ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ : ಗೋಣಿಕೊಪ್ಪದಲ್ಲಿ ಪ್ರತಿಭಟನೆ

Friday, February 28th, 2020
goni-koppa-protest

ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ಕಡಿತಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೋಣಿಕೊಪ್ಪ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಬಾಳೆಲೆ, ಶ್ರೀಮಂಗಲ, ಹುದಿಕೇರಿ ಹಾಗೂ ಪೊನ್ನಂಪೇಟೆ ಹೋಬಳಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಬೆಳೆಗಾರರು, ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ಇಲಾಖಾ ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದರು. ಗೋಣಿಕೊಪ್ಪ, ಪೊನ್ನಂಪೇಟೆ ಮುಖ್ಯ ರಸ್ತೆತಡೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಚೆಸ್ಕಾಂನ […]

ಗೋಣಿಕೊಪ್ಪದಲ್ಲಿ ’ಬಾವ ಬಟ್ಟೆಲ್’ ಕೊಡವ ಕಿರುಚಿತ್ರ ಪ್ರದರ್ಶನ

Thursday, January 30th, 2020
film

ಮಡಿಕೇರಿ : ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯನ್ನು ಪ್ರತಿಬಿಂಬಿಸುವ ಕೊಡವ ಕಿರುಚಿತ್ರ ’ಬಾವ ಬಟ್ಟೆಲ್’ ಗೋಣಿಕೊಪ್ಪದಲ್ಲಿ ತೆರೆ ಕಂಡಿತು. ’ಸ್ಪೈಸ್ ರ‍್ಯಾಕ್’ ಸಭಾಂಗಣದಲ್ಲಿ ಪ್ರೀಮಿಯರ್ ಶೋ ನಡೆಯಿತು. ಕಿರುಚಿತ್ರವು 34 ನಿಮಿಷಗಳ ಅವಧಿಯದ್ದಾಗಿದ್ದು, 2ಹಾಡುಗಳನ್ನು ಒಳಗೊಂಡಿದೆ. ’ಬಾವ ಬಟ್ಟೆಲ್’ ಕೊಡವ ಕಿರುಚಿತ್ರದ ನಿರ್ಮಾಪಕರಾಗಿ ಬೆಂಗಳೂರು ಮತ್ತು ಮೈಸೂರಿನ ಉದ್ಯಮಿ ಮಣವಟ್ಟಿರ ಸಂಗೀತ್ ಈರಪ್ಪ, ನಿರ್ದೇಶಕರಾಗಿ ಮಂಡುವಂಡ ಪ್ರಜ್ವಲ್ ಗಣಪತಿ, ಕಾರ್ಯಕಾರಿ ನಿರ್ಮಾಪಕರಾಗಿ ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ ಹಾಗೂ ಮಾದಪಂಡ ಅಯ್ಯಣ್ಣ ಧರಣಿ ಕಾರ್ಯನಿರ್ವಹಿಸಿದ್ದಾರೆ. […]