ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ

Monday, June 24th, 2024
BS-Yedyurappa

ಸುಬ್ರಹ್ಮಣ್ಯ: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ದೇವಾಲಯದ ಅರ್ಚಕರಾದ ಸತ್ಯನಾರಾಯಣ ನೂರಿತ್ತಾಯ ಅವರು ತುಲಾಭಾರ ಸೇವೆಯನ್ನು ನೆರವೇರಿಸಿದರು. ಬೆಳ್ಳಿಗ್ಗೆ ದೇವಾಲಯಕ್ಕೆ ಬಂದ ಯಡಿಯೂರಪ್ಪ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಸ್ವಾಗತಿಸಿದರು. ಮಾಜಿ ಸಚಿವ ಅಂಗಾರ, ಮೋಹನ್ ರಾಮ ಸುಳ್ಳಿ ಹಾಗೂ ದೇವಳ ಸಮಿತಿಯವರು ಇದ್ದರು. ಮಧ್ಯಾಹ್ನ ಸುಳ್ಯಕ್ಕೆ ತೆರಳುವ ಯಡಿಯೂರಪ್ಪ, ಸುಳ್ಯದ ಬಿಜೆಪಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವರ ದರುಶನ ಪಡೆದ ಸಚಿವ ಡಿ.ಕೆ ಶಿವಕುಮಾರ ಕುಟುಂಬ

Monday, September 25th, 2017
DK Shivakumar

ಸುಬ್ರಹ್ಮಣ್ಯ: ಐಟಿ ದಾಳಿ ಕುರಿತು ಸದ್ಯಕ್ಕೆ ತಾನೇನು ಪ್ರತಿಕ್ರೀಯಿಸುವುದಿಲ್ಲ. ಸೂಕ್ತ ಘಳಿಗೆ ಬಂದಾಗ ಪ್ರತಿಕ್ರೀಯಿಸುವೆ. ಆ ಶುಭ ಘಳಿಗೆ ತನಕ ಕಾದು ಬಳಿಕ ಐಟಿ ಧಾಳಿ ಕುರಿತು ಮಾತನಾಡುವೆ. ಅಲ್ಲಿ ತನಕ ಸ್ವಲ್ಪ ಸಮಯ ಕಾಯೋಣ ಎಂದು ತನ್ನ ಹಾಗೂ ಸಂಬಂಧಿಕರ ಮೇಲಿನ ಐಟಿ ದಾಳಿ ಕುರಿತು ಇಂಧನ ಸಚಿವ ಹಾಗೂ ಕಾಂಗ್ರೇಸ್‌ನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ ಪ್ರತಿಕ್ರೀಯಿಸಿದರು. ಕುಕ್ಕೆ ಸಬ್ರಹ್ಮಣ್ಯ ಕ್ಷೇತ್ರಕ್ಕೆ ಭಾನುವಾರ ಕುಟುಂಬ ಸದಸ್ಯರ ಜೊತೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು […]