ಪಿಲಿಕುಳ ಮೃಗಾಲಯಕ್ಕೆ ಬಂದ ಬರಿಂಕ, ದೊಡ್ಡ ಬೆಳ್ಳಕ್ಕಿ ಮತ್ತು ನೀರಕ್ಕಿ

Saturday, November 13th, 2021
Neerakki

ಗುರುಪುರ : ಪಿಲಿಕುಳ ಮೃಗಾಲಯಕ್ಕೆ ವಿನಿಮಯದ ಮೂಲಕ ಹೈದರಾಬಾದ್ ಮೃಗಾಲಯದಿಂದ 4 ಬರಿಂಕ(ಮೌಸ್ ಡೀರ್), 6 ದೊಡ್ಡ ಬೆಳ್ಳಕ್ಕಿ(ಲಾರ್ಜ್ ಇಗ್ರೆಟ್) ಮತ್ತು 2 ನೀರಕ್ಕಿ(ಗ್ರೇ ಪೆಲಿಕಾನ್)  ಗಳನ್ನು ತೋರಿಸಲಾಗಿದೆ. ವನ್ಯಜೀವಿ ವಿನಿಮಯ ಕಾರ್ಯಕ್ರಮದಡಿ ಇಲ್ಲಿಗೆ ಈ ಪ್ರಾಣಿ-ಪಕ್ಷಿ ಆಮದು ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರತಿಯಾಗಿ ಇಲ್ಲಿಂದ ಹೈದರಾಬಾದ್ ಮೃಗಾಲಯಕ್ಕೆ 4 ಕಾಡು ನಾಯಿ(ದೋಳ್), ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು ಮತ್ತು 4 ವಿಟೆಕರ್ಸ್ ಹಾವು ರಫ್ತು ಮಾಡಲಾಗಿದೆ. ಪ್ರವಾಸಿಗರು ಹೊಸ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಬಹುದು ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ […]

ಪಿಲಿಕುಳದ ಮೃಗಾಲಯದಲ್ಲಿ ಹಾವು ಸೇರಿ ಆರು ಪ್ರಾಣಿ ಪಕ್ಷಿಗಳ ಸಂತಾನಾಭಿವೃದ್ಧಿ

Sunday, June 6th, 2021
Rani Huli

ಮಂಗಳೂರು : ಪಿಲಿಕುಳದ ಮೃಗಾಲಯದಲ್ಲಿ ರಾಣಿ ಹುಲಿ, ಕಾಡುಶ್ವಾನ ‘ದೋಳ್‌’ , ‘ರಿಯಾ’ ಪಕ್ಷಿ, ‘ಲಟಿಕ್ಯುಲೇಟಿಡ್‌’ ಹೆಬ್ಬಾವು, ಕಾಳಿಂಗ ಸರ್ಪ ಇವು ಸಂತಾನಾಭಿವೃದ್ದಿಯನ್ನು ಮಾಡಿದೆ  ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿಯವರು ತಿಳಿಸಿದ್ದಾರೆ. ಪಿಲಿಕುಳ ಮೃಗಾಲದಲ್ಲಿರುವ 10 ವರ್ಷ ಪ್ರಾಯದ ‘ರಾಣಿ’ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಹಿಂದೆ 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿದ್ದು, ಅದು ಈಗ ಬೆಳೆದು ದೊಡ್ಡದಾಗಿವೆ. ಈಗ ಜನಿಸಿದ ಮರಿಗಳು ಆರೋಗ್ಯವಾಗಿದ್ದು […]