ದಿಢೀರನೇ ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ

Thursday, August 26th, 2021
Sanjana

ಬೆಂಗಳೂರು : ‘ಗಂಡ ಹೆಂಡತಿ’ ಖ್ಯಾತಿಯ ನಟಿ ಡ್ರಗ್ಸ್ ಸೇವಿಸಿದ್ದು ನಿಜ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮೂಲಕ ಸಾಬೀತಾಗಿದೆ. ಸದ್ಯ ಬಂಧನ ಭೀತಿಯಲ್ಲಿರುವ ನಟಿ ಸಂಜನಾ ಅನಾರೋಗ್ಯ ಎಂಬ ಕಾರಣ ಹೇಳಿ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ನಟಿ ಸಂಜನಾ ಗಲ್ರಾಣಿ ತಾಯಿ ರೇಷ್ಮಾ ಗಲ್ರಾಣಿ, ನಮ್ಮ ಹಣೆ ಬರಹ ಸರಿಯಾಗಿಲ್ಲ. ಏನ್ ಮಾಡೋದಕ್ಕೆ ಆಗೋದಿಲ್ಲ. ಸಂಜನಾ ಗಲ್ರಾಣಿಗೆ ಹುಷಾರಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರಿಗೆ ಊಟ ತೆಗೆದುಕೊಂಡು ಬಂದಿದ್ದೇನೆ […]

ಎಂಡಿಎಂಎ ಸಿಂಥೆಟಿಕ್ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರ ಬಂಧನ

Friday, June 4th, 2021
MDMA

  ಮಂಗಳೂರು : ಕಾರಿನಲ್ಲಿ ಅಕ್ರಮವಾಗಿ ಎಂಡಿಎಂಎ ಸಿಂಥೆಟಿಕ್ ಮಾದಕ ದ್ರವ್ಯವನ್ನು ಮಂಗಳೂರು ಹಾಗೂ ಕೇರಳದಲ್ಲಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 170 ಗ್ರಾಂ ತೂಕದ 10,20,000 ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಈ ಬಗ್ಗೆ ವಿವರಿಸಿ ಮಂಗಳೂರು ನಗರದಲ್ಲೇ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದ ಎಂಡಿಎಂಎ ಡ್ರಗ್ಸ್ ಮೊದಲ ಬಾರಿಗೆ ಪತ್ತೆಯಾಗಿದೆ. ಮಂಜೇಶ್ವರ ಉಪ್ಪಳ ಗೇಟ್ ಬಳಿ ನಿವಾಸಿ ಮುಹಮ್ಮದ್ ಮುನಾಫ್, ಮುಹಮ್ಮದ್ […]

‘ಕೊರೋನಾ ಕಾಲ’ದಲ್ಲಿ ‘ಮಾನಸಿಕ ಆರೋಗ್ಯ’ ಕಾಪಾಡಿಕೊಳ್ಳೋದು ಹೇಗೆ.?

Saturday, May 1st, 2021
Covid Vaccine

ಬೆಂಗಳೂರು : ಸಾಂಕ್ರಾಮಿಕ ರೋಗದಂತಹ ಬಿಕ್ಕಟ್ಟಿನ ಸಮಯದಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ತೀರಾ ಸಾಮಾನ್ಯ. ಕೋವಿಡ್ 2ನೇ ಅಲೆಯ ಇಂದಿನ ಪರಿಸ್ಥಿತಿಯಲ್ಲಿ ಕೊರೋನಾಗೆ ತುತ್ತಾಗುವ ಭೀತಿಯು ಜನರಲ್ಲಿ ಅತೀ ಒತ್ತಡವನ್ನು ಹಾಗು ತಡೆದುಕೊಳ್ಳಲು ಆಗದಂತಹ ಆತಂಕವನ್ನು ಹುಟ್ಟು ಹಾಕಿದೆ. ಇಂತಹ ಸಂದರ್ಭದಲ್ಲೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋದು ಬಹುಮುಖ್ಯವಾಗಿದೆ. ಹಾಗಾದ್ರೇ.. ಅದನ್ನು ಹೇಗೆ ಕಾಪಾಡಿಕೊಳ್ಳೋದು ಅಂತ ಆಪ್ತ ಸಮಾಲೋಚಕರು ಹಾಗೂ ಮನೋಚಿಕಿತ್ಸಕರಾದಂತ ಡಾ. ಗಿರಿಧರರಾವ್ ಹವಲ್ದಾರ್ ಅವರ ಸಲಹೆಯನ್ನು ಮುಂದೆ ಓದಿ.. ಕೋವಿಡ್ ಕುರಿತಾದ ಗೊಂದಲ, ಅನುಮಾನಗಳು, ರೋಗ […]

ಮಂಗಳೂರಿನಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಿಟಿ ಬಸ್​

Tuesday, October 20th, 2020
Ganesh Prasad bus

ಮಂಗಳೂರು  : ಮಂಗಳೂರಿನ ಬಸ್ ಮಾಲೀಕ ರೊಬ್ಬರು  ಡ್ರಗ್ಸ್ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬರಹಗಳನ್ನು ‌ತಮ್ಮ ಬಸ್ನಲ್ಲಿ ಬರೆಸಿದ್ದಾರೆ. ನಗರದ ಸ್ಟೇಟ್ ಬ್ಯಾಂಕ್ನಿಂದ ಮಂಗಳಾದೇವಿಯ ನಡುವೆ ಸಂಚರಿಸುವ ‘ಶ್ರೀ ಗಣೇಶ್ ಪ್ರಸಾದ್’ ಎಂಬ 27 ನಂಬರ್ ಸಿಟಿ ಬಸ್ನಲ್ಲಿ‌ ಮಾಲೀಕ  ದಿಲ್ ರಾಜ್ ಆಳ್ವ ಅವರು ಡ್ರಗ್ಸ್ ಜಾಗೃತಿ ಬರಹ ಬರೆಸಿದ್ದಾರೆ. ಬಸ್ನ ಎರಡೂ ಬದಿಗಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ, ಡ್ರಗ್ಸ್ ಸೇವನೆಯಿಂದ ಮರಣ ಸಂಭವಿಸುತ್ತದೆ, ಕುಟುಂಬಕ್ಕೂ ತೊಂದರೆ ಎಂಬ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಈ ಹಿಂದೆಯೂ ಅವರು […]

ಮಣಿಪಾಲ : ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಬಂಧನ

Thursday, October 15th, 2020
Fazal

ಉಡುಪಿ, : ಮಣಿಪಾಲದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಉಡುಪಿ  ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ದಂಧೆಯಲ್ಲಿ ತೊಡಗಿದ ವ್ಯಕ್ತಿಯನ್ನು ಉಡುಪಿ ತಾಲೂಕಿನ ಬ್ರಹ್ಮಾವರದ ಮಹಮ್ಮದ್ ಫಝಲ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆರೋಪಿ ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದು ತಂದಿದ್ದ ನಿಷೇಧಿತ ಎಂಡಿಎಂಎ ಮಾತ್ರೆಗಳು, ಬ್ರೌನ್ ಶುಗರ್ ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂದಿದ್ದಾರೆ. ಅಲ್ಲದೇ ಮಾರಾಟ ಸಂವಹನಕ್ಕೆಂದು ಬಳಸಲಾಗುತ್ತಿದ್ದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್ ಹಾಗೂ ಸೊತ್ತುಗಳ ಅಂದಾಜು ಮೌಲ್ಯ […]

ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಮತ್ತು ಸಹಚರನನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು

Saturday, September 19th, 2020
kishor Shetty

ಮಂಗಳೂರು: ಖ್ಯಾತ ಡ್ಯಾನ್ಸರ್, ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಮಂಗಳೂರಿನ ಕಿಶೋರ್ ಶೆಟ್ಟಿಯನ್ನು ಡ್ರಗ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್,  ಮಂಗಳೂರು ಸಿಸಿಬಿ ಪೊಲೀಸರಿಂದ ಶನಿವಾರ ಬೆಳಿಗ್ಗೆ ಡ್ರಗ್ಸ್ ಸಾಗಿಸುತ್ತಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ  ನೀಡಿದರು. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಕಿಶೋರ್ ಶೆಟ್ಟಿ, ನಂತರ ಹಿಂದಿ ಭಾಷೆಯ ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ. ಪ್ರಕರಣದಲ್ಲಿ ಮತ್ತೋರ್ವನನ್ನು ಬಂಧಿಸಲಾಗಿದ್ದು, ಅಕೀಲ್ ನೌಶೀಲ್ ಎಂದು […]

ಸ್ಯಾಂಡಲ್​ವುಡ್ ಡ್ರಗ್ಸ್ ನಂಟು : ನಟಿ ರಾಗಿಣಿ ಮತ್ತು ಸಂಜನಾ ಭಾಗಿಯಾಗಿರುವ ಶಂಕೆ

Thursday, September 3rd, 2020
Ragini

ಬೆಂಗಳೂರು : ಸ್ಯಾಂಡಲ್ವುಡ್ ಜೊತೆ  ದೊಡ್ಡ ಡ್ರಗ್ಸ್ ಜಾಲ  ಪತ್ತೆಯಾಗಿದ್ದು ಇದರಲ್ಲಿ ಯಾರ್ಯಾರು ಶಾಮೀಲಾಗಿ ದ್ದಾರೆಂದು ಮಾಹಿತಿ ಹೊರ ಬೀಳುತ್ತಿದೆ.  ಬುಧವಾರ  ನಟಿ ರಾಗಿಣಿ ಆಪ್ತ ರವಿಶಂಕರ್ ಅವರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಈಗ ಮತ್ತೊಬ್ಬ ನಟಿ ಸಂಜನಾ ಗಲ್ರಾಣಿ ಅವರ ಆಪ್ತ ರೆನ್ನಲಾದ ರಾಹುಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಡ್ರಗ್ ಪೆಡ್ಲರ್ಗಳ ಜೊತೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸರು ರಾಹುಲ್ರನ್ನು ವಶಕ್ಕೆ ಪಡೆದರೆನ್ನಲಾಗಿದೆ. ಈ ಸಂಬಂಧ ನಟಿ ರಾಗಿಣಿ ಇಂದು ಸಿಸಿಬಿ […]