ಮಂಗಳೂರಿನಲ್ಲಿ 13 ಮಂದಿಯಲ್ಲಿ ಕೋವಿಡ್ ಸೋಂಕು
Friday, December 29th, 2023ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶುಕ್ರವಾರ 348 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 13 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ 25 ಸಕ್ರಿಯ ಪ್ರಕರಣದ ವರದಿ ಪ್ರಕಟವಾಗಿದೆ. ಪಾಸಿಟಿವ್‌ಗೊಳಗಾದ 13 ಮಂದಿಯ ಪೈಕಿ ಒಬ್ಬರು ನಗರದ ಖಾಸಗಿ ಆಸ್ಪತ್ರೆ ಮತ್ತು 12 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಆರು ಮಂದಿ ಮಹಿಳೆಯರು ಮತ್ತು ಏಳು ಮಂದಿ ಪುರುಷರಿದ್ದಾರೆ. 27ರಿಂದ 84 ವರ್ಷ ಪ್ರಾಯದವರೂ ಇದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.