ಪ್ರಯಾಣಿಕರೊಬ್ಬರು ಕೋಂಡೊಯ್ಯುತ್ತಿದ್ದ ಕೋಳಿಗೂ ಟಿಕೆಟ್ ವಿಧಿಸಿದರು. ಪ್ರಯಾಣಿಕರಿಗೆ ಅನ್ವಯವಾಗುವ ದರವನ್ನು ಕೋಳಿಗೂ ವಿಧಿಸಿದರು. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕರೊಬ್ಬರು ಗುರೇಬಂಡೆ ತಾಲೂಕಿನ ಸೋಮೇಶ್ವರಕ್ಕೆ ಪೆರೇಸಂದ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೋಗುತ್ತಿದ್ದರು. ಅವನ ಕೈಯಲ್ಲಿ ಸ್ಥಳೀಯ ತಳಿಯ ಕೋಳಿ ಕೂಡ ಇತ್ತು. ಕೋಳಿಗೆ ಸಂಬಂಧಿಸಿದಂತೆ ಕಂಡಕ್ಟರ್ ಐದು ರೂಪಾಯಿ ಟಿಕೆಟ್ ನೀಡಿದರು. ಟಿಕೆಟ್ ಪಡೆದ ಮಾಲೀಕರು ಕೋಳಿ ಯನ್ನು ಸೀಟಿನ ಮೇಲೆ ಕೂರಿಸಿದರು. ಆ ಸೀಟನ್ನು ಬಿಟ್ಟು […]

ಕೋಳಿ ಇನ್ನಿತರ ವಸ್ತು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ – ಭಯಭೀತರಾದ ಜನ

Saturday, June 26th, 2021
black magic

ಚಿಕ್ಕಮಗಳೂರು: ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ, ತೆಂಗಿನಕಾಯಿ, ಅರಿಶಿನ-ಕುಂಕುಮ, ಮೂರು ತರದ ದಾರ, ಬಳೆ, ತಲೆಗೂದಲು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ ಮಾಡಿರುವ ಘಟನೆ  ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ರಂಗನೇಹಳ್ಳಿ ಗ್ರಾಮದಲ್ಲಿ ನಡೆದಿದೆ. ರಂಗೇನಹಳ್ಳಿ ಗ್ರಾಮದಿಂದ ಬರಗೇನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಈ ವಾಮಾಚಾರ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗುವ ರೈತರು ಇದನ್ನ ಕಂಡು ಕಂಗಾಲಾಗಿದ್ದಾರೆ. ವಾಮಾಚಾರ ನಡೆಸಿದ ದುಷ್ಕರ್ಮಿಗಳು ವಾಮಾಚಾರದ ಬಳಿಕ ವಿವಿಧ ವಸ್ತುಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ನೇರ […]

ಉಡುಪಿ : ಹುಂಜದ ಜೊತೆ ನವಿಲಿನ ಫೈಟ್ ಸಖತ್ ವೈರಲ್

Thursday, July 23rd, 2020
peacock

ಉಡುಪಿ : ಕುಂದಾಪುರದಲ್ಲಿ ವ್ಯಕ್ತಿಯೊಬ್ಬರ‌ ಮನೆ‌ ಮುಂದೆ ನವಿಲು-ಕೋಳಿ ಕಾಳಗ ನಡೆದಿದ್ದು, ಸ್ಥಳೀಯರು ಆಶ್ಚರ್ಯಚಕಿತರಾಗಿ ಈ ದೃಶ್ಯವನ್ನುಸೆರೆ ಹಿಡಿದಿದ್ದಾರೆ.  ಟಗರು, ಬುಲ್, ಕೋಳಿ ಕಾಳಗ ಸಾಮಾನ್ಯ. ಆದರೆ ನವಿಲು ಹುಂಜದ ಜೊತೆ ಕಾಳಗ ಮಾಡಿರುವುದು ಅಲ್ಲಿದ್ದವರಿಗೆ ಆಶ್ಚರ್ಯ ಮೂಡಿಸಿದೆ. ಇನ್ನು ವಯ್ಯಾರಕ್ಕೆ ಹೆಸರಾದ ನವಿಲಿನ ಫೈಟ್ ಹುಂಜದ ಜತೆ ಈಗ ವೈರಲ್ ಆಗಿದೆ. ಹೆಣ್ಣುಕೋಳಿ ಸುತ್ತ ಗಿರಕಿ ಹೊಡೆಯುತ್ತಿದ್ದ ಹುಂಜಕ್ಕೂ ಬೋರ್ ಆಗಿರಬೇಕು. ಮತ್ತೊಂದು ಹುಂಜದ ಜೊತೆಗೆ ಫೈಟ್ ಮಾಡೋದನ್ನ ಬಿಟ್ಟು ನವಿಲಿನ ವಿರುದ್ಧ ಕಾದಟಕ್ಕಿಳಿದಿತ್ತು. ಮಳೆ ಬಂದ್ರೆ […]

ತಲೆ ಇಲ್ಲದೇ ಒಂದು ವಾರದಿಂದ ಬದುಕುತ್ತಿದೆ ಈ ಕೋಳಿ… ವೈದ್ಯ ಲೋಕಕ್ಕೆ ಅಚ್ಚರಿ!

Friday, March 30th, 2018
thailand

ಥೈಲ್ಯಾಂಡ್‌: ಪ್ರತಿಯೊಂದು ಜೀವಿಗೂ ತಲೆಯೇ ಪ್ರಮುಖ ಅಂಗ. ತಲೆ ಇಲ್ಲದಿದ್ದರೆ ಬದಕುವುದೇ ಅಸಾಧ್ಯ. ಆದ್ರೆ ಇಲ್ಲೊಂದು ಕೋಳಿ ತಲೆ ಇಲ್ಲದೇ ಬದುಕಿದ್ದು, ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ. ಹೌದು, ಥೈಲ್ಯಾಂಡ್‌ನ ರಚ್ಬಾರಿ ಪ್ರಾಂತ್ಯದಲ್ಲಿ ಕೋಳಿಯೊಂದು ತಲೆಯಿಲ್ಲದೇ ಒಂದು ವಾರದಿಂದ ಬದುಕುತ್ತಿದೆ. ವಾರದ ಹಿಂದೆ ಚೆನ್ನಾಗಿಯೇ ಇದ್ದ ಕೋಳಿ, ತನ್ನ ತಲೆಯನ್ನೇ ಹೇಗೋ ಕಳೆದುಕೊಂಡು ಬದುಕುತ್ತಿದೆ. ಇದು ವೈದ್ಯಕೀಯ ಲೋಕವನ್ನೇ ತಲೆಕೆಳಗೆ ಮಾಡುವಂತೆ ಮಾಡಿದೆ. ಇನ್ನು ಪ್ರಾಣಿ ವೈದ್ಯ ಸುಪಕಡೀ ಅರುಣ್ ತೋಂಗ್ ಎಂಬುವರು ತಲೆ ಕಳೆದುಕೊಂಡಿರುವ ಕೋಳಿಯನ್ನು […]