ಬಿಜೆಪಿಯ ಹೊಸ ಯುವ ಮುಖ ಡಾ.ವೈ.ಭರತ್ ಶೆಟ್ಟಿ

Friday, May 11th, 2018
bharath-shetty

ಮಂಗಳೂರು: ಬಿಜೆಪಿಯ ಮಾಜಿ ಸಚಿವರನ್ನೇ ಹಿಂದಿಕ್ಕಿ ಮಂಗಳೂರು ನಗರಉತ್ತರ ವಿಧಾನಸಭಾಕ್ಷೇತ್ರದ ಭಾರತೀಯಜನತಾ ಪಾರ್ಟಿಅಭ್ಯರ್ಥಿಯಾಗಿಆದವರುಡಾ.ವೈ.ಭರತ್ ಶೆಟ್ಟಿ. ಮಂಗಳೂರು ನಗರ ಉತ್ತರಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕೃಷ್ಣ ಪಾಲೇಮಾರ್‌ಎಂದೇ ಹೇಳಲಾಗಿತ್ತು. ಈಗ ಬಿಜೆಪಿ ಅಭ್ಯರ್ಥಿಯಾಗಿಡಾಕ್ಟರ್ ಭರತ್ ಶೆಟ್ಟಿಆಯ್ಕೆಆಗಿರುವುದು ಕ್ಷೇತ್ರದ ಯುವಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮಂಗಳೂರು ನಗರದಯೆಯ್ಯಿಡಿಯ ನಿವಾಸಿಯಾಗಿರುವ ಪ್ರೊ.ಡಾ.ವೈ. ಭರತ್ ಶೆಟ್ಟಿ (45 ವರ್ಷ ) ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದವರು. ಭರತ್ ಶೆಟ್ಟಿ ಸರ್ದಾರ್ ವಲ್ಲಭಬಾಯಿ ಪಟೇಲ್ ಲೋಹ ಸಂಗ್ರಹಣಾ ಸಮಿತಿಯಜಿಲ್ಲಾ ಸಂಚಾಲಕನಾಗಿದ್ದರು. ಕಳೆದ ಎರಡು […]

ಅನ್ಯ ರಾಜ್ಯದಲ್ಲಿ ಕಾರ್ಯನಿರ್ವಹಣೆ: ಹೋಂಗಾರ್ಡ್‌ ಕಮಾಂಡೆಂಟ್‌‌ ವಿರುದ್ಧ ಕ್ರಮಕ್ಕೆ ಶಿಫಾರಸು

Saturday, March 31st, 2018
homeguard

ಮಂಗಳೂರು: ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು ಅವರು ಮೇಲಾಧಿಕಾರಿಯವರ ಅನುಮತಿ ಇಲ್ಲದೆ ಅನ್ಯ ರಾಜ್ಯದಲ್ಲಿ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪ ಸಾಬೀತಾಗಿದ್ದು, ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಪಶ್ಚಿಮ ವಲಯ ಐಜಿಪಿಯವರು ಗೃಹರಕ್ಷಕ ದಳದ ಮಹಾ ಸಮಾದೇಷ್ಟರಿಗೆ (ಬೆಂಗಳೂರು) ಶಿಫಾರಸು ಮಾಡಿದ್ದಾರೆ. ಡಾ. ಚೂಂತಾರು ತನ್ನ ಸಾಮಾಜಿಕ ವೃತ್ತಿಗೆ ನ್ಯಾಯ ಹಾಗೂ ಗೌರವ ಕೊಡದೆ ವೈಯಕ್ತಿಕ ವೃತ್ತಿಗೆ ಹೆಚ್ಚಿನ ಗಮನ ಕೊಟ್ಟು ಪದೇ ಪದೆ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ […]

ದಂತ ವೈದ್ಯ ವಿದ್ಯಾರ್ಥಿಗಳ ಶಿಕ್ಷಣ ಪ್ರೇಮ

Wednesday, November 29th, 2017
students-education

ಸುರತ್ಕಲ್‌ : ಮುಕ್ಕದಲ್ಲಿರುವ ಶ್ರೀನಿವಾಸ್‌ ದಂತ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಸರಕಾರಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾರ್ಯಕ್ರಮದ ಮೂಲಕ ಸಹಾಯ ಹಸ್ತ ಚಾಚಿದ್ದು, ಸ್ವಂತ ಖರ್ಚಿನಿಂದ 92 ಮಕ್ಕಳಿಗೆ ಶಾಲಾ ಬ್ಯಾಗ್‌ ವಿತರಿಸಿದ್ದಾರೆ. ಮಕ್ಕಳ ದಿನಾಚರಣೆಯಂದು ವಿದ್ಯಾರ್ಥಿಗಳು ಆಹಾರ ಖಾದ್ಯ ತಯಾರಿಸಿ ಅದನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿದ್ದರು. ಉಳಿದ ಹಣದಿಂದ ಚೇಳಾಯಿರಿನ ಕಳವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಂಗಳವಾರ ಶಾಲಾ ಬ್ಯಾಗ್‌ ವಿತರಿಸಿದರು. ಶ್ರೀನಿವಾಸ್‌ ಸಮೂಹ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕ […]