Blog Archive

ಮದುವಣಗಿತ್ತಿಯಂತೆ ಸಿಂಗಾರಗೊಂಡ ದಕ್ಷಿಣ ಕನ್ನಡದ ಮತಗಟ್ಟೆಗಳು

Friday, May 11th, 2018
election-area

ಮಂಗಳೂರು: ರಾಜ್ಯ ವಿಧಾನ ಸಭಾ ಚನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಾಳೆ ಅಂದರೆ ಶನಿವಾರ ನಿರ್ಧರಿಸಲಿದ್ದಾರೆ. ಈ ಚುನಾವಣಾ ಹಬ್ಬಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಐದು ವರ್ಷಕ್ಕೊಮ್ಮೆ ಬರುವ ಈ ಚುನಾವಣೆಯನ್ನು ವಿಧಾನಸಭೆ ಚುನಾವಣೆಯ ಮದಾನ ಹಬ್ಬವಾಗಿ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ. ಪ್ರಮುಖ ಚುನಾವಣಾ ಕಚೇರಿಯಾಗಿರುವ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯನ್ನು ಕಳೆದ ರಾತ್ರಿಯಿಂದಲೇ ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದ ಮತಗಟ್ಟೆಗಳಿಗೆ ತುಳು ಸಂಸ್ಕೃತಿಯ […]

ಮೂಡಬಿದಿರೆಯಲ್ಲಿ ಕಮಲ ಅರಳಿಸುವ ಉಮನಾಥ ಕೋಟ್ಯಾನ್

Friday, May 11th, 2018
umanath-kotiayan

ಮೂಡಬಿದಿರೆ: ಮೂಡಬಿದಿರೆಯ ಉಮನಾಥ ಕೋಟ್ಯಾನ್ ಮೊದಲಿಗೆ ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖ ಹೆಸರು. ರಂಗಭೂಮಿ, ಸಿನಿಮಾ ರಂಗದಲ್ಲಿ ನಟನಾಗಿ ಗುರುತಿಸಕೊಂಡವರು. ಹಿಂದುಳಿದ ಕೃಷಿಕ ಕುಟುಂಬದಲ್ಲಿ ಹುಟ್ಟೆ ಬೆಳೆದ ತನ್ನ ಪರಿಶ್ರಮದಿಂದಲೇ ವಿವಿದ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಕಂಡವರು. ಅನಂತರ ಇಲ್ಲಿನ ಸಂಸ್ಕೃತಿ, ಪರಂಪರೆಯ ಆದಮ್ಯ ಅಭಿಮಾನಿಯಾದ ಉಮನಾಥ ಕೋಟ್ಯಾನ್ ಅವರು ಸಹಜವಾಗಿ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾದವರು. ತನ್ನ ಪ್ರಮಾಣಿಕತೆ, ಪಕ್ಷ ನಿಷ್ಠೆ, ಜನಪರ ಕಾಳಜಿಯ ಕೆಲಸಗಳಿಂದಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ ಜನಮಣ್ಣನೆ ಗಳಿಸಿದವರು. ಬಿಜೆಪಿ […]

ವಿಧಾನಸಭಾ ಚುನಾವಣೆ… ಮತಗಟ್ಟೆಗೆ ತೆರಳಲು ಸಿದ್ಧರಾದ ಅಧಿಕಾರಿಗಳು

Friday, May 11th, 2018
election-vote

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಮತಗಟ್ಟೆಗೆ ತೆರಳಲು ಅಧಿಕಾರಿಗಳು ಸಿದ್ಧಗೊಂಡಿದ್ದಾರೆ. ಇವಿಎಂ ಮಷಿನ್‌‌ಗಳ ಬಾಕ್ಸ್‌‌ಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ಯಾವುದೇ ಚ್ಯುತಿ ಬಾರದಂತೆ ಜಿಲ್ಲಾ ಚುನಾವಣಾ ಆಯೋಗ ನಿಗಾ ವಹಿಸಿದೆ. ದ.ಕ. ಜಿಲ್ಲೆಯಲ್ಲಿ 12,837 ಮತಗಟ್ಟೆ ಅಧಿಕಾರಿಗಳು, 1,295 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 8 ಕ್ಷೇತ್ರಗಳಿಗೆ 13,176 ಮತಗಟ್ಟೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಚುನಾವಣಾ ಕರ್ತವ್ಯ ಮುಕ್ತಾಯವಾದ ಬಳಿಕ […]

ದಕ್ಷಿಣ ಕನ್ನಡದ ನಕ್ಸಲ್ ಪೀಡಿತ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣು

Thursday, May 10th, 2018
ravikanth-gowda

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 12 ರಂದು ಮತದಾನ ಸುಸೂತ್ರವಾಗಿ ನಡೆಯಲು ಬೇಕಾದ ಅಗತ್ಯ ಭಧ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ ತಿಳಿಸಿದ್ದಾರೆ . ಜಿಲ್ಲೆಯಲ್ಲಿ ಮತದಾರರು ನಿರ್ಭೀತಿಯಿಂದ ಮತ ಚಲಾವಣೆ ಮಾಡಿ ಎಂದು ಡಾ. ರವಿಕಾಂತೇ ಗೌಡ ಕರೆನೀಡಿದ್ದು, ಚುನಾವಣೆಗೆ ಇನ್ನು ಎರಡೇ ದಿನಗಳು ಬಾಕಿಯಿರುವ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆ ಜಿಲ್ಲೆಯ ಅತ್ಯಂತ ಸೂಕ್ಷ್ಮ ಮತಗಟ್ಟೆಗಳ ಮೇಲೆ ಕಣ್ಣಿರಿಸಿದ್ದು ಭದ್ರತೆಗೆ ಎಲ್ಲಾ ಕ್ರಮಗಳನ್ನು ಕೈ […]

ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆ: ಶಶಿಕಾಂಥ್ ಸೆಂಥಿಲ್

Thursday, May 10th, 2018
sesikanth-senthil

ಮಂಗಳೂರು: ಮತದಾನದ ದಿನ ಜನರಿಗೆ ಅನುಕೂಲವಾಗಲು ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಬಸ್ಸುಗಳು ಸಂಚಾರ ನಡೆಸಲಿವೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದಾರೆ. 160 ಕೆಎಸ್ಆರ್‌ಟಿಸಿಯ ಬಸ್ಸುಗಳು ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಸಂಚಾರ ನಡೆಸಲಿವೆ. ಮತದಾನ ಮಾಡಲು ಆಗಮಿಸುವ ಜನರು ಉಚಿತವಾಗಿ ಇವುಗಳಲ್ಲಿ ಪ್ರಯಾಣಿಸಬಹುದಾಗಿದೆ. ‘ಎಲೆಕ್ಷನ್ ಸ್ಪೆಷಲ್’ ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಮೇ 12ರ […]

ದಕ್ಷಿಣ ಕನ್ನಡ ಜಿಲ್ಲೆಯ ‘ಬಿಜೆಪಿ’ ಪ್ರಣಾಳಿಕೆ ಬಿಡುಗಡೆ

Monday, May 7th, 2018
nalin-kumar

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಉತ್ತರ ಪ್ರದೇಶ ಸಚಿವ ಮಹೇಂದ್ರ ಸಿಂಗ್ ಸಮ್ಮುಖದಲ್ಲಿ ಸಂಸದರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಂಸದರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ನಮೋ ಪಕ್ಷ ಕಾರ್ಯಕರ್ತರಲ್ಲಿ ಹೊಸ ಹುರುಪು

Saturday, May 5th, 2018
narendra-modi

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಮೇ 1ರಂದು ಉಡುಪಿಗೆ ಆಗಮಿಸಿದ್ದ ಮೋದಿ ಕಮಲ ಪಾಳಯದಲ್ಲಿ ಸಂಚಲನ ಉಂಟು ಮಾಡಿದ್ದರು. ಇದೀಗ ಮಂಗಳೂರಿನಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ನಮೋ ಪಕ್ಷ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದ್ದಾರೆ. ಮಂಗಳೂರಿನ ಕೇಂದ್ರ(ನೆಹರೂ) ಮೈದಾನದಲ್ಲಿ ಸಂಜೆ ಆರು ಗಂಟೆಗೆ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಕರಾವಳಿಯಲ್ಲಿ ಇದು ಅವರ ಏಕೈಕ ಕಾರ್ಯಕ್ರಮವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯ ಸ್ವಾಗತಕ್ಕೆ ಬಿಜೆಪಿ ವತಿಯಿಂದ ಭರ್ಜರಿ ತಯಾರಿಯನ್ನು ಮಾಡಲಾಗಿದೆ. ಈಗಾಗಲೇ […]

ನೀತಿ ಸಂಹಿತೆ ಎಫೆಕ್ಟ್: ರಕ್ತಕ್ಕಾಗಿ ಪರದಾಡುತ್ತಿರುವ ರೋಗಿಗಳು

Thursday, May 3rd, 2018
hospital

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಬಿಸಿ ಈಗ ರಕ್ತದಾನಕ್ಕೂ ತಟ್ಟಿದ್ದು, ತುರ್ತು ಚಿಕಿತ್ಸೆಗೆ ರಕ್ತಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಂಡು ಬಂದಿದ್ದು , ತುರ್ತು ಚಿಕಿತ್ಸೆಗಾಗಿ ರೋಗಿಯ ಕುಟುಂಬಸ್ಥರು ಈಗ ರಕ್ತದಾನಿಗಳನ್ನು ಹುಡುಕುವಂತಾಗಿದೆ. ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಈ ಸಮಸ್ಯೆ ತಲೆದೋರಿದ್ದು, ರೋಗಿಯ ಸಂಬಂಧಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯಾಗಿ ರಕ್ತದ ಕೊರತೆಗೆ ಪ್ರಮುಖ ಕಾರಣ ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ. […]

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ

Monday, April 30th, 2018
Ankitha

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆ ಮೊದಲ  ಸ್ಥಾನವನ್ನು ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ  ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಶೇ. 91.49 ಫಲಿತಾಂಶವನ್ನು ದಾಖಲಿಸಿರುವ ದಕ್ಷಿಣ ಕನ್ನಡ ಕಳೆದ ವರ್ಷ 89.92 ಫಲಿತಾಂಶವನ್ನು ದಾಖಲಿಸಿತ್ತು. ದ.ಕ. ಜಿಲ್ಲೆ ಈ ಹಿಂದಿನ ಸತತ ಮೂರು ವರ್ಷಗಳಿಂದ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧನೆ  ಮಾಡಿತ್ತು.  ಶೇಕಡಾವಾರು ಫಲಿತಾಂಶದಲ್ಲಿಯೂ ಕಳೆದೆರಡು ವರ್ಷಗಳಿಂದ ಏರಿಕೆಯನ್ನು […]

ಪ್ರಚಾರದ ಅಖಾಡ ರಂಗೇರಿಸಲು ‘ಕೈ’ ವಿಶೇಷ ಕಾರ್ಯತಂತ್ರ: ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ

Wednesday, April 25th, 2018
rahul-gandhi

ಬೆಂಗಳೂರು: ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದುವರೆಗೂ ನಾಮಪತ್ರ ಸಲ್ಲಿಕೆ ಸಿದ್ಧತೆ, ಟಿಕೆಟ್ ಸಿಗದ ಆತಂಕ, ಬಂಡಾಯ, ಟಿಕೆಟ್ ಸಿಗುವ ನಿರೀಕ್ಷೆ ಇತ್ಯಾದಿಗಳಲ್ಲಿ ಪ್ರಚಾರದತ್ತ ಹೆಚ್ಚು ಗಮನಹರಿಸದ ನಾಯಕರು ಇಂದಿನಿಂದ ಇದೇ ಕಾಯಕದಲ್ಲಿ ನಿರತವಾಗಲಿದ್ದಾರೆ. ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಪ್ರಚಾರ ನಡೆಸಿದರೆ, ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಮಾಡಲಿದೆ. ರಾಷ್ಟ್ರೀಯ ಪಕ್ಷಗಳಿಂದ ಬಂಡಾಯವೆದ್ದು ಬಂದಿರುವವರಿಂದ ನಿರೀಕ್ಷೆಗೂ ಮೀರಿದ ಉತ್ಸಾಹ ಪಡೆದಿರುವ ಜೆಡಿಎಸ್ ಕೂಡ ಹೊಸ ಉತ್ಸಾಹದೊಂದಿಗೆ ಪ್ರಚಾರಕಣಕ್ಕಿಳಿಯಲಿದೆ. ಇದರ ಜತೆ ಆಮ್ ಆದ್ಮಿ ಪಕ್ಷ, […]