Blog Archive

ಈ ಸಮ್ಮಿಶ್ರ ಸರ್ಕಾರ ನೀರಿನ ಮೇಲಿನ ಗುಳ್ಳೆಯಂತೆ: ಜಗದೀಶ್ ಶೆಟ್ಟರ್

Monday, September 17th, 2018
jagadish-shetter

ಹುಬ್ಬಳ್ಳಿ: ಈ ಸಮ್ಮಿಶ್ರ ಸರ್ಕಾರ ನೀರಿನ ಮೇಲಿನ ಗುಳ್ಳೆಯಂತೆ. ಹಾಗಾಗಿ ಇದು ಯಾವಾಗ ಬೇಕಾದರೂ ಒಡೆಯಬಹುದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮ ‌ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಜನಾದೇಶದ ವಿರುದ್ಧ ಇರುವ ಸರ್ಕಾರ‌. ಅಧಿಕಾರದ ಹಪಾಹಪಿಯಿಂದ ಸಮ್ಮಿಶ್ರ ಸರ್ಕಾರ ಬಂದಿದೆ. ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಗುದ್ದಾಟ ನಡೆಸಿದ್ದಾರೆ. ಅವರ ನಡುವೆ ಒಳಬೇಗುದಿ ಇದೆ. ಜೆಡಿಎಸ್ ಜೊತೆ ಮೈತ್ರಿ‌ ಮಾಡಿಕೊಂಡು ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದರು. ಸಿಎಂ ಕಿಂಗ್ ಪಿನ್ […]

ನಗರ ಸ್ಥಳೀಯ ಚುನಾವಣಾ: ಯಾವುದೇ ಪಕ್ಷಕ್ಕೆ ಜನರ ಸ್ಪಷ್ಟ ಬಹುಮತ ಇಲ್ಲ

Monday, September 3rd, 2018
local-fights

ಬೆಂಗಳೂರು: ಮಿನಿ ಸಮರ ಎಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಚುನಾವಣಾ ಫಲಿತಾಂಶ ಬಹುತೇಕ ಅಂತಿಮವಾಗಿದ್ದು ಯಾವುದೇ ಪಕ್ಷಕ್ಕೆ ಜನರು ಸ್ಪಷ್ಟ ಬಹುಮತ ಕೊಟ್ಟಿಲ್ಲ. ಹೆಚ್ಚಿನ ಕಡೆ ಅತಂತ್ರ ಫಲಿತಾಂಶ ಬಂದಿದೆ. 102 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮಹಾನಗರ ಪಾಲಿಕೆ ಒಟ್ಟು – 135 ಕಾಂಗ್ರೆಸ್ – 36 ಬಿಜೆಪಿ – 54 ಜೆಡಿಎಸ್ – 30 ಇತರರು – 15 ಪಟ್ಟಣ ಪಂಚಾಯತಿ ಒಟ್ಟು ಸ್ಥಾನ – […]

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ: ಮಂಜುನಾಥ್ ಗೌಡ

Saturday, August 18th, 2018
shivmogga

ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ ಎಂದು ಜೆಡಿಎಸ್ನ ನೂತನ ಜಿಲ್ಲಾಧ್ಯಕ್ಷ ಡಾ.ಆರ್.ಎಂ. ಮಂಜುನಾಥ್ ಗೌಡ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇಲ್ಲಿ ಜೆಡಿಎಸ್ಗೆ ಉತ್ತಮ ಭವಿಷ್ಯವಿದೆ. ಈ ಹಿಂದೆ ಪಕ್ಷವನ್ನು ಬಿಟ್ಟು ಹೋದವರನ್ನು ಮತ್ತೆ ಕರೆತಂದು ಪಕ್ಷ ಕಟ್ಟುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು. ಜೆ.ಹೆಚ್. ಪಟೇಲರ ಕಾಲದಲ್ಲಿ ಜನತಾ ಪಕ್ಷ ನಗರ ಸಭೆ ಹಾಗೂ ಜಿ.ಪಂ.ಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಈಗಲೂ ಕೂಡ ಜಿ.ಪಂ. ಹಾಗೂ ಮಹಾನಗರ ಪಾಲಿಕೆ ಜೆಡಿಎಸ್ […]

ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿದೆ, ಸರ್ಕಾರಕ್ಕೆ ತೊಂದರೆ ಇಲ್ಲ: ದಿನೇಶ್ ಗುಂಡೂರಾವ್

Friday, August 10th, 2018
dinesh-gundo-rao

ಬೆಂಗಳೂರು: ಅನೈತಿಕ ಮೈತ್ರಿ ಎಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಯು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನದ ಭಾಗವಾಗಿದೆ. ಅವರು ಏನೇ ತಿಪ್ಪರಲಾಗ ಹಾಕಿದರೂ ಚಿಂತೆಯಿಲ್ಲ ಜೆಡಿಎಸ್ ನವರು ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಸರ್ಕಾರಕ್ಕೆ ತೊಂದರೆಯಿಲ್ಲ, ಹೀಗಾಗಿ ಸುಸೂತ್ರವಾಗಿ ಆಡಳಿತ ನಡೆಯಲಿದೆ‌ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಅನಗತ್ಯವಾಗಿ ಬಿಜೆಪಿ ನಾಯಕ ಈಶ್ವರಪ್ಪ ಮೈತ್ರಿ ಸರ್ಕಾರವನ್ನು ಅಪವಿತ್ರ, ಅನೈತಿಕ ಹೊಂದಾಣಿಕೆ ಮಾಡಿಕೊಂಡಿದೆ, ಹೆಚ್ಚು ದಿನ ಇರುವುದಿಲ್ಲವೆಂಬ ಕೆಲಸಕ್ಕೆ ಬಾರದ ಹೇಳಿಕೆ ನೀಡುತ್ತಿದ್ದಾರೆ. ಅವರು ಬೇಕಾದರೆ […]

26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

Tuesday, July 31st, 2018
Incharge

ಬೆಂಗಳೂರು :  ಕಾಂಗ್ರೆಸ್ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಖಾತೆ ಹಂಚಿಕೆ ಬಳಿಕ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮತ್ತು ಸಚಿವ ಸ್ಥಾನ ಪಡೆದುಕೊಂಡ ಸಚಿವರಲ್ಲೂ ಹಲವರು ಗೊಂದಲ ಹೊಂದಿದ್ದರಿಂದ ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವನ್ನು ಮುಂದೂಡುತ್ತಾ ಬಂದಿದ್ದರು. ಇಂದು ಸಂಜೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ, ಪಟ್ಟಿ […]

ಓಟ್ ಹಾಕುವಾಗ ಕುಮಾರಸ್ವಾಮಿ ಯಾಕೆ ನೆನಪಿಗೆ ಬರಲಿಲ್ಲ: ಎಚ್‌ಡಿ ಕುಮಾರಸ್ವಾಮಿ

Tuesday, July 24th, 2018
kumarswamy

ರಾಮನಗರ: ಸಂಪೂರ್ಣ ಸಾಲಮನ್ನಾ ವಿಚಾರವಾಗಿ ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ವಿರುದ್ಧ ಸಿಎಂ ಎಚ್‌ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದು, ಸಂಪೂರ್ಣ ಸಾಲ ಮನ್ನಾಗೆ ಬೇಡಿಕೆಯಿಡುವವರಿಗೆ ಓಟ್ ಹಾಕುವಾಗ ಕುಮಾರಸ್ವಾಮಿ ಯಾಕೆ ನೆನಪಿಗೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು ಸಾಲ ಮನ್ನಾ ಮಾಡಿ ಅಂತ ರಸ್ತೆಯಲ್ಲಿ ಕೂರುವವರು ಅಂದು ಜಾತಿಭ್ರಮೆ ಬಿಟ್ಟು, ಹಣದ ವ್ಯಾಮೋಹ ಬಿಟ್ಟು, ಓಟು ಹಾಕಿದ್ರೆ ಇಂದು […]

ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌: ಎಚ್‌.ಡಿ. ಕುಮಾರಸ್ವಾಮಿ

Monday, July 23rd, 2018
kumarswamy

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಸೋಮವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡಲಾಗುತ್ತದೆ, ಖಾಸಗಿ ಶಾಲೆ ಮಕ್ಕಳು 50 ರಿಂದ 1 ಲಕ್ಷ ರೂ. ನೀಡಿ ಶಾಲೆಗೆ ಹೋಗುತ್ತಾರೆ ಅವರಿಗೆ ಬಸ್‌ಚಾರ್ಜ್‌ ನೀಡುವುದು ಕಷ್ಟವಾಗುವುದಿಲ್ಲ ಎಂದು ಸ್ವಲ್ಪ ಖಾರವಾಗಿಯೇ ನುಡಿದಿದ್ದಾರೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡುವಂತೆ ಹಲವು ದಿನಗಳಿಂದ […]

ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ..!

Wednesday, July 18th, 2018
congress

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಕೊಳ್ಳಲು ನಿರ್ಧರಿಸಿವೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದ್ದು, 8 ಸ್ಥಾನಗಳು ಜೆಡಿಎಸ್ ಪಾಲಿಗೆ ಸಿಗಲಿವೆ ಎನ್ನುವ ಎಕ್ಸ್ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ದೋಸ್ತಿ ಪಕ್ಷಗಳು ಮುಂಬರುವ ಲೋಕಸಭಾ ಚುಮಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮಣಿಸಲು ನಿರ್ಧರಿಸಿವೆ. ಇದಕ್ಕೆ ಪೂರಕ ಎನ್ನುವಂತೆ ಸ್ಥಾನಗಳ ಹಂಚಿಕೆ ಕಾರ್ಯದ ಮೊದಲ ಸುತ್ತಿನ ಮಾತುಕತೆಯನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ […]

ನಾನಲ್ಲ, ನನ್ನ ಹೆಣವೂ ಸಹ ಬಿಜೆಪಿ ಹತ್ತಿರ ಸುಳಿಯುವುದಿಲ್ಲ: ಡಾ. ಹೆಚ್. ಸಿ. ಮಹದೇವಪ್ಪ

Thursday, July 12th, 2018
mahadevappa

ಮೈಸೂರು: ನಾನಲ್ಲ, ಹೆಣವೂ ಸಹ ಬಿಜೆಪಿ ಹತ್ತಿರ ಸುಳಿಯುವುದಿಲ್ಲ. ಕೋಮುವಾದಿಗಳಿಂದ ನಾನು ಎಂದಿಗೂ ದೂರ ಎಂದು ಮಾಜಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವವರು ಬಿಜೆಪಿಗೆ ಹೋಗುತ್ತಾರೆ ಎಂಬ ಪಿತೂರಿ ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ‌ ಮಾತನಾಡುತ್ತೇನೆ ಎಂದ ಅವರು ಚುನಾವಣೆ ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು ಎಂದು ಬೇಸರ ಹೊರಹಾಕಿದರು. ದೇಹದ ಅಂಗಾಂಗ ಪುನಶ್ಚೇತಕ್ಕೆ‌ ಒಂದೂವರೆ ತಿಂಗಳಾಯಿತು. […]

ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ..ಜೆಡಿಎಸ್ ಮುಖಂಡನ ಮನೆಯ ಮೇಲೆ ದಾಳಿ!

Thursday, July 12th, 2018
JDS-Party

ಮಂಗಳೂರು: ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು  ಪೊಲೀಸರ ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದ ಜೆಡಿಎಸ್ ಮುಖಂಡನೋರ್ವನ ಮನೆಯ ಮೇಲೆ ಬುಧವಾರ ದಾಳಿ ಮಾಡಿದ್ದಾರೆ. ಜೆಡಿಎಸ್ ಮುಖಂಡ ತನ್ನ  ಮನೆಯಲ್ಲಿ ಫ್ರಾನ್ಸಿಸ್ ಪ್ರಶಾಂತ್ ಒಳಮೊಗರು ಎಂಬ ಆಪರೇಟರ್ನನ್ನು ಬಳಸಿಕೊಂಡು ಆಧಾರ್ ತಿದ್ದುಪಡಿ ಮಾಡುತ್ತಿರುವುದು ಕಂಡುಬಂದಿದೆ. ಪ್ರಶಾಂತ್ ಆಧಾರ್ ಕಾರ್ಡ್ ನೋಂದಣಿ ಮಾಡುವ ಬಗ್ಗೆ ತರಬೇತಿ ಪಡೆದಿದ್ದ ಎನ್ನಲಾಗಿದೆ. ದಾಳಿ ವೇಳೆ ಪತ್ತೆಯಾದ ಆಧಾರ್ ತಿದ್ದುಪಡಿಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದ.ಕ. ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ […]