ತುಟ್ಟಿ ಭತ್ಯೆ ನೀಡದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ :ಎಐಟಿಯುಸಿ ಎಚ್ಚರಿಕೆ

Wednesday, July 23rd, 2014
SK beedi

ಮಂಗಳೂರು : ಬೀಡಿ ಕಾರ್ಮಿಕರಿಗೆ 2014 ಎಪ್ರಿಲ್ ಒಂದರಿಂದ ನೀಡಬೇಕಾದ ತುಟ್ಟಿಭತ್ಯೆ ರೂ.21.15 ನ್ನು ಬೀಡಿ ಮಾಲಕರು ಇದುವರೆಗೆ ಕಾರ್ಮಿಕರಿಗೆ ಪಾವತಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಸಲ ಮಾಲಕರನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಪೂರ್ತಿ ಮೊತ್ತ ಕಾರ್ಮಿಕರಿಗೆ ಪಾವತಿಸುವ ಬದಲು ಕಡಿಮೆ ಮಾಡುವ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ತಕ್ಷಣ ರೂ. 21.15 ಪಾವತಿಸದಿದ್ದರೆ ಕೆಲಸ ಸ್ಥಗಿತ ಮಾಡುತ್ತೇವೆ ಎಂದು ಎಐಟಿಯುಸಿ ಕಾರ್ಮಿಕರು ಬೀಡಿ ಮಾಲಕರನ್ನು ಎಚ್ಚರಿಸಿದರು. ತುಟ್ಟಿಭತ್ಯೆ ಪಾವತಿಸದಿರುವ ಎಲ್ಲಾ ಬೀಡಿ ಮಾಲಕರ ವಂಚನಾ ನೀತಿಯನ್ನು […]

ಚುನಾವಣೆ ಹೊಸ್ತಿಲಲ್ಲಿ ಭರವಸೆಗಳ ಸುಗ್ಗಿ, ಸರ್ಕಾರಿ ನೌಕರ, ಪಿಂಚಣಿದಾರರೇ ಟಾರ್ಗೆಟ್, ಇದು ಕೊಡುಗೈ ಸಂಪುಟ

Saturday, March 1st, 2014
K.H.-Muniyappa

ನವದೆಹಲಿ: ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯುಪಿಎ ಸರ್ಕಾರ ತನ್ನ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಮತದಾರರ ಓಲೈಕೆಗೆ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.10ರಷ್ಟು ಹೆಚ್ಚಳ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ 54 ಕೇಂದ್ರೀಯ ವಿದ್ಯಾಲಯ ಹಾಗೂ 3,500 ಮಾದರಿ ಶಾಲೆ, ಕೋಲಾರದಲ್ಲಿ ರೈಲು ಬೋಗಿ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸಿದೆ. ಕೇಂದ್ರ ಸರ್ಕಾರಿ ನೌಕರರ ಓಲೈಕೆ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ನೌಕರರ ತುಟ್ಟಿ […]