ಗಂಭೀರ ಗಾಯಗೊಂಡಿದ್ದ ಛಾಯಾಗ್ರಾಹಕ ಆಸ್ಪತ್ರೆಯಲ್ಲಿ ಸಾವು

Tuesday, July 6th, 2021
Ashok Shetty

ಕುಂದಾಪುರ : ದಾವಣಗೆರೆಯಲ್ಲಿ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರದ ಛಾಯಾಗ್ರಾಹಕ ಗಂಭೀರ ಗಾಯಗೊಂಡಿದ್ದು, ಇಂದು ಬೆಳ್ಳಗ್ಗೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರಗೊಂಡು ಮೃತಪಟ್ಟವರನ್ನು ಕುಂದಾಪುರದ ಹಿರಿಯ ಛಾಯಾಚಿತ್ರಗಾರ, ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆಯ ಮಾಜೀ ಅಧ್ಯಕ್ಷ, ಹಾಲೀ ಸಂಚಾಲಕ ಹೇರೂರು ಅಶೋಕ ಕುಮಾರ್ ಶೆಟ್ಟಿ(58) ಎಂದು ಗುರುತಿಸಲಾಗಿದೆ. ನಾವುಂದದಲ್ಲಿ ಮಾನಸ ಸ್ಟುಡಿಯೋ ಮಾಲಕರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ಎಂಬುವರ […]

ಛಾಯಾಗ್ರಾಹಕ ಧರಣೇಶ್ ಕೊಣಾಜೆ ನಿಧನ

Thursday, December 17th, 2020
dharanesh konaje

ಕೊಣಾಜೆ : ಕೊಣಾಜೆ ನಿವಾಸಿ ಛಾಯಾಗ್ರಾಹಕ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದ ಧರಣೇಶ್ ಅವರು ದೇರಳಕಟ್ಟೆಯಲ್ಲಿ ಫೋಟೋಸ್ಪಾಟ್ ಎಂಬ  ಸ್ಟುಡಿಯೋ ಹೊಂದಿದ್ದರು. ಹೃದಯ ಸಂಬಂಧಿ ತೊಂದರೆಯ ಹಿನ್ನೆಲೆ ಕಾರಣ ಧರಣೇಶ್‌ ಅವರನ್ನು ಕೆಲವು ದಿನಗಳವರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಗಂಜಿಮಠದಲ್ಲಿನ ಎಸ್‌ಟಿಡಿ ಬೂತ್‌‌ವೊಂದರಲ್ಲಿ ಕೆಲಸ ಮಾಡುತ್ತಿದ್ದ  ಧರಣೇಶ್ ಪಕ್ಕದಲ್ಲಿ ಸ್ಟುಡಿಯೋ ದಲ್ಲಿ ಛಾಯಾಗ್ರಹಣ ಕಲಿತರು. ಸಂಬಂಧಿಯೋರ್ವರು ಸಹಕಾರದಿಂದ   ದೇರಳಕಟ್ಟೆಯಲ್ಲಿ ಸ್ಟುಡಿಯೋವನ್ನು ತೆರೆದಿದ್ದರು.  ಧರಣೇಶ್‌  ಉತ್ತಮ  ಛಾಯಾಗ್ರಹಣ […]

ಕಷ್ಟದಲ್ಲಿರುವ ಹುಬ್ಬಳ್ಳಿಯ ಛಾಯಾಗ್ರಾಹಕರಿಗೆ ಧವಸ ಧಾನ್ಯವಿತರಣೆ

Sunday, May 24th, 2020
Hubli Photo

ಹುಬ್ಬಳ್ಳಿ,:  ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ ಸಂಘದ ಆಶ್ರಯದಲ್ಲಿ ಕೊರೋನಾ ವೈರಸ್ ಬಂದಾಗಿಂದ ಹುಬ್ಬಳ್ಳಿಯ ಎಲ್ಲ ಫೋಟೋಗ್ರಾಫರಗಳು ಆರ್ಥಿಕ ಪರಿಸ್ಥಿತಿ ಕೈಕೊಟ್ಟಿದ್ದು ಇದನ್ನು ಅರಿತ ಸಂಘದ ವತಿಯಿಂದ ಈಗಾಗಲೇ ಎರಡು ಬಾರಿ ಧವಸ ಧಾನ್ಯ ಕೊಟ್ಟಿದ್ದು ಈಗ ಇಂದು ಹುಬ್ಬಳ್ಳಿಯ ಪೆಂಡಾರಗಲ್ಲಿ ಯಲ್ಲಿರುವ ಕಿರಣ ಸ್ಟುಡಿಯೋ ದಲ್ಲಿ ಯವ ಕಣ್ಮಣಿ ವಿಧಾನ್ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್ ಎರಡು ನೂರು ಬಡ ಫೋಟೋಗ್ರಾಫರಗಳಿಗೆ ಇಂದು ಫುಡ್ ಪಾಕೆಟ್ ವಿತರಣೆ ಮಾಡಿದರು ಇದಕ್ಕೂ ಮುನ್ನ ಮಾತನಾಡಿದ ಪ್ರದೀಪ್ […]

ಛಾಯಾಗ್ರಾಹಕ ಅಹ್ಮದ್ ಅನ್ವರ್ ನಿಧನ

Monday, December 12th, 2016
Mahammad-anwar

ಮಂಗಳೂರು: ಕವಿ, ಸಾಹಿತಿ, ಪತ್ರಿಕಾ ಛಾಯಾಗ್ರಾಹಕ ಅಹ್ಮದ್ ಅನ್ವರ್ (55) ನಿಧನರಾದರು. ಮೂಲತಃ ಬೆಂಗರೆಯ ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ನೆಲೆಸಿರುವ ಅಹ್ಮದ್ ಅನ್ವರ್, ಕಳೆದ ನಾಲ್ಕೈದು ವರ್ಷದಿಂದ ಅಸೌಖ್ಯದಿಂದಿದ್ದರು. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕವಿ ಹೃದಯದ ಅಹ್ಮದ್ ಅನ್ವರ್ ಅವರು ಜವಳಿ ವ್ಯಾಪಾರಿಯಾಗಿ ವೃತ್ತಿ ಆರಂಭಿಸಿದ್ದರು. ಆ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಕರ್ಷಿತರಾಗಿ, ಫೋಟೋಗ್ರಾಫರಾಗಿ ಗಮನ ಸೆಳೆದಿದ್ದರು. ಕತೆ, ಕವನ, ಲೇಖನ ನಿರಂತರವಾಗಿ ಬರೆಯುತ್ತಿದ್ದರು. […]