Blog Archive

ಗಾಂಜಾ ಹೊಂದಿದ್ದ ಆರೋಪಿಗಳಿಬ್ಬರ ಸೆರೆ

Friday, July 20th, 2018
ganja-case

ಮಂಗಳೂರು: ಗಾಂಜಾವನ್ನು ಹೊಂದಿದ್ದ ಆರೋಪಿಗಳಿಬ್ಬರನ್ನು ಮಂಗಳೂರು ಹೊರವಲಯದ ಅಲೈಗುಡ್ಡೆ ಎಂಬಲ್ಲಿ ಬಜ್ಪೆ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ರಾಜಾಜಿನಗರದ ರವಿ ಅಲಿಯಾಸ್ ಟಿಕ್ಕಿರವಿ(34) ಮತ್ತು ಗುರುಪುರ ಅಲೈಗುಡ್ಡೆ ಗುರುನಗರ ನಿವಾಸಿ ಸಂದೀಪ್ (32) ಬಂಧಿತ ಆರೋಪಿಗಳು. ಬಂಧಿತರಿಂದ 5500 ರೂ. ಮೌಲ್ಯದ 55 ಗ್ರಾಂ ಗಾಂಜಾ, ಆಲ್ಟೋಕಾರು ಮತ್ತು ಹೋಂಡಾ ಆ್ಯಕ್ಟಿವಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಬಜಪೆ ಠಾಣಾ ನಿರೀಕ್ಷಕ ಪರಶಿವಮೂರ್ತಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು […]

2 ಕೆ.ಜಿ. ಗಾಂಜಾದೊಂದಿಗೆ ಮಾರಾಟಗಾರನ ಬಂಧನ

Monday, February 12th, 2018
Ganja

ಮಂಗಳೂರು : ನೆತ್ತಿಲಪದವು ಎಂಬಲ್ಲಿ ಕೊಣಾಜೆ ಠಾಣೆ ಪೊಲೀಸರು ಹಾಗೂ ರೌಡಿ ನಿಗ್ರಹ ದಳದವರು ಗಾಂಜಾ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ನೆತ್ತಿಲಪದವು ನಿವಾಸಿ ಅಬ್ದುಲ್ ನಿಸಾರ್ ಬಂಧಿತ ಆರೋಪಿ. ಈತ ಕೋಲಾರದಿಂದ ಗಾಂಜಾವನ್ನು ಖರೀದಿಸಿ ಮಂಜೇಶ್ವರ ಉಪ್ಪಳ ಕಡೆಗಳಲ್ಲಿ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನೆತ್ತಿಲಪದವು ಎಂಬಲ್ಲಿಂದ ಬಂಧಿಸಿದ ಪೊಲೀಸರು ಆತನಿಂದ 2 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಂಗಳೂರು ಪೊಲೀಸರಿಂದ ಅಂತಾರಾಜ್ಯ ಗಾಂಜಾ ಕಿಂಗ್ ಪಿನ್ ಬಂಧನ

Thursday, January 25th, 2018
ganja-case

ಮಂಗಳೂರು: ನಗರಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಬೃಹತ್ ಅಂತಾರಾಜ್ಯ ಗಾಂಜಾ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಗಾಂಜಾ ಕಿಂಗ್ ಪಿನ್ ಎಂದೇ ಗುರುತಿಸಲಾಗುವ ಸಲೀಂ ಬಾಷಾ ಎಂಬವನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಮಂಗಳೂರು ಹೊರವಲಯದ ತಲಪಾಡಿಯ ತೌಡುಗೋಳಿಯಲ್ಲಿ ದಾಳಿ ನಡೆಸಿದ್ದ ರೌಡಿ ನಿಗ್ರಹ ದಳದ ಪೊಲೀಸರು ಮಹಮ್ಮದ್ ಅಝೀಝ್ ಎಂಬವರನ್ನು ಬಂಧಿಸಿ ಆತನಿಂದ 10 ಕಿಲೋ ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಬಂಧಿತ ಮಹಮ್ಮದ್ ಅಝೀಝ್ ನನ್ನು ತನಿಖೆಗೆ ಒಳ ಪಡಿಸಿದ ಸಂದರ್ಭದಲ್ಲಿ ಆಂಧ್ರದ ಚಿತ್ತೂರಿನ ಪನಮ್ನೇರು ಎಂಬಲ್ಲಿಂದ […]

ಕೇರಳ – ಕರ್ನಾಟಕ ಗಡಿಯಲ್ಲಿ ಬೃಹತ್ ಗಾಂಜಾ ಜಾಲ ಪತ್ತೆ

Thursday, January 18th, 2018
ganjaa

ಮಂಗಳೂರು: ಕರ್ನಾಟಕ – ಕೇರಳ ಗಡಿ ಪ್ರದೇಶ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಬಂಟ್ವಾಳ ತೌಡುಗೋಳಿ ನರಿಂಗಾನದ ಮಹಮ್ಮದ್ ಅಜೀಜ್ ಯಾನೆ ಅಬ್ದುಲ್ ಅಜೀಜ್ (34), ತಲಪಾಡಿ ಮುಳ್ಳುಗುಡ್ಡೆಯ ಮಹ್ಮಮದ್ ಇಮ್ತಿಯಾಜ್ (26) ಪರಾರಿಯಾಗಿದ್ದಾರೆ. ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ನೆತ್ತಿಲಪದವು ಎಂಬಲ್ಲಿ ಮಹಮ್ಮದ್ ಅಜೀಜ್ ಮತ್ತು ಇಮ್ತಿಯಾಜ್ ಆ್ಯಕ್ಟೀವಾ ಸ್ಕೂಟರ್‌ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ […]

ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Tuesday, November 21st, 2017
Ganja

ಮಂಗಳೂರು: ಮಂಜೇಶ್ವರ ಹಾಗೂ ಉಪ್ಪಳದಿಂದ ಗಾಂಜಾ ಸಾಗಿಸಿ ಕೊಣಾಜೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಮಾಡದ ಅಬ್ದುಲ್ ಖಾದರ್ ಹಾಗೂ ಅಬ್ದುಲ್ ರೆಹಮಾನ್ ಕಡಂಬಾರ್ ಬಂಧಿತರು. ಅವರಿಂದ 13 ಸಾವಿರ ರೂ. ಮೌಲ್ಯದ 650 ಗ್ರಾಂ ತೂಕದ 9 ಪ್ಯಾಕೆಟ್ ಗಾಂಜಾ, ಮೊಬೈಲ್ ಫೋನ್, ರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್ ಪಿಎಸ್‌ಐ ರವಿ ಪವಾರ್, ಎಎಸ್ಐ ಸಂಜೀವ, ಪೇದೆಗಳಾದ ನಾಗರಾಜ್, ಅಶೋಕ್, ಪ್ರದೀಪ್ ಅವರನ್ನೊಳಗೊಂಡ […]

ಗಾಂಜಾ ಮಾರಾಟ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

Monday, October 23rd, 2017
ganja

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಗರದ ನೀರುಮಾರ್ಗ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗ ಎಂಬಲ್ಲಿ ಒಳಬೈಲು ಬಳಿಯ ಕರಾವಳಿ ಇನ್ಸಿಟ್ಯೂಟ್ ಆಫ್ ಟೆಕ್ನೋಲಾಜಿ ಕಾಲೇಜು ಎದುರುಗಡೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವ್ಯಕ್ತಿಯಬ್ಬ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳಿಯ ನಿವಾಸಿ ಮೊಹಮ್ಮದ್ ರಿಯಾಸ್ ಎಂಬವರನ್ನು […]

ಗಾಂಜಾ ಸಾಗಾಟದ ಆರೋಪ, ವ್ಯಕ್ತಿಯ ಬಂಧನ

Saturday, October 21st, 2017
ganja

ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಾಟದ ಆರೋಪದಲ್ಲಿ ದುಬೈಗೆ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರದ ಅಭಿಲಾಷ್ ಪ್ರದೀಪ್ ಸುವರ್ಣ (20) ಎಂದು ಗುರುತಿಸಲಾಗಿದೆ. ತಪಾಸಣೆ ವೇಳೆ ಸುಮಾರು ಲಕ್ಷ ರೂ. ಮೌಲ್ಯದ 4 ಕೆ. ಜಿ. ಗಾಂಜಾ ಪತ್ತೆಯಾಗಿದೆ. ಈತ ಮಂಗಳೂರಿನಿಂದ ದುಬೈಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದ. ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದ್ದರಿಂದ ದುಬೈಗೆ ಹೋಗುವ ಬದಲು ಜೈಲಿಗೆ ಹೋಗುವಂತಾಗಿದೆ. ಪ್ರಕರಣವನ್ನು ಬಜ್ಪೆ ಪೊಲೀಸರಿಗ […]

ಬಜ್ಜೋಡಿ: ಗಾಂಜಾ ಸೇವನೆ,ಯುವಕರು ಪೊಲೀಸ್ ವಶಕ್ಕೆ

Thursday, October 19th, 2017
ganja

ಮಂಗಳೂರು:  ಸಿಸಿಬಿ ಪೊಲೀಸರು ಬಜ್ಜೋಡಿ ಎರಡನೇ ಅಡ್ಡರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ  ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉರ್ವ ಹ್ಯೊಗೆಬೈಲಿನ ಆಲ್ವಿನ್ ಕ್ಲಿಂಟನ್ (24), ಬಿಕರ್ನಕಟ್ಟೆಯ ಅಜೇಯ್ ಸೆಬಾಸ್ಟಿಯನ್ ಲೋಬೊ (24), ಬಜ್ಜೋಡಿಯ ಜೋಯೆಲ್ ಫರ್ನಾಂಡಿಸ್ (27), ಪಡೀಲ್ನ ಆದಿತ್ಯ (18), ಪಡೀಲ್ ಅಳಪೆಯ ದೇವರಾಜ್ (21), ಮೂಡುಶೆಡ್ಡೆಯ ಅಕ್ಷಯ್ ಸಾಲಿಯಾನ್ (21) ಹಾಗೂ ಎಂ.ಜಿ. ರಸ್ತೆಯ ಅಮೋಘ್ ಹೆಗ್ಡೆ (27) ಬಂಧಿತರು. ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುನೀಲ್ ನಾಯಕ್ ಹಾಗೂ ಅವರ ತಂಡ ಬಜ್ಜೋಡಿಯಲ್ಲಿ ಗಾಂಜಾ […]

ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ, ಬಸ್‌‌‌ ಕಂಡಕ್ಟರ್‌ ಪೊಲೀಸ್ ವಶ

Wednesday, October 18th, 2017
ganja

ಮಂಗಳೂರು:  ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡಸಿ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ. ಮೊಹಮ್ಮದ್ ಇಝುದ್ದಿನ್ (32) ಬಂಧಿತ ಆರೋಪಿ. ಕಂಕನಾಡಿ ನಗರ ವ್ಯಾಪ್ತಿಯ ಪಂಪ್ವೆಲ್ ವೃತ್ತ ಬಳಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ವೃತ್ತಿಯಲ್ಲಿ ಬಸ್ ನಿರ್ವಾಹಕನಾಗಿರುವ ಬಂಟ್ವಾಳ ಅಮ್ಮುಂಜೆಯ ಮೊಹಮ್ಮದ್ ಇಝುದ್ದಿನ್‌ನನ್ನು ವಶಕ್ಕೆ ಪಡೆದುಕೊಂಡು ಆತನಿಂದ 200 ಗ್ರಾಂ ಗಾಂಜಾ ಹಾಗೂ ಮೊಬೈಲ್ […]

ಗಾಂಜಾ ಹಣದಿಂದ ಕಾಂಗ್ರೆಸ್‌ ಸಚಿವರು ಬದುಕು :ನಳಿನ್ ಕುಮಾರ್ ಕಟೀಲ್

Friday, October 6th, 2017
naleen kumar kateel

ಮಂಗಳೂರು: ಜಿಲ್ಲೆಯ ಗಾಂಜಾ ಮಾಫಿಯಾ, ಕಾಂಗ್ರೆಸ್‌ನ ಸಚಿವರು, ಮುಖಂಡರ ನಿಯಂತ್ರಣಕ್ಕೊಳಪಟ್ಟಿದೆ. ಅದರಿಂದ ಬಂದ ಹಣದಿಂದ ಸಚಿವರು ಬದುಕು ಕಟ್ಟುತ್ತಿದ್ದಾರೆ. ಇಲ್ಲವಾಗಿದ್ದಲ್ಲಿ ಜಿಲ್ಲೆಯಲ್ಲಿ ಈ ಮಾಫಿಯಾವನ್ನು ನಿಯಂತ್ರಿಸಬಹುದಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಈ ಗಂಭೀರ ಆರೋಪ ಮಾಡಿದರು.. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಗಾಂಜಾ ಪ್ರಕರಣಗಳು ಹೆಚ್ಚುತ್ತಾ ಸಾಗುತ್ತಿವೆ. ಆರಂಭದಲ್ಲಿಯೇ ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಪಡೆಯೊಂದನ್ನು […]