ಕೋವಿಡ್ ಸೂಪರ್ ವಾರಿಯರ್; ಮೆರಿಲ್ ರೇಗೋ

Tuesday, June 15th, 2021
Meril-Rego

ಮಂಗಳೂರು  : ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ‌ ನೇತೃತ್ವದಲ್ಲಿ ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾದವರಿಗೆ ಸಹಾಯ ಹಾಗೂ ಕೋವಿಡ್ ರೋಗಿಗಳಿಗೆ ನೆರವು ನಿರಂತರವಾಗಿ ನೀಡಲಾಗುತ್ತಿದೆ‌. ಲಾಕ್‌ಡೌನ್ ಆರಂಭದಲ್ಲಿ ಪ್ರಾರಂಭಿಸಿದ ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಾಶ್ರಿತರಿಗೆ ಹಾಗೂ ಸರಕು ಸಾಗಾಣಿಕೆಯ ವಾಹನ ಚಾಲಕರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯ ಪ್ರತಿದಿನ ನಿರಂತರವಾಗಿ ನಡೆಯುತ್ತಿದೆ. ದಿನಂಪ್ರತಿ 400-500ರಷ್ಟು ಜನರಿಗೆ ಊಟವನ್ನು ವಿತರಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. ಇತ್ತೀಚೆಗೆ ಮಾಜಿ ಪ್ರಧಾನಿ […]

ಕೋವಿಡ್ ರೋಗಿಯ ಮೃತದೇಹ ಇಟ್ಟು 5.23 ಲಕ್ಷ ರೂ. ಬಿಲ್ ಕೇಳಿದ ಮಂಗಳೂರಿನ ಇಂದಿರಾ ಆಸ್ಪತ್ರೆ

Tuesday, May 18th, 2021
indira-hospital

ಮಂಗಳೂರು : ಕೋವಿಡ್ ನಂತಹ ಮಾರಣಾಂತಿಕ ಸಾಂಕ್ರಾಮಿಕ ರೋಗಬಂದಾಗಲೂ ಬಡವರಿಂದ ಕಿತ್ತು ತಿನ್ನುವ ಆಸ್ಪತೆಗಳು ನಮ್ಮ ನಗರದಲ್ಲಿ ತಲೆ ಎತ್ತಿವೆ.  ಸಾಂಕ್ರಾಮಿಕ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಬೇಕಾದ ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುವ ದೈತ್ಯ ಲೂಟಿಕೋರ ಕೇಂದ್ರಗಳಾಗಿ ಬೆಳೆದಿವೆ. ಈ ಸುಲಿಗೆ ಕೋರರನ್ನು ಕೇಳುವವರೇ ಇಲ್ಲ. ಜನ ಲಾಕ್ ಡೌನ್ ನಿಂದ ಊಟಕ್ಕೂ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಇವರಿಗೆ ಬಡವರ ಹೆಣವನ್ನಿಟ್ಟು ವ್ಯಾಪಾರ ಮಾಡುವುದೇ ಕಾಯಕ. ನಗರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್ ರೋಗಿಯ ಮೃತದೇಹ ಬಿಟ್ಟು ಕೊಡಲು 5.23 […]

ವೆನ್ ಲಾಕ್ ಆಸ್ಪತ್ರೆಯ 5 ಕೋವಿಡ್ ರೋಗಿಗಳು ಗುಣಮುಖರಾಗಿ ಬಿಡುಗಡೆ

Saturday, May 23rd, 2020
Covid-discharge

ಮಂಗಳೂರು: ವೆನ್ ಲಾಕ್ ಕೋವಿಡ್ ಆಸ್ಪತ್ರೆಯಿಂದ ಐವರು ಸೋಂಕಿತರು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ. ಬಂಟ್ವಾಳದ ಮೂವರು ಮತ್ತು ಮಂಗಳೂರೂ ಬೊಳೂರಿನ ಇಬ್ಬರು ಸೋಂಕಿತ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಮೂವರು ಬಂಟ್ವಾಳದ ಸೋಂಕಿತರು ಬಿಡುಗಡೆಯಾಗಿದ್ದಾರೆ.  ಇವರಲ್ಲಿ ದೃಷ್ಟಿ ಕಳೆದುಕೊಂಡ ಹಿರಿಯರೊಬ್ಬರೂ ಇದ್ದಾರೆ. ಈ ಮೂಲಕ ಜಿಲ್ಲೆಯ ಅತೀ ದೊಡ್ಡ ಕೋವಿಡ್-19 ಹಾಟ್ ಸ್ಪಾಟ್ ಆಗಿದ್ದ ಬಂಟ್ವಾಳ ಈಗ ಸೋಂಕು ಮುಕ್ತವಾಗಿದೆ. ದ.ಕ‌ ಜಿಲ್ಲಾಡಳಿತವು ಇಂದು ಡಿಸ್ಚಾರ್ಜ್ ಆದ ರೋಗಿಗಳನ್ನು ಬೀಳ್ಕೊಟ್ಟಿದೆ ಸದ್ಯ ಮಂಗಳೂರು ಕೋವಿಡ್ ಆಸ್ಪತ್ರೆ ಯಲ್ಲಿ […]