ಉಗ್ರರ ಪರ ಗೋಡೆ ಬರಹ ಬರೆದ ಇಬ್ಬರು ಆರೋಪಿಗಳ ಬಂಧನ

Saturday, December 5th, 2020
vikasa kumar

ಮಂಗಳೂರು: ಬಿಜೈ ಮತ್ತು  ಕೋರ್ಟ್ ಆವರಣದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ  ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಮೂಲದ ಮುಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಬಂಧಿತ ಆರೋಪಿಗಳು. ಪ್ರಚಾರ ಪಡೆಯುವ ಉದ್ದೇಶದಿಂದ ವಿವಾದಿತ ಪ್ರಚೋದನಕಾರಿ ಗೋಡೆ ಬರಹವನ್ನು ಬರೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಬಳಿಕ ಪೊಲೀಸ್ ವಶಕ್ಕೆ ನೀಡಲಾಗುತ್ತದೆ. ಆ ಬಳಿಕ […]

ಗೋಡೆ ಬರಹ ಬರೆದ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಬೇರೆ ದೇಶಕ್ಕೆ ಬಿಟ್ಟು ಬರಬೇಕು : ಯು.ಟಿ. ಖಾದರ್

Sunday, November 29th, 2020
UT Khader

ಮಂಗಳೂರು: ಉಗ್ರರಿಗೆ ಬೆಂಬಲವಾಗಿ ಗೋಡೆ ಮೇಲೆ ಬರೆದ ಆರೋಪಿಗಳು  ಯಾರೆ ಇರಲಿ ಅಂತಹ ದೇಶ ದ್ರೋಹಿಗಳನ್ನು 15 ದಿನದೊಳಗೆ ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ‌ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಉಗ್ರರ ಪರ ಗೋಡೆ ಬರಹ ಬರೆಯುವವರ ಹಿಂದೆ ಯಾರಿದ್ದಾರೆ ಎಂದು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕಾದದ್ದು ಬಿಜೆಪಿ ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಈ ರೀತಿ ಬರೆದವರು ಯಾರೆ ಇರಲಿ ಅಂತಹ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಅವರನ್ನು […]