ಡಿವೈಡರ್ ನ ಮೇಲೆ ಕೂಲಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾರು ಹರಿದು ಗಂಭೀರ ಗಾಯ

Wednesday, September 20th, 2023
car bike-accident

ಬಂಟ್ವಾಳ : ಡಿವೈಡರ್ ನ ಮೇಲೆ ಕೂಲಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾರು ಹರಿದು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತುಂಬೆ ಎಂಬಲ್ಲಿ ನಡೆದಿದೆ. ಹಾವೇರಿ ಮೂಲದ ನಾಗರಾಜ್ ಲಮಾಣಿ ಗಾಯಗೊಂಡ ಕಾರ್ಮಿಕ. ಚಾಲಕನ ನಿಯಂತ್ರಣ ಕಳೆದುಕೊಂಡ ಡಿವೈಡರ್ ಮೇಲೆ ಹತ್ತಿದೆ. ಈ ಸಂದರ್ಭದಲ್ಲಿ ಡಿವೈಡರ್ ನಲ್ಲಿ ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಡಿಕ್ಕಿಯಾಗಿದೆ. ಮತ್ತೆ ಕಾರು ವಿರುದ್ದ ರಸ್ತೆಗೆ ಮುನ್ನುಗ್ಗಿದೆ. ಅದೇ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಕಾರು ಮತ್ತು […]

ಖಾಸಗಿ ಬಸ್ ಪಲ್ಟಿ, ಡೀಸೆಲ್‌ ಸೋರಿಕೆ, ಹಲವರಿಗೆ ಗಾಯ

Tuesday, February 15th, 2022
sea bird

ಬಂಟ್ವಾಳ : ಮಂಗಳೂರು ಬೆಂಗಳೂರು ಸಂಚಾರದ  ಖಾಸಗಿ ಬಸ್ಸೊಂದು  ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ  ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ತುಂಬೆ ಬಿ.ಎ‌. ಕಾಲೇಜು ಬಳಿಕ ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಸೀ ಬರ್ಡ್ ಹೆಸರಿನ ಖಾಸಗಿ ಬಸ್ ತುಂಬೆ ಬಿ.ಎ. ಕಾಲೇಜು ಬಳಿಯ ತಿರುವಿನಲ್ಲಿ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಹೆಚ್ಚಿನವರಿಗೆ ತುಂಬೆ […]

ತುಂಬೆ: ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆ ಸ್ವಂತ ಕೊಠಡಿಗೆ ಸ್ಥಳಾಂತರ

Monday, June 14th, 2021
Somangala Society

ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆಯನ್ನು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಸೋಮವಾರ ಉದ್ಘಾಟಿಸಿದರು. ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ತುಂಬೆ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಶಾಖೆಯನ್ನು ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ ದಂಪತಿ ಸೋಮವಾರ ಉದ್ಘಾಟಿಸಿ ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಮಾತನಾಡಿ, ಸಂಘವು ರೂ 233 ಕೋಟಿ […]

ತುಂಬೆ ಮಜಿಯಲ್ಲಿ ನಾಲ್ಕು ಮನೆಗಳಿಗೆ ನುಗ್ಗಿ ನಗದು ದರೋಡೆ

Friday, April 16th, 2021
tumbe

ಬಂಟ್ವಾಳ :   ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ. ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ತುಂಬೆ ಗ್ರಾಮದ ಮಜಿ ಎಂಬಲ್ಲಿ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ 8 ಸಾವಿರ ರೂ. ನಗದನ್ನು ದೋಚಿದ್ದಾರೆ. ಇನ್ನುಳಿದ ಮೂರು ಮನೆಯ ಕಪಾಟು ಸಹಿತ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿದ್ದು, ನಗದು ಸಹಿತ ಬೆಲೆಬಾಳುವ ಯಾವುದೇ […]

ಏಳು ಗ್ರಾಮ ಪಂಚಾಯತ್​​ಗಳಲ್ಲಿ ಎದುರಾಳಿಗಳೇ ಇಲ್ಲದೆ ಜಯಗಳಿಸಲಿರುವ ಬಿಜೆಪಿ ಅಭ್ಯರ್ಥಿಗಳು

Monday, December 14th, 2020
Bjp candidates

ಉಳ್ಳಾಲ : ಮಂಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯತ್ಗಳಲ್ಲಿ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಈ ಏಳು ಗ್ರಾಮ ಪಂಚಾಯತ್ಗಳಲ್ಲಿ ಕೆಲವು ವಾರ್ಡ್ ಗಳಿಗೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಎದುರಾಳಿಗಳೇ ಇಲ್ಲ. ಕಿನ್ಯ ಗ್ರಾಮ ಪಂಚಾಯತ್ 2ನೇ ವಾರ್ಡ್‌ನಲ್ಲಿ ಬಾಗಿ, ತಲಪಾಡಿ ಗ್ರಾಪಂ. ನ 5ನೇ ವಾರ್ಡ್‌ನಲ್ಲಿ ಗೀತಾನಾಯ್ಕ್, ಮುನ್ನೂರು ಗ್ರಾಪಂ.ನ 6ನೇ ವಾರ್ಡ್‌ನಲ್ಲಿ ಪುಷ್ಪ, ಬೆಳ್ಮ ಗ್ರಾ ಪಂ.ನ 1ನೇ ವಾರ್ಡ್‌ನಲ್ಲಿ ಸುಂದರಿ, ಪಜೀರ್ ಗ್ರಾ ಪಂ.ನ 2ನೇ ವಾರ್ಡ್‌ನಲ್ಲಿ ವಸಂತಿ, ತುಂಬೆ ಗ್ರಾಪಂ.ನ 1ನೇ […]

‘ಸೇವಾ ರತ್ನ’ ಪ್ರಶಸ್ತಿ 2018

Monday, December 17th, 2018
seva-award

ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ನಿವಾಸಿ ಅಬೂಬಕರ್ ಮುಸ್ಲಿಯಾರ್ ಹಾಗೂ ದುಲೈಕಾ ದಂಪತಿಗಳ ಪುತ್ರ ಆಶಿಕ್ ಕುಕ್ಕಾಜೆ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೀಸ್ & ಎವರ್ನೆಸ್ ಟ್ರಸ್ಟ್ (ರಿ.) ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ’ಸೇವಾ ರತ್ನ’ ಪ್ರಶಸ್ತಿ 2018 ನ್ನು ಪೀಸ್ & ಎವರ್ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ ಜೇಸಿ ಭವನದಲ್ಲಿ ನೀಡಿ ಗೌರವಿಸಿದರು. ಸಾಮಾಜಿಕ ತಾಣಗಳಲ್ಲಿ ಬಡ ರೋಗಿಗಳ, ಅಶಕ್ತರ ಬಗ್ಗೆ ಬರಹಗಳನ್ನು ಬರೆಯುವ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ […]

ಮರಳು ನೀತಿ ಶರತ್ತು ಸಡಿಲಿಕೆಗೆ ಕೋರಿಕೆ: ಸಚಿವ ಖಾದರ್‌

Tuesday, September 18th, 2018
ut-kaaaadar

ಮಂಗಳೂರು: ಕರಾವಳಿಗೆ ರೂಪಿಸಿರುವ ಪ್ರತ್ಯೇಕ ಮರಳು ನೀತಿಯಲ್ಲಿರುವ ಕೆಲವು ಶರತ್ತುಗಳಿಂದ ಮರಳುಗಾರಿಕೆಗೆ ಸಮಸ್ಯೆಯಾಗಿದ್ದು, ಇವುಗಳನ್ನು ಸಡಿಲಗೊಳಿಸಲು ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಇರುವ ಪ್ರತ್ಯೇಕ ಮರಳು ನೀತಿಯಲ್ಲಿ ಮರಳು ಗುತ್ತಿಗೆ ವಹಿಸುವವರು ಅದೇ ತಾಲೂಕಿನವರಾಗಿರಬೇಕು, 5 ವರ್ಷಗಳ ಅನುಭವ ಹೊಂದಿರಬೇಕು ಮುಂತಾದ ಶರತ್ತುಗಳಿವೆ. ಇದರಿಂದಾಗಿ ಮರಳು ಬ್ಲಾಕ್‌ಗಳ ಗುರುತಿಸಿದರೂ ಗುತ್ತಿಗೆ ವಹಿಸಿಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಇದರಿಂದ ಮರಳು […]

ತುಂಬೆಯಿಂದ ಸರಬರಾಜಗುತ್ತಿರುವ ಕಲುಷಿತ ನೀರಿನ ಪರೀಕ್ಷೆಗೆ ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮನಪಾ ನಿರ್ಧಾರ

Monday, January 30th, 2017
MCC

ಮಂಗಳೂರು : ನಗರಕ್ಕೆ ತುಂಬೆಯಿಂದ ಸರಬರಾಜು ಆಗುತ್ತಿರುವ ಕಲುಷಿತ ನೀರಿನ ಪರೀಕ್ಷೆಗೆ ಎರಡು ಪಕ್ಷದ ಕಾರ್ಪೊರೇಟರ್‌ಗಳು ತುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿನ್ನೆ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದರು. ಬಂಟ್ವಾಳ ತಾಲೂಕಿನ 18 ಕಡೆಗಳಲ್ಲಿ ಕಲುಷಿತ ನೀರುಗಳನ್ನು ನೇತ್ರಾವತಿ ನದಿಗೆ ಹರಿದು ಬಿಡಲಾಗುತ್ತದೆ ಎಂದು ಮನಪಾ ಸಭೆಯಲ್ಲಿ ಧ್ವನಿಯೆತ್ತಿದ್ದ ಪ್ರತಿಪಕ್ಷದ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.. ಈ ಆರೋಪಕ್ಕೆ ಉತ್ತರಿಸಿದ ಆಡಳಿತ ಪಕ್ಷ, ಕುಡಿಯಲು ಶುದ್ಧೀಕರಿಸಿದ ನೀರನ್ನೇ ಮಂಗಳೂರಿಗೆ ಪೂರೈಕೆ […]