ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

Saturday, October 26th, 2019
chandamaarutha

ಮಂಗಳೂರು : ಕ್ಯಾರ್ ಚಂಡಮಾರುತ ಪರಿಣಾಮ, ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡು ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಇನ್ನೊಂದೆಡೆ ಶುಕ್ರವಾರ ದಿನವಿಡೀ ಸುರಿದ ಭಾರಿ ಗಾಳಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಅರಬ್ಬಿ ಸಮುದ್ರದಲ್ಲಿ ನಿರ್ಮಾಣವಾಗಿದ್ದ ವಾಯುಭಾರ ಕುಸಿತ ಶುಕ್ರವಾರ ಮುಂಜಾನೆ 5.30ರ ವೇಳೆಗೆ ಚಂಡಮಾರುತವಾಗಿ ಪರಿತರ್ವನೆಗೊಂಡು ಉತ್ತರಕ್ಕೆ ಸಂಚರಿಸಿದೆ. ಮಧ್ಯಾಹ್ನ 2.30ರ ವೇಳೆಗೆ 16.2ಡಿಗ್ರಿ ಉತ್ತರ ಅಕ್ಷಾಂಶ ಮತ್ತು 71.7ಡಿಗ್ರಿ ಪೂರ್ವ ರೇಖಾಂಶದಲ್ಲಿ ಪೂರ್ವ ಮಧ್ಯ ಸಮುದ್ರಲ್ಲಿ ಕೇಂದೀಕೃತವಾಗಿತ್ತು. ಪ್ರಸ್ತತ ಒಮಾನ್ ತೀರದಿಂದ 1880 ಕಿ.ಮೀ.ದೂರದಲ್ಲಿದ್ದು, ಪ್ರತಿ […]

‘ಕ್ಯಾರ್’ ಚಂಡಮಾರುತ ಭೀತಿ : ಇಂದು ಕರಾವಳಿಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

Friday, October 25th, 2019
cyar

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ‘ಕ್ಯಾರ್’ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದ್ದು, ಮುಂದಿನ 48 ಗಂಟೆ ಕಾಲ ಭಾರಿ ಮಳೆ ಕರಾವಳಿಯನ್ನು ಅಪ್ಪಳಿಸುವ ಮುನ್ಸೂಚನೆ ದೊರೆತಿದೆ. ಗುರುವಾರ 15.4 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 70.4 ಡಿಗ್ರಿ ಪೂರ್ವ ರೇಖಾಂಶದಲ್ಲಿ ವಾಯುಭಾರ ಕುಸಿತ ಪ್ರದೇಶವಿದ್ದು ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿ.ಮೀ. ಪಶ್ಚಿಮ-ನೈಋತ್ಯ ಮತ್ತು 490 ಕಿ.ಮೀ. ನೈಋತ್ಯ ಹಾಗೂ ಓಮನ್‌ನ ಸಲಾಹ್‌ನಿಂದ 1750 ಕಿ.ಮೀ. ಪೂರ್ವ-ಆಗ್ನೇಯ ದಿಕ್ಕಿನಲ್ಲಿ ಕೇಂದ್ರೀಕೃತವಾಗಿದೆ. ಚಂಡಮಾರುತ ಅ.25ರಂದು ಸಾಯಂಕಾಲದ ವರೆಗೆ ಪೂರ್ವ-ಈಶಾನ್ಯದತ್ತ […]