ಚಂಡಮಾರುತದ ಅಬ್ಬರಕ್ಕೆ ಸಿಲುಕಿದ ತೇಲುಜೆಟ್ಟಿಯ ತೆರವುಗೊಳಿಸುವ ಕೆಲಸ ಆರಂಭ, ಪತ್ತೆಯಾಗದ ಮೂವರ ಮೃತದೇಹ

Tuesday, May 18th, 2021
Tug Boat

ಮಂಗಳೂರು: ಶನಿವಾರ ಬೆಳಗ್ಗೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಿದ ಸಿಂಗಲ್‌ ಪಾಯಿಂಟ್‌ ಮೂರಿಂಗ್‌ ತೇಲುಜೆಟ್ಟಿ ತೆರವುಗೊಳಿಸುವ ಪ್ರಯತ್ನಗಳು ಮಂಗಳವಾರ ಆರಂಭಗೊಂಡಿವೆ. ಈ ಅವಘಡದಲ್ಲಿ ಮೂವರು ಬದುಕಿ ಬಂದಿದ್ದರೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರು ನೀರು ಪಾಲಾಗಿದ್ದು ಇದುವರೆಗೆ ಸಿಕ್ಕಿಲ್ಲ. ಅದರ ಮದ್ಯೆ  ಪಡುಬಿದ್ರಿ ಬಳಿ ಕಡಲಲ್ಲಿ ಮಗುಚಿ ಬಿದ್ದ ಟಗ್‌ ಅಲಯನ್ಸ್‌ನ್ನು ತೆರವುಗೊಳಿಸುವ ಪ್ರಯತ್ನಗಳು ಮಂಗಳವಾರ ಆರಂಭಗೊಂಡಿವೆ. ನೌಕೆಯ ಮಾಲೀಕರಾದ ಅಂಡರ್‌ವಾಟರ್‌ ಸರ್ವಿಸಸ್‌ನವರು ಕಾರ್ಯಾಚರಣೆ ನಡೆಸುತ್ತಿದ್ದು ಎಂಆರ್‌ಪಿಎಲ್‌ ಉಸ್ತುವಾರಿ ವಹಿಸಿದೆ. ಸೋಮವಾರ ಪ್ರಯತ್ನಗಳು ನಡೆದರೂ ಹವಾಮಾನ ವೈಪರೀತ್ಯದಿಂದ ಆಗಿರಲಿಲ್ಲ. ಟಗ್‌ನ ಆಂಕರಿಂಗ್‌ ಮಾಡುವ […]

ಎಂಆರ್‌ಪಿಎಲ್‌ಗೆ ಸೇರಿದ್ದ ತೇಲು ಜೆಟ್ಟಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಡೆ, ಇಬ್ಬರು ಮೃತ, ಐವರು ನಾಪತ್ತೆ

Sunday, May 16th, 2021
Tag Boat

ಮಂಗಳೂರು : ಎಂಆರ್‌ಪಿಎಲ್‌ಗೆ ಸೇರಿದ್ದ ತೇಲು ಜೆಟ್ಟಿ (ಸಿಂಗಲ್ ಪಾಯಿಂಟ್ ಮೂರಿಂಗ್-ಎಸ್‌ಪಿಎಂ) ನಿರ್ವಹಣೆ ಮಾಡುವವರ ಟಗ್‌ನೌಕೆ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿ ಇಬ್ಬರು ಮೃತಪಟ್ಟು, ಐವರು ನಾಪತ್ತೆಯಾಗಿದ್ದಾರೆ.  ನಾಪತ್ತೆಯಾಗಿದ್ದ ವರಿಗಾಗಿ ರವಿವಾರವೂ ಶೋಧಕಾರ್ಯ ಮುಂದುವರಿದಿದೆ‌. ಮಂಗಳೂರಿನ ನವಮಂಗಳೂರು ಬಂದರ್‌ನಿಂದ ಸುಮಾರು 17 ನಾಟಿಕಲ್ ಮೈಲ್ ದೂರದಲ್ಲಿ ಅರಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ಬೃಹತ್ ತೈಲ ಹಡಗುಗಳಿಂದ ಈ ನೌಕೆಯ ತೈಲವನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಟಗ್ ಮೂಲಕ ಹೊರಗುತ್ತಿಗೆಯ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  9 ಮಂದಿಯ ತಂಡ […]

ಗಂಟೆಗೆ 90-100 ಕಿ.ಮೀ.ವೇಗದಲ್ಲಿ ಉತ್ತರ ದಿಕ್ಕಿನತ್ತ ಸಂಚರಿಸಲಿರುವ ‘ತೌಕ್ತೇ’ ಚಂಡಮಾರುತ

Saturday, May 15th, 2021
tauktae

ಮಂಗಳೂರು : ‘ತೌಕ್ತೇ’ ಚಂಡಮಾರುತದ ಪರಿಣಾಮವು ಪಶ್ಚಿಮ ಕರಾವಳಿ ತೀರದ ಮೇಲೆ ಉಂಟಾಗಿದ್ದು ಶನಿವಾರದ ಪೂರ್ಣ ಪ್ರಮಾಣದಲ್ಲಿ ತನ್ನ ಆರ್ಭಟ, ಶಕ್ತಿ ತೋರಿಸಿ ಚಲನೆ ಮುಂದುವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಢಿರುವ ಚಂಡಮಾರುತವು ಲಕ್ಷ ದ್ವೀಪವನ್ನು ಕೇಂದ್ರೀಕರಿಸಿದೆ. ಮಧ್ಯಾಹ್ನ ವೇಳೆಗೆ ಕೇರಳದ ಕಣ್ಣೂರಿನಿಂದ 360 ಕಿ.ಮೀ. ಪಶ್ಚಿಮ ಮತ್ತು ನೈರುತ್ಯ ಭಾಗದಲ್ಲಿ ಚಂಡಮಾರುತ ತನ್ನ ಚಲನೆ ಮುಂದುವರಿಸಿದೆ. ಗಂಟೆಗೆ 90-100 ಕಿ.ಮೀ.ವೇಗದಲ್ಲಿ ಉತ್ತರ ದಿಕ್ಕಿನತ್ತ ಸಂಚರಿಸಲಿರುವ ಈ ಚಂಡಮಾರುತ ಮೇ […]

ಚಂಡಮಾರುತ ಪರಿಣಾಮ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ

Wednesday, December 9th, 2020
Mangalore Rain

ಮಂಗಳೂರು : ಆಗ್ನೇಯ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾ ಸಾಗರ ಸಮಭಾಜಕ ವೃತ್ತದ ಬಳಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ.ಎತ್ತರದಲ್ಲಿ ಕೇಂದ್ರೀಕೃತವಾಗಿ ಚಂಡಮಾರುತ  ಉಂಟಾಗಿದ್ದುಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಗುಡುಗು ಸಹಿತ ಭಾರೀ ಗಾಳಿ-ಮಳೆಯಾಗಿದೆ. ಮಂಗಳೂರು, ಬೆಳ್ತಂಗಡಿ, ಕಡಬ, ಸುಳ್ಯ, ಪುತ್ತೂರು ತಾಲೂಕು ಸೇರಿದಂತೆ ಮರ್ಕಂಜ, ಪಂಬೆತ್ತಾಡಿ, ಕಲ್ಮಡ್ಕ, ಪಂಜ, ಕರಿಕಳ, ಎಣ್ಮೂರು ಸಹಿತ ಹಲವೆಡೆ ಮಂಗಳವಾರ ಸಂಜೆ ಭಾರೀ ಮಳೆ ಸುರಿದಿದ್ದು, ಭೂಮಿಗೆ ತಂಪೆರೆದಿದೆ. ಮಂಗಳವಾರ ಸಂಜೆಯಾಗುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆಗೊಂಡು ಜಿಲ್ಲೆಯ ಘಟ್ಟದ ತಪ್ಪಲು […]

ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಮತ್ತೆ ಚಂಡಮಾರುತ ಭೀತಿ

Saturday, September 22nd, 2018
cyclone

ಮಂಗಳೂರು  : ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತ ದುರ್ಬಲಗೊಂಡು ಪಶ್ಚಿಮದಿಂದ ವಾಯುವ್ಯ ದಿಕ್ಕಿನೆಡೆಗೆ ಸಾಗುತ್ತಿರುವಂತೆಯೇ ಅರಬಿ ಸಮುದ್ರದಲ್ಲೂ ಮೇಲ್ಮೆ„ ಸುಳಿಗಾಳಿ ಸೃಷ್ಟಿಯಾಗಿದೆ. ಸಾಂಧ್ರತೆ ಜಾಸ್ತಿಯಾದರೆ ಇದು ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಬಂಗಾಲಕೊಲ್ಲಿಯ ಚಂಡಮಾರುತದಿಂದ ರಾಜ್ಯದ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮಳೆಯ ನಿರೀಕ್ಷೆಯನ್ನು ಮೂಡಿಸಿದೆ. ಅರಬಿ ಸಮುದ್ರದಲ್ಲಿನ ಸುಳಿಗಾಳಿ ತೀವ್ರಗೊಂಡರೆ ಕರಾವಳಿಯಲ್ಲಿ ಉತ್ತಮ […]

ಮಂಗಳೂರು ನಲ್ಲಿ ಗಾಳಿ ಮಳೆ, ರಸ್ತೆಯಲ್ಲಿ ನೀರು, ವಾಹನ ಸಂಚಾರ ಅಸ್ತವ್ಯಸ್ತ..!

Tuesday, May 29th, 2018
rain-mangaluru

ಮಂಗಳೂರು: ಒಂದೆಡೆ ಮುಂಗಾರು ಪ್ರವೇಶದ ಮುನ್ಸೂಚನೆ, ಇನ್ನೊಂದೆಡೆ ಮೆಕ್ನು ಚಂಡಮಾರುತದ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ. ಮಂಗಳವಾರ ಮುಂಜಾನೆಯಿಂದ ಮಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ನಗರದ ಎಂ.ಜಿ.ರಸ್ತೆ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟಾ ಪ್ರದೇಶದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ಆಕಾಶವೇ ತೂತಾದಂತೆ ಕರಾವಳಿಯಲ್ಲಿ […]

‘ಮೆಕುನು’ ಚಂಡಮಾರುತ… ಕರಾವಳಿಯಲ್ಲಿ ಭಾರೀ ಗಾಳಿ, ಮಳೆ ಸಾಧ್ಯತೆ

Thursday, May 24th, 2018
floods

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ‘ಮೆಕುನು’ ಚಂಡಮಾರುತದ ಪರಿಣಾಮ ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಗಾಳಿ, ಮಳೆ ಸಾಧ್ಯತೆಯಿದೆ. ಬಿರುಗಾಳಿ ಜತೆಗೆ ಮಿಂಚು, ಸಿಡಿಲು ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆ ಇದೆ. ಸಮುದ್ರದಲ್ಲೂ ಭಾರೀ ಅಲೆಗಳೇಳುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಬಂದರು ಮತ್ತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.