ಕಾರ್ಮಿಕ ಇಲಾಖೆಯಿಂದ ನಗರದ ಹಲವೆಡೆ ಅನಿರೀಕ್ಷಿತ ದಾಳಿ

Tuesday, December 15th, 2020
labor department

ಮಂಗಳೂರು : ಕಾರ್ಮಿಕ ಇಲಾಖೆಯಿಂದ ನಗರದ ಅಪಾರ್ಟ್‌ಮೆಂಟ್‌ಗಳು, ಹೊಟೇಲ್, ಗ್ಯಾರೇಜ್‌ಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಅಪಾಯಕಾರಿ ಉದ್ದಿಮೆಗಳಲ್ಲಿ 15ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಾಯ್ದೆ ಉಲ್ಲಂಘಿಸಿದ ಮಾಲಕರಿಗೆ 50,000 ರೂ.ವರೆಗೆ ದಂಡ ಹಾಗೂ ಎರಡು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ತಪ್ಪಿತಸ್ಥ ಮಾಲಕರ ವಿರುದ್ಧ ಎಫ್‌ಐಆರ್ ಸಹ ದಾಖಲಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ಮುಕ್ತವಾಗಿಸಲು ಹಿಂದಿಗಿಂತಲೂ ಹೆಚ್ಚು ಜಾಗರೂಕತೆ ವಹಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ, […]

ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕನ ರಕ್ಷಣೆ

Saturday, January 18th, 2020
balakarmika

ಮಂಗಳೂರು : ಮಂಗಳೂರು ನಗರದ ಪಂಪ್‌ವೆಲ್ ಬಳಿ ಕಾರ್ಯಾಚರಿಸುತ್ತಿರುವ ನ್ಯಾಷನಲ್ ಮಾರುತಿ ಎಕ್ಸೆಲ್ ರೀಕಂಡಿಷನಿಂಗ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 12 ವರ್ಷ ಪ್ರಾಯದ ಬಾಲಕ ಪತ್ತೆಯಾಗಿರುತ್ತಾನೆ. ಅಪ್ರಾಪ್ತ ವಯಸ್ಸಿನ ಬಾಲಕ ಗ್ಯಾರೇಜ್‌ನಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕುರಿತು ಚೈಲ್ಡ್‌ಲೈನ್-1098ಗೆ ದೂರು ಬಂದ ಮಾಹಿತಿಯಂತೆ, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲಾಗಿದ್ದು, ಈ ಬಾಲಕನನ್ನು ಬಿಹಾರದಿಂದ ಕೆಲಸಕ್ಕಾಗಿ ಗ್ಯಾರೇಜ್ ಮಾಲಕರು ಇಲ್ಲಿಗೆ ಕರೆತಂದಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದು, ಇಲ್ಲಿಯ ತನಕ ಶಾಲೆಗೆ ಕೂಡ ಸೇರ್ಪಡೆ ಅಗಿರುವುದಿಲ್ಲ. […]

ಕಣ್ಣೂರಿನ ಗ್ಯಾರೇಜ್ ನಲ್ಲಿ ಗ್ಯಾಸ್ ಸಿಲಿಂಡರ್ ಗೆ ಬೆಂಕಿ, ತಪ್ಪಿದ ಅನಾಹುತ

Tuesday, July 9th, 2013
padil garege

ಮಂಗಳೂರು: ಕಣ್ಣೂರಿನ ಕೊಡಕ್ಕಲ್ ನ ಹಿಂದೂಸ್ತಾನ್ ಅಟೋ ವರ್ಕ್ಸ್ ನಲ್ಲಿ ವೆಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸಿಲಿಂಡರ್ ಗೆ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳದಿದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಕಾರ್ಬೊಹೈಡ್ರೆಡ್ ಗ್ಯಾಸ್ ಇರುವ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡ ಕೂಡಲೇ ಗ್ಯಾರೇಜ್ ಸಿಬ್ಬಂದಿಗಳೇ  ನೀರು ಹಾಕಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ 40 ನಿಮಿಷ ಕಳೆದರೂ ಘಟನಾ ಸ್ಥಳಕ್ಕೆ ಬರಲಿಲ್ಲ ಎಂದು […]