ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗಲು ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕು: ಜಯಶರ್ಮಿಳಾ

Tuesday, July 19th, 2016
Anniversary

ಉಪ್ಪಳ: ಸರಕಾರ ಇಂದು ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಸ್ಪಷ್ಟ ಅರಿವಿನ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ವಿದ್ಯಾಭ್ಯಾಸದ ಮಟ್ಟ ಮಹಿಳೆಯರಲ್ಲಿ ಸಮಾಧಾನಕರ ಮಟ್ಟದಲ್ಲಿದ್ದರೂ ದೌರ್ಜನ್ಯಗಳಂತಹ ಸಾಮಾಜಿಕ ಪಿಡುಗುಗಳಿಂದ ಮುಕ್ತರಾಗದಿರುವುದು ಖೇದಕರವಾಗಿದ್ದು,ಈ ನಿಟ್ಟಿನಲ್ಲಿ ಒಗ್ಗಟ್ಟಿನೊಂದಿಗೆ ಮಹಿಳೆಯರು ಒಂದಾಗಬೇಕಿದೆಯೆಂದು ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಜಯಶರ್ಮಿಳಾ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ ಕುಬಣೂರಲ್ಲಿ ಕಾರ್ಯಾಚರಿಸುತ್ತಿರುವ ಚಿನ್ಮಯೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವನ್ನು ಕುಬಣೂರು ಶ್ರೀರಾಮ ಎಯುಪಿ ಶಾಲೆಯಲ್ಲಿ ಉದ್ಘಾಟಿಸಿ ಅವರು […]

ಉಪ್ಪಳ ಇಬ್ಬರಿಗೆ ಚೂರಿ ಇರಿತ ; ಒರ್ವನಿಗೆ ಗಂಭೀರ

Saturday, January 30th, 2016
Uppala Stabbing

ಉಪ್ಪಳ : ಉಪ್ಪಳ ಪೇಟೆಯಲ್ಲಿ ಮತ್ತೆ ಗೂಂಡಾ ಆಕ್ರಮಣ ಉಂಟಾಗಿದ್ದು ಇಬ್ಬರನ್ನು ಗೂಂಡಾ ತಂಡವೊಂದು ತಲವಾರಿನಿಂದ ಇರಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಇರಿತದಿಂದ ಗಾಯಗೊಂಡ ತಳಂಗರೆಯ ಆರಿಫ್ ಉಪ್ಪಳ ಪ್ರತಾಪ್ ನಗರದ ಅಬ್ದುಲ್ಲ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ 9 ಘಂಟೆ ಸುಮಾರಿಗೆ ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಉಪ್ಪಳದ ರಮ್ಭಿಝ್ , ಫಾರೂಕ್ ಎಂಬಿಬ್ಬರ ನೇತೃತ್ವದಲ್ಲಿ ತಲುಪಿದ ತಂಡ ತಲವಾರಿನಿಂದ ಇರಿದಿದೆ. ಹಳೆ ವೈಷಮ್ಯವೇ ಇರಿತಕ್ಕೆ […]