ಅನಿಲ ಟ್ಯಾಂಕರುಗಳು ರಾತ್ರಿ ಸಂಚರಿಸುವಂತಿಲ್ಲ, ನಿಗಾಕ್ಕೆ ಜಿಲ್ಲಾಧಿಕಾರಿ ಸೂಚನೆ

Monday, February 14th, 2022
LPG

ಮಂಗಳೂರು :- ನಿಗದಿ ಪಡಿಸಿರುವ (ಹಗಲು) ವೇಳೆಯಲ್ಲಿಯೇ ಅನಿಲ ಟ್ಯಾಂಕರುಗಳು ಸಂಚರಿಸುವ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು. ಅವರು ಫೆ.14ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯನ್ನು ಹಾದೂಹೋಗುವ ಹೆದ್ದಾರಿಗಳಲ್ಲಿ ಗ್ಯಾಸ್ ಟ್ಯಾಂಕರುಗಳ ಅಸುರಕ್ಷಿತ ಚಾಲನೆ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ, ಅಲ್ಲದೇ ಅದು ಸಾರ್ವಜನಿಕರ ಸುಗಮ ಸಂಚಾರಕ್ಕೂ ಅನಾನುಕೂಲವಾಗುತ್ತದೆ, ಒಂದು ವೇಳೆ […]

ಮನೆಯ ಎದುರು ನೇತಾಡುತ್ತಿದ್ದ ದೊಡ್ಡ ಬಲೂನು ನೋಡಿ ಹೆದರಿದ ಮನೆಯವರು

Saturday, November 16th, 2019
baloon

ಕಾರ್ಕಳ :  ಬೆಳ್ಮಣ್ ಮನೆಯ ತೋಟದಲ್ಲಿ ಬಿಳಿ ಬಣ್ಣದ ದೊಡ್ಡ ಬಲೂನು ನೇತಾಡುತ್ತಿತ್ತು ಇದನ್ನು ನೋಡಿ ಕಂಗಾಲದ ಮನೆಯವರು ಬಾಂಬ್ ಇರಬಹುದು ಎಂದು ಭಯಪಟ್ಟು ಏಕಾಏಕಿ ಪೊಲೀಸರಿಗೆ ಪೋನಾಯಿಸಿದರು. ಕಾರ್ಕಳ ತಾಲೂಕಿನ ಬೋಳ ಗ್ರಾಮದ ನಿವಾಸಿ ಕಿಶೋರ್ ಮೂಲ್ಯ ಅವರ ಮನೆಯಲ್ಲಿ ಈ ತರಹದ ನಿಗೂಢ ವಸ್ತುವೊಂದು ಶನಿವಾರ ಬೆಳಗ್ಗೆ ಗೋಚರಿತ್ತು. ಮನೆಯವರ ಗಾಬರಿ ಕರೆಗೆ ಪೊಲೀಸರು, ಗ್ರಾಮ ಕರಣಿಕ ಸೇರಿ ಹಲವರು ಬಂದಿದ್ದರು. ಪೊಲೀಸರು  ಪರಿಶೀಲಿಸಿದಾಗ “ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ” ಎಂದು ತಿಳಿದುಬಂತು. […]

ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದರೆ ಅಂತಹವರ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು: ಜಗದೀಶ್

Monday, October 3rd, 2016
jagadeesh

ಮಂಗಳೂರು: ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದರೆ ಅಂತಹವರ ಪರವಾನಗಿಯನ್ನು ಅಮಾನತುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಮರಳುಗಾರಿಕೆಗೆ ಮತ್ತೆ ಅನುಮತಿ ನೀಡಿದ್ದಾರೆಂಬ ಶಂಕೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಿದ ಅವರು, ಪರವಾನಗಿ ನಿಯಮದಂತೆ ಮರಳುಗಾರಿಕೆ ನಡೆಸುವ ಬಗ್ಗೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೆ. ಆಗ ಕೆಲವು ಮಂದಿ ನಿಯಮದಲ್ಲಿ ವಿನಾಯ್ತಿ ನೀಡುವಂತೆ ಆಗ್ರಹಿಸಿದ್ದರು. ಆದರೆ ಅದಕ್ಕೆ ಒಪ್ಪದ ಕಾರಣ, ಎಲ್ಲ ಷರತ್ತುಗಳಿಗೆ ಬದ್ಧವಾಗಿರುತ್ತೇವೆ ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಷರತ್ತು ಮೀರದಂತೆ ಮರಳುಗಾರಿಕೆ ನಡೆಸುವಂತೆ ಸೂಚಿಸಲಾಗಿದೆ ಎಂದು […]