ಪಂಚಾಯತ್ ಚುನಾವಣೆ ವೇಳೆ ವಿಟ್ಲ ಪರಿಸರದಲ್ಲಿ ಅಲ್ಲಲ್ಲಿ ವಾಮಾಚಾರ

Thursday, December 24th, 2020
BlackMagic

ವಿಟ್ಲ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ವೇಳೆ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿಯಲ್ಲಿ ವಾಮಾಚಾರ ಮಾಡಿರುವುದು ಪತ್ತೆಯಾಗಿದ್ದು ಬಿಜೆಪಿ ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ ದೈವದ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೋ ಲಿಪಿಯಲ್ಲಿ ಬರೆಯಲಾಗಿದೆ.  ಇದನ್ನು ಬಿಜೆಪಿ ಅಭ್ಯರ್ಥಿಯ ಎದುರಾಳಿ ನಡೆಸಿರಬಹುದಾದ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಅಭ್ಯರ್ಥಿಯ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ. ಬಂಡಮುಗೇರು […]

ವಿವಾಹ ವಿಚ್ಛೇದನ ಬೇಗ ಬಗೆಹರಿಯಬೇಕೇ? ಹೀಗೆ ಮಾಡಿ.

Sunday, March 15th, 2020
divorce

ಲೇಖನ: ಜ್ಯೋತಿಷ್ಯರು ಗಿರಿಧರ ಭಟ್; ವೈವಾಹಿಕ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಅಥವಾ ಇಷ್ಟವಿಲ್ಲದ ವಿವಾಹದಿಂದ ಹಾನಿ ಮಾಡಿ ಕೊಂಡಿರಬಹುದು. ಮುಂದಿನ ದಾರಿ ಯೋಚಿಸಿ ವಿಚ್ಛೇದನ ಪಡೆಯಲು ಬಯಸುತ್ತಾರೆ ಆದರೆ ಕೆಲವರ ಜೀವನದಲ್ಲಿ ವಿಚ್ಛೇದನವು ಆಗದೆ ಇತ್ತ ಕಡೆ ಅವರ ಜೀವನವು ಸರಿಹೋಗದೆ ನೊಂದುವ ಸ್ಥಿತಿ ತಲುಪಿರುತ್ತಾರೆ. ಯಾರಿಂದ ಬಿಡುಗಡೆ ಪಡೆಯಬೇಕೆಂಬ ಭಾವನೆ ನಿಮ್ಮಲ್ಲಿ ಇರುತ್ತದೆಯೋ ಅವರೇ ನಿಮಗೆ ವಿಚ್ಛೇದನ ನೀಡುತ್ತಾರೆ ಈ ಸರಳ ಪರಿಹಾರದಿಂದ. ಪರಿಹಾರ ಮಾರ್ಗ: ಸಿಪ್ಪೆ ಸುಲಿಯದೇ ಇರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ […]

ಗಗನಕ್ಕೇರಿದ ತೆಂಗಿನಕಾಯಿ ಧಾರಣೆ!

Monday, January 15th, 2018
cocanut

ಮಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ತೆಂಗಿನಕಾಯಿಯ ಧಾರಣೆ 40 ರೂ.ಗಳ ಗಡಿ ದಾಟಿದ್ದು, ಇಳುವರಿ ಕಡಿಮೆಯಿಂದ ಕಂಗೆಟ್ಟಿದ್ದ ಕೃಷಿಕರಿಗೆ ಧಾರಣೆ ಏರಿಕೆ ಒಂದಷ್ಟು ಸಂತಸ ನೀಡಿದೆ. ಆದರೆ ತೆಂಗು ಖರೀದಿಸುವ ಗ್ರಾಹಕರಿಗೆ ಧಾರಣೆ ಏರಿಕೆ ದೊಡ್ಡ ಹೊಡೆತ ನೀಡಿದೆ. ಇದರ ಜತೆಗೆ ಎಳನೀರಿನ ಧಾರಣೆಯೂ ಗಗನಕ್ಕೇರಿದೆ. ಕೃಷಿಕರಿಂದ ತೆಂಗಿನಕಾಯಿ ಖರೀದಿ ಮಾಡುವ ವರ್ತಕರು ತೆಂಗಿಗಾಗಿ ಬೇಡಿಕೆ ಇಟ್ಟರೂ ಉತ್ಪನ್ನವೇ ಸಿಗುತ್ತಿಲ್ಲ ಎಂದು ಮಾತುಗಳು ಕೇಳಿ ಬರುತ್ತಿದೆ. ಇತ್ತ ಧಾರಣೆ ಏರಿಕೆಯಿಂದ ರೈತರು ಕೂಡ ತಮ್ಮ ಫಸಲನ್ನೂ […]