ಕ್ಷೇತ್ರ ಐತಿಹ್ಯಗಳು ಇಂದಿನ ಪೀಳಿಗೆಗೆ ಪೂರಕ ಮಾಹಿತಿ- ಡಾ.ಡಿ.ವೀರೇಂದ್ರ ಹೆಗ್ಗಡೆ

Tuesday, August 2nd, 2016
Heggade

ಬದಿಯಡ್ಕ: ಕ್ಷೇತ್ರ ಇತಿಹಾಸವನ್ನು ವಿವರಿಸುವ ಐತಿಹ್ಯ ಪುಸ್ತಕಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದು ಇದನ್ನು ಸಂಗ್ರಹಿಸಿ ಸಮಾಜದ ಮುಂದಿಡುವ ಹಿರಿಯರಾದ ಲೇಖಕ ಕೇಳುಮಾಸ್ತರ್ ಅಗಲ್ಪಾಡಿಯವರ ಕಾರ್ಯ ಶ್ಲಾಘನೀಯವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು. ಅವರು ಕೇಳು ಮಾಸ್ತರ್ ಅಗಲ್ಪಾಡಿ ರಚಿಸಿದ ಪರಶ್ಯಿನಿಕಡವು ಕ್ಷೇತ್ರದ ಐತಿಹ್ಯ ಹಾಗೂ ಅನುಷ್ಠಾನ ಕ್ರಮಗಳನ್ನೊಳಗೊಂಡ ಶ್ರೀಮುತ್ತಪ್ಪನ್ ಎಂಬ ಪುಸ್ತಕವನ್ನು ಶ್ರೀಕ್ಷೇತ್ರದಲ್ಲಿ ಅವಲೋಕನ ನಡೆಸಿ ಈ ಮಾತುಗಳನ್ನಾಡಿದರು. ವರ್ತಮಾನ ಕಾಲದಲ್ಲಿ ಜಾತಿ,ಮತ,ಪಂಥಗಳ ಸೀಮೋಲ್ಲಂಘನೆ ಮಾಡಿದ ಶ್ರೀಮುತ್ತಪ್ಪನ್ ದೈವದ ಕಾರಣೀಕತೆ ಹಾಗೂ ಉತ್ತರ ಕೇರಳದ […]

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80 ಕಿಲೋ ಗಾಂಜಾ ವಶಕ್ಕೆ

Tuesday, February 16th, 2016
Duster Ganja

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80ಕಿಲೋ ಗಾಂಜಾವನ್ನು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಓಡಿ ಪರಾರಿಯಾಗಿದ್ದಾರೆ. ಸೋಮವಾರ ಸಂಜೆ 3 ಘಂಟೆ ಸಮಾರಿಗೆ ಕುಂಜತ್ತೂರು ತೂಮಿನಾಡು ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಸಂಶಯಗೊಂಡ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸುವ ವೇಳೆ ಪೋಲೀಸರು ಬೆನ್ನಟ್ಟಿದ ವೇಳೆ ಕಾರನ್ನು ನಿಲ್ಲಿಸಿ ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಎಲ್ 14- […]