ವಿವಾಹ ವಿಚ್ಛೇದನ ಕೋರಿ ನಟಿ ಪ್ರೇಮಾ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ
Saturday, March 5th, 2016ಬೆಂಗಳೂರು : ನಟಿ ಪ್ರೇಮಾ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಬುಧವಾರ(ಮಾರ್ಚ್ 02) ಅರ್ಜಿ ಸಲ್ಲಿಸಿದ್ದಾರೆ. ಕೊಡಗು ಮೂಲದ ಪ್ರೇಮಾ ಅವರು 2006ರಲ್ಲಿ ತಮ್ಮ ಸಮುದಾಯದವರೇ ಆದ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವರಿಸಿದ್ದರು. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಸವ್ಯಸಾಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮಾಧುರಿ ಪಾತ್ರದ ಮೂಲಕ ಮನೆ ಮಾತಾದರು. ನಮ್ಮೂರ ಮಂದಾರ ಹೂವೇ,ಯಜಮಾನ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. […]