ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್‌‌ ಎಸ್‌ಐಗೆ ಅವಾಜ್‌ ಹಾಕಿದ ಮಹಿಳೆ

Saturday, May 1st, 2021
woman

ಉಡುಪಿ : ಮಹಿಳೆಯೊಬ್ಬರು ಕಾರು ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್‌‌ ಎಸ್‌ಐಗೆ ಅವಾಜ್‌ ಹಾಕಿರುವ ಘಟನೆ ಉಡುಪಿಯ ಕ್ಲಾಕ್‌ ಟವರ್‌ ಬಳಿ ನಡೆದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ತಡೆದ ಟ್ರಾಫಿಕ್‌ ಎಸ್‌ಐ, ಕಾರನ್ನು ಬದಿಗೆ ನಿಲ್ಲಿಸಿ ಮಾತನಾಡಲು ಸೂಚಿಸಿದ್ದಾರೆ. ಅಲ್ಲದೇ ಮಾಡಿದ ತಪ್ಪಿಗೆ ದಂಡ ಕಟ್ಟಲು ಹೇಳಿದ್ದು, ಈ ವೇಳೆ ಮಹಿಳೆ, “ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ” ಎಂದು ಹೇಳಿದ್ದಾಳೆ. ಕೊರೊನಾ ಎಮರ್ಜೆನ್ಸ್‌ ಲಾಕ್‌ಡೌನ್‌ ಸಂದರ್ಭ ಅನಗತ್ಯವಾಗಿ ತಿರುಗಾಡುತ್ತಾ, ರಸ್ತೆ ನಿಯಮವನ್ನು ಉಲ್ಲಂಘಿಸಿದರೆ ಸುಮ್ಮನಿರುವುದಿಲ್ಲ” […]

ಆ್ಯಂಬುಲೆನ್ಸ್​ಗಾಗಿ ರಸ್ತೆಗಿಳಿದು ಟ್ರಾಫಿಕ್​ ಕ್ಲಿಯರ್​ ​ಮಾಡಿದ ಯು ಟಿ ಖಾದರ್

Friday, October 18th, 2019
UT-Khader

ಮಂಗಳೂರು : ಮಂಗಳೂರು ನಗರದಲ್ಲಿ ನಿನ್ನೆ ಅ.17 ಸಂಜೆ ಸುರಿದ ಮಳೆಗೆ ಪಂಪ್‌ವೆಲ್ ಬಳಿ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಡುವಂತೆ ಮಾಜಿ ಸಚಿವ ಯು ಟಿ ಖಾದರ್ ವಾಹನ ಸವಾರರಿಗೆ ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಳೆಯಿಂದ ನಗರದ ಪಂಪ್ವೆಲ್ ವೃತ್ತ್ತದಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಈ ಸಂದರ್ಭ ವಾಹನ ಸಂದನಿಯ ನಡುವೆ ಆಂಬ್ಯುಲೆನ್ಸ್ ಒಂದು ಸಿಕ್ಕಿಕೊಂಡಿತ್ತು. ಈ ಸಂದರ್ಭ ಈ ರಸ್ತೆ ಮೂಲಕ ಸಂಚರಿಸುತ್ತಿದ್ದ ಶಾಸಕ ಯು.ಟಿ. ಖಾದರ್ ತಮ್ಮ ಕಾರಿನಿಂದ ಇಳಿದು […]

ಸರ್ಕಾರದ ಆದೇಶ ಕೈ ಸೇರುವವರೆಗೂ ದುಬಾರಿ ದಂಡ ಮುಂದುವರಿಕೆ : ಭಾಸ್ಕರ್ ರಾವ್

Saturday, September 14th, 2019
baskar-rao

ಬೆಂಗಳೂರು : ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೂ ದುಬಾರಿ ದಂಡ ಮುಂದುವರೆಸಲಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಳೆ ದಂಡವನ್ನೇ ವಿಧಿಸುವಂತೆ ರಾಜ್ಯ ಸರ್ಕಾರ ಹೇಳಿದೆ ಎನ್ನುವ ವಿಚಾರ ಇದೆ ಆದರೆ ಅಧಿಕೃತವಾಗಿ ಆದೇಶ ನಮಗೆ ಬಂದಿಲ್ಲ ಹಾಗಾಗಿ ಅಲ್ಲಿಯವರೆಗೂ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಪ್ರಕಾರ ಪರಿಷ್ಕೃತವಾಗಿರುವ ದಂಡವನ್ನೇ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡ ವಾಹನ ಸವಾರರಿಗೆ ಹೊರೆಯಾಗಿದೆ ಎನ್ನುವ […]

ಮಂಗಳೂರು : ಹೊಸ ಟ್ರಾಫಿಕ್ ನಿಯಮ ಪಾಲನೆಗೆ ಡಾ.ಪಿ ಎಸ್ ಹರ್ಷ ಸೂಚನೆ

Friday, September 6th, 2019
trafic

ಮಂಗಳೂರು : ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಲ್ಲೂ ತಿದ್ದುಪಡಿ ಮಾಡಿ ಜಾರಿ ಮಾಡಲಾಗಿತ್ತು. ಇದೀಗ ಸೆ.3ರಿಂದಲೇ ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಪ್ರತಿಕ್ರಿಯಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ನಿಯಮ ಜಾರಿಯನ್ನು ಮಂಗಳೂರು ಕಮಿಷನರೇಟ್ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನೂತನ […]

ಶಾಲೆ ಬಿಟ್ಟ ನಂತರ ಅಮ್ಮನ ಜೊತೆ ಟ್ರಾಫಿಕ್ ಸಿಗ್ನಲ್​ನ ಗೂಡಿನಲ್ಲಿ..ಸಾಮಾಜಿಕ ಜಾಲತಾಣದಲ್ಲಿ ವೈರಲ್!

Friday, July 6th, 2018
trafic-police

ಮಂಗಳೂರು: ಮಹಿಳಾ ಪೊಲೀಸ್ ಒಬ್ಬರು ಟ್ರಾಫಿಕ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಾಲೆಗೆ ಹೋಗುವ ಅವರ ಮಗು ಶಾಲೆ ಬಿಟ್ಟ ನಂತರ ಅಮ್ಮನ ಜೊತೆ ಟ್ರಾಫಿಕ್ ಸಿಗ್ನಲ್ನ ಗೂಡಿನಲ್ಲಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಳ್ಯದಲ್ಲಿ ಇತ್ತೀಚೆಗೆ ಯೋಗಿತ ಎಂಬುವರನ್ನು ಟ್ರಾಫಿಕ್ ಪೊಲೀಸ್ ಆಗಿ ನಿಯೋಜಿಸಲಾಗಿತ್ತು. ಯೋಗಿತ ಅವರು ಅನಾರೋಗ್ಯದ ಕಾರಣ ಒಂದು ತಿಂಗಳು ರಜೆ ತೆಗೆದುಕೊಂಡು ಜೂನ್ 17 ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಟ್ರಾಫಿಕ್ ಪೊಲೀಸ್ ಆಗಿ ನಿಯೋಜಿಸಲಾಗಿತ್ತು. ಯೋಗಿತ ಅವರ […]