ಕನ್ನಡ ನಾಡು ನುಡಿಯ ರಾಷ್ಟೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾಪನ

Monday, November 1st, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ವಿವಿಧ ರಂಗಗಳಲ್ಲಿ ಸೇವೆ ಮಾಡಿದ ಹತ್ತು ಮಂದಿ ಸಾಧಕರಿಗೆ ಸನ್ಮಾನಿಸುವ ಮೂಲಕ ಸಮಾಪನ ಗೊಂಡಿದೆ. ಮಧ್ಯಾನ್ಹ 3ಕ್ಕೆ ಆರಂಭವಾದ ಸನ್ಮಾನಿತರ ಮೆರವಣಿಗೆಯಲ್ಲಿ ಡಾ. ಮೋಹನ್ ಆಳ್ವಾ, ಡಾ. ವೀರೇಂದ್ರ ಹೆಗ್ಗಡೆ, ಗಣೇಶ್ ಕಾರ್ನಿಕ್, ಕೆ. ಅಮರನಾಥ ಶೆಟ್ಟಿ , ಸಮ್ಮೇಳನಾಧ್ಯಕ್ಷೆ ವೈದೇಹಿ ಹಾಗೂ ಸನ್ಮಾನಗೊಳ್ಳುವ ಗಣ್ಯರು ಪಾಲ್ಗೊಂಡಿದ್ದರು. ಕೊಂಬು,  ಡೋಲು, ಕೊಳಲು, […]

ಆಕರ್ಷಕ ಕಲಾಮೇಳಗಳೊಂದಿಗೆ ಆಳ್ವಾಸ್ ನುಡಿಸಿರಿ ಪ್ರಾರಂಭ

Friday, October 29th, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದ್ರೆ : ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು ಎಂಬ ಪರಿಕಲ್ಪನೆಯಡಿ ಮೂಡಬಿದ್ರೆಯ ಶ್ರೀಮತಿ ಆನಂದ ಆಳ್ವಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿ ಸಿರಿಯನ್ನು ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಇತರ ಗಣ್ಯರು ಮರದ ಕುಂಡಿಕೆಯಲ್ಲಿ ಇರಿಸಲಾದ ಭತ್ತದ ತೆನೆಗೆ ತಾಮ್ರದ ಕಲಸದಲ್ಲಿ ಹಾಲೆರೆಯುವ ಮೂಲಕ ನುಡಿಸಿರಿಯ ಆರಂಭಕ್ಕೆ ಸಾಕ್ಷ್ಯರಾದರು. ವೇದಿಕೆಯ ಮುಂಭಾಗದಲ್ಲಿ […]