ದೀಪಾವಳಿಯ ಸಡಗರದೊಂದಿಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ
Thursday, October 19th, 2017ಮಂಗಳೂರು: ಕೌಶಲ್ಯವೊಂದಿದ್ದರೆ ಸಾಕು ಎಂತಹ ಅಪೂರ್ವ ಕಲಾಕೃತಿಗಳನ್ನು ಬೇಕಾದರೂ ಸೃಷ್ಟಿಬಹುದು.ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಆವರಣ ದೀಪಾವಳಿಯ ಸಡಗರದೊಂದಿಗೆ ಇಂತಹ ಸೃಜನಶೀಲತೆಗೆ ಸಾಕ್ಷಿಯಾಯಿತು.ದೀಪಾವಳಿ ಸಂದರ್ಭ ಕಂಗೊಳಿಸುವ ಗೂಡುದೀಪಗಳೆಂದರೆ ಬೆಳಕು. ಕತ್ತಲಾಗುತ್ತಿದ್ದಂತೆ ಝಗಮಗಿಸುವ ಬೆಳಕಿನಲ್ಲಿ ಸಾಲು ಸಾಲು ಗೂಡುದೀಪಗಳು ಕಂಗೊಳಿಸಿದವು. ಹದಿನೆಂಟು ವರ್ಷಗಳಿಂದ ಆಯೋಜಿಸುತ್ತಿರುವ ಗೂಡುದೀಪ ಪಂಥದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಕಲಾಕಾರರು ಚೆಲುವಿನ ಲೋಕವನ್ನೇ ಸೃಷ್ಟಿಸಿದ್ದರು. ಬಳಸಿ ಬಳಸಿ ಹಳಸಾಗಿರುವ ವಸ್ತುಗಳು ಕೂಡಾ ಇಲ್ಲಿ ಜೀವ ಪಡೆಯುತ್ತವೆ. ಹುಲ್ಲು ಕಡ್ಡಿಗಳು, ದವಸ ಧಾನ್ಯಗಳು, ಚೂರು ಬಟ್ಟೆಗಳು, ಸೋಡಾ […]