ʼಕೊವಿಡ್‌ ಲಸಿಕೆ, ಸರ್ಕಾರಿ ವ್ಯವಸ್ಥೆ ಬಗ್ಗೆ ನಂಬಿಕೆ ಇರಲಿʼ – ಡಾ. ಅಣ್ಣಯ್ಯ ಕುಲಾಲ್

Wednesday, March 24th, 2021
UCM

ಮಂಗಳೂರು: ಕೊವಿಡ್‌ ಲಸಿಕೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಮನಸ್ಸಿಂದ ಹೊರಹಾಕಿ ಅರ್ಹರು ಲಸಿಕೆ ಹಾಕಿಸಿಕೊಳ್ಳೋಣ. ಸಾಂಕ್ರಾಮಿಕ ಕಲಿಸಿರುವ ಪಾಠದಿಂದ ಎಚ್ಚೆತ್ತು ಎರಡನೇ ಅಲೆಯನ್ನು ತಡೆಯೋಣ, ಎಂದು ಶ್ರೀನಿವಾಸ ವಿಶ್ವವಿದ್ಯಾನಿಲಯದ ಮುಖ್ಯ ಆರೋಗ್ಯಾಧಿಕಾರಿ ಮತ್ತು ಪ್ರಾಧ್ಯಾಪಕ ಡಾ. ಅಣ್ಣಯ್ಯ ಕುಲಾಲ್‌ ಕರೆ ನೀಡಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ಮತ್ತು ಇತರ ಸಂಘಗಳ ಆಶ್ರಯದಲ್ಲಿ ರವೀಂದ್ರ ಸಭಾಭವನದಲ್ಲಿ ಬುಧವಾರ ನಡೆದ ಕೊವಿಡ್‌- 19 ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶಿಕ್ಷಕರು, ಎನ್‌ಸಿಸಿ, […]

ಡಾ ಅಣ್ಣಯ್ಯ ಕುಲಾಲ್ ವಿರುದ್ಧ ಕೊಲೆ ಬೆದರಿಕೆ ದೂರು

Thursday, March 21st, 2019
Annayya-kulal

ಮಂಗಳೂರು  : ಡಾ ಅಣ್ಣಯ್ಯ ಕುಲಾಲ್ ಮತ್ತು ಕುಲಾಲ್ ಕುಂಬಾರ ಯುವವೇದಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ  ಎಂಬ ಆರೋಪದ ಮೇಲೆ ಪ್ರಸಾದ್ ಸಿದ್ದಕಟ್ಟೆ ಕುಲಾಲ್ ಸಂಘದ ಕಾರ್ಯದರ್ಶಿಯವರನ್ನು  ಡಾ ಅಣ್ಣಯ್ಯ ಕುಲಾಲ್ ಪ್ರಶ್ನಿಸಿ, ಯಾಕೆ ಹೀಗೆ ಮಾಡುತ್ತಿ ಇನ್ನು ಹೀಗೆ ಮಾಡ ಬೇಡ ಅಂತ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಆದರೆ ಪ್ರಸಾದ್ ಸಿದ್ದಕಟ್ಟೆ ನನ್ನನ್ನು ಬೆದರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಣ್ಣಯ್ಯ ಕುಲಾಲ್  ನನ್ನ ವಿರುದ್ಧ ಸುಳ್ಳು ದೂರು ಕೊಟ್ಟು ನನ್ನ ಹೆಸರು ಕೆಡಿಸಲು ಪ್ರಯತ್ನ ಮಾಡಿರುತ್ತಾನೆ ಎಂದಿದ್ದಾರೆ . […]

ಸಹ್ಯಾದ್ರಿ ಸಂಚಯದಿಂದ ‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನ

Friday, January 26th, 2018
sanchaya

ಮಂಗಳೂರು: ಸಹ್ಯಾದ್ರಿ ಸಂಚಯದಿಂದ ‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನವು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ವಿಶಿಷ್ಟ ರೀತಿಯಲ್ಲಿ ನಡೆಯಿತು. ಕಾರ್ಯಕ್ರಮದ ರೂವಾರಿ ದಿನೇಶ್ ಹೊಳ್ಳ ಕಪ್ಪು ಬಟ್ಟೆ ಧರಿಸಿದರೆ ಇತರರು ಮುಖವಾಡ ಧರಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸರ ಪ್ರೇಮಿಗಳ ವಿರೋಧದ ಮಧ್ಯೆ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಮುಂದಾದ ಕ್ರಮವನ್ನು ಖಂಡಿಸಿ ಮುರಿದು ಬಿದ್ದ ಮರದ ಕೊಂಬೆ, ಮೊಟ್ಟೆ ಒಡೆದು ಹೊರಗೆ ಬಂದ ಹಕ್ಕಿ ಮರಿಗಳ ಸಾವಿನ ದೃಶ್ಯವನ್ನು ಪ್ರದರ್ಶಿಸಿ ಅಣಕಿಸಲಾಯಿತು. […]