ಪ್ರಾದೇಶಿಕ ಭಾಷೆಗಳ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳು ಆಗಬೇಕಿದೆ: ಮೊಹಮ್ಮದ್ ರಾಫಿ

Saturday, November 5th, 2016
Badiyadka

ಬದಿಯಡ್ಕ: ಭಾಷೆಗಳು ಸಂಸ್ಕಾರ, ಜೀವನ ಕ್ರಮಗಳ ಸಂರಕ್ಷಕಗಳಾಗಿದ್ದು, ಸಂರಕ್ಷಣೆ ಅಗತ್ಯವಿದೆ. ಭೌಗೋಳಿಕವಾಗಿ ತಾಯ್ನೆಲದ ಭಾಷೆಯನ್ನು ಮರೆತರೆ ಅಪಾಯಗಳಿವೆಯೆಂದು ನೀಲೇಶ್ವರ ನಗರ ಸಭಾ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ರಾಫಿ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ತುಳುವೆರೆ ಆಯನೊ ಸಮಿತಿಯ ನೇತೃತ್ವದಲ್ಲಿ ಡಿ.9 ರಿಂದ 13ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ಕುಂದಾಪುರದ ತುಳುವೇಶ್ವರದಿಂದ ಪ್ರಾರಂಭಿಸಿದ ತುಳುನಾಡ ತಿರ್ಗಾಟ ರಥಯಾತ್ರೆ ಕುಂದಾಪುರ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನಗಳ ವಿವಿಧೆಡೆ 65 ದಿನಗಳು ಸಂಚರಿಸಿ ಗುರುವಾರ […]

ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ನೂತನ ಅಧ್ಯಕ್ಷರಾಗಿ ಎಂ.ಜೆ ಕಿಣಿ ಪದಗ್ರಹಣ

Monday, December 21st, 2015
Manjeshwara Congress

ಮಂಜೇಶ್ವರ: ಮಂಜೇಶ್ವರದಲ್ಲಿ ಪಕ್ಷ ವಿರೋಧಿ ಶಕ್ತಿಗಳಿಂದ ಸಂಕಷ್ಟಕ್ಕೊಳಗಾಗಿದ್ದ ಕಾಂಗ್ರೆಸ್ಸ್‌ನ ಕಾರ್ಯಕರ್ತರನ್ನು ಒಗ್ಗೂಡಿಸಿ ಮಂಡಲ ಸಮಿತಿಗೆ ನವಚೈತನ್ಯ ತುಂಬುವ ಹೊಣೆಗಾರಿಕೆಯನನು ಜಿಲ್ಲಾ ಕಾಂಗ್ರೆಸ್ಸ್ ಸಮಿತಿಯು ಹಿರಿಯ ಕಾರ್ಯಕರ್ತರಾದ ಎಂ.ಜೆ ಕಿಣಿಯವರಿಗೆ ನೀಡಿದೆ. ಬಿಜೆಪಿಯ ಕೋಮುವಾದ ಹಾಗೂ ಕೇಂದ್ರ ಸರಕಾರದ ಸುಳ್ಳು ಪ್ರಚಾರಗಳನ್ನು ಎದುರಿಸಿ ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿಯವರ ಜನಪರ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ಕರೆ ನೀಡಿದರು. ಮಂಜೇಶ್ವರ ಮಂಡಲ ಕಾಂಗ್ರೆಸ್ಸ್ ನೂತನ […]