Blog Archive

ದುರಸ್ತಿಯಾಗದ ರಸ್ತೆ: ಮತದಾನ ಬಹಿಷ್ಕಾರಕ್ಕೆ ಬಂದರು-ಮೊಗ್ರು ಗ್ರಾಮಸ್ಥರ ನಿರ್ಧಾರ

Monday, March 12th, 2018
belthangady

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಲಮಾಡ-ಮುಗೇರಡ್ಕ ರಸ್ತೆ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಬಂದರು-ಮೊಗ್ರು ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಬೆಳ್ತಂಗಡಿ-ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗ ಇದಾಗಿದೆ. ಅಲ್ಲದೆ ಬಂದರು-ಮೊಗ್ರು ಗ್ರಾಮದಲ್ಲಿ ಸುಮಾರು 90ಕ್ಕೂ ಅಧಿಕ ಕುಟುಂಬಗಳಿವೆ. ಆದರೆ ರಸ್ತೆಯ ದುರಸ್ತಿ ಆಗದ ಕಾರಣ 90ಕ್ಕೂ ಅಧಿಕ ಕುಟುಂಬದ 500ಕ್ಕೂ ಅಧಿಕ ಜನ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ […]

ದಕ್ಷಿಣ ಕನ್ನಡ ಜಿಲ್ಲೆಯ ಭಯೋತ್ಪಾದಕ ಫ್ಯಾಕ್ಟರಿಗಳಿಗೆ ಬೀಗ: ರಾಮಲಿಂಗಾ ರೆಡ್ಡಿ

Wednesday, March 7th, 2018
reddy-congrss

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭಯೋತ್ಪಾದಕರ ಎರಡು ಫ್ಯಾಕ್ಟರಿಗಳನ್ನು ಬಂದ್ ಮಾಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಗುಡುಗಿದ್ದಾರೆ. ಸೋಮವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಘ ಪರಿವಾರದ ಫ್ಯಾಕ್ಟರಿ ಹಾಗೂ ಎಸ್ ಡಿಪಿಐ, ಪಿಎಫ್ಐ ಫ್ಯಾಕ್ಟರಿಗಳನ್ನು ಬಂದ್ ಮಾಡ್ತೇವೆ,” ಎಂದು ತಿಳಿಸಿದ್ದಾರೆ. “ಪಿಎಫ್ಐ ಬ್ಯಾನ್ ಮಾಡಿ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಪಿಎಫ್ಐ ಯಾಕೆ ಬ್ಯಾನ್ ಮಾಡಿಲ್ಲ?” ಎಂದು ಪ್ರಶ್ನಿಸಿದ ಅವರು, […]

ದಕ್ಷಿಣ ಕನ್ನಡದಲ್ಲಿ ಈ ಬಾರಿ 22,513 ಹೊಸ ಮತದಾರರು

Monday, March 5th, 2018
election

ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ದಪಡಿಸಿದ್ದು ಜಿಲ್ಲೆಯಲ್ಲಿ ಒಟ್ಟು 16,66,814 ಮತದಾರರಿದ್ದಾರೆ. ಇವರಲ್ಲಿ 8,20,764 ಪುರುಷ ಹಾಗೂ 8,46,050 ಮಂದಿ ಮಹಿಳಾ ಮತದಾರರಾಗಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 22,513 ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಇದರಲ್ಲಿ 10,461 ಪುರುಷ ಮತ್ತು 12,053 ಮಹಿಳಾ ಮತದಾರರಾಗಿದ್ದಾರೆ. ನೋಂದಣಿಯಾದ ಮತದಾರರ ಸಂಖ್ಯೆ ಮತ್ತು 2018 ರ ಅಂದಾಜು ಜನಸಂಖ್ಯೆಯ ವಿಶ್ಲೇಷಣೆ ನಡೆಸಿದರೆ ಕ್ರಮವಾಗಿ ಜಿಲ್ಲೆಯಲ್ಲಿ ಶೇ. 73.02 […]

ದಿವ್ಯ ಉಪದೇಶ ಹಾಗೂ ಆಧ್ಯಾತ್ಮಿಕ ಸಂದೇಶದೊಂದಿಗೆ ಧರ್ಮ ಜಾಗೃತಿ

Friday, March 2nd, 2018
veerendra-heggade

ಧರ್ಮಸ್ಥಳ: ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದ ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಪರಂಧಾಮವನ್ನು ಹೊಂದಿದ ವಿಚಾರ ತಿಳಿದು ವಿಷಾದವಾಯಿತು. 1974ರಲ್ಲಿ ಪೂಜ್ಯರು ಧರ್ಮಸ್ಥಳ ಕ್ಷೇತ್ರಕ್ಕೆ ಅವರು ಪಾದಚಾರಿಗಳಾಗಿಯೇ ಬಂದಿದ್ದರು. ರಾಷ್ಟ್ರದ ಅತ್ಯುನ್ನತ ಗೌರವದ ಸ್ಥಾನವಾದ ಕಂಚಿ ಕಾಮಕೋಟಿ ಪೀಠದಲ್ಲಿದ್ದರೂ, ಪೂಜ್ಯರು ಭಕ್ತರೊಂದಿಗೆ ಸರಳತೆಯೊಂದಿಗೆ ಬೆರೆಯುವ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದರು. ಅವರು ಧರ್ಮಸ್ಥಳಕ್ಕೆ ಬಂದಾಗ ತಮಿಳುನಾಡಿನ ಆನಂದ ವಿಗಟನ್ ಎಂಬ ಪ್ರಸಿದ್ಧ ಪತ್ರಿಕೆಯ ಸಂಪಾದಕರನ್ನೂ ಕರೆದುಕೊಂಡು ಬಂದು ಧರ್ಮಸ್ಥಳ ಮತ್ತು ಕರ್ನಾಟಕದ ಪವಿತ್ರ ಕ್ಷೇತ್ರಗಳನ್ನು ತಮಿಳುನಾಡಿನ ಜನರಿಗೆ […]

ಮಾರ್ಚ್‌ನಲ್ಲಿ ದಕ್ಷಿಣ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ ರಾಹುಲ್ ಗಾಂಧಿ

Wednesday, February 28th, 2018
rahul-gandhi

ಮಂಗಳೂರು: ಮುಂಬೈ-ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಪ್ರವಾಸದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 10ಕ್ಕೂ ಮೊದಲು ರಾಹುಲ್ ಜಿಲ್ಲೆಯಲ್ಲಿ ಸಂಚಾರ ನಡೆಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಟಕೇಶ್ ಈ ಕುರಿತು ಮಾಹಿತಿ ನೀಡಿದರು. ‘ಮಾರ್ಚ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಉಡುಪಿ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ’ ಎಂದರು. ಸವದತ್ತಿ ಯಲ್ಲಮ್ಮನಿಗೆ ಉಘೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್! ‘ಮೂರು ಅಥವ […]

ಮಂಗಳೂರಿನ ಜನ ಚಾಕುವಿನಿಂದ ಚುಚ್ಚುವವರು: ನಾಗಲಕ್ಷ್ಮಿಬಾಯಿ

Tuesday, February 27th, 2018
nagalakshmi

ಮಂಗಳೂರು:”ಉತ್ತರ ಕರ್ನಾಟಕ ಭಾಗದ ಜನರು ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಆದರೆ ಮಂಗಳೂರಿನ ಜನ ಬೀದಿಯಲ್ಲೇ ಚೂರಿಯಿಂದ ಇರಿಯುತ್ತಾರೆ” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ವಿವಾದಾತ್ಮಕ ಹೇಳಿಕೆ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪುತ್ತೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 20ರಂದು ಸುಳ್ಯದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಕೊಲೆ ಪ್ರಕರಣದ ಕುರಿತು ಮಾತನಾಡಿದರು. ಮಂಗಳೂರು ಭಾಗದ ಜನ ಶಾಂತಿ, ಸೌಮ್ಯತೆಗೆ, ಸೌಜನ್ಯತೆಗೆ ಬೆಲೆ ಕೊಡುವ ಜನ ಎಂಬ […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿದ ಗೋಕಳ್ಳರು

Friday, February 23rd, 2018
subramanya

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದನಗಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಮಾರಕಾಸ್ತ್ರಗಳನ್ನು ಹಿಡಿದು ಮನೆ ಮಂದಿಗೆ ಬೆದರಿಕೆ ಒಡ್ಡಿ ಹಟ್ಟಿಯಿಂದ ಹಸುಗಳನ್ನು ಕದ್ದೊಯ್ಯುತ್ತಿದ್ದ ದನಗಳ್ಳರು ಈಗ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಮ್ಮ ಕರಾಳ ಹಸ್ತ ಚಾಚಿದ್ದಾರೆ. ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ರಾಜಾರೋಷವಾಗಿ ದನಕಳ್ಳತನ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಮಹಿಳಾ ಭಕ್ತರ ಮೇಲೆ ದನಕಳ್ಳರು ತಲವಾರು ಬೀಸಿ ಬೆದರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು ಕ್ಷೇತ್ರದ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಸುಬ್ರಹ್ಮಣ್ಯದಲ್ಲಿ […]

ಮೊದಲು ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಪಡೆಯಬೇಕು: ಅನಂತ್‌‌ಕುಮಾರ್ ಹೆಗಡೆ

Monday, February 19th, 2018
ananth-kumar-hegde

ಮಂಗಳೂರು: ಕನ್ನಡದ ಪರವಾಗಿ ಹೋರಾಟ ಮಾಡುವ ಮೊದಲು ಕನ್ನಡದಲ್ಲಿ ಸರಿಯಾಗಿ ಬರೆಯುವ ಯೋಗ್ಯತೆಯನ್ನು ಪಡೆಯಬೇಕು ಎಂದು ಕೇಂದ್ರ ಸಚಿವ ಅನಂತ್‌‌ಕುಮಾರ್ ಹೆಗಡೆ ಹೇಳಿದ್ದಾರೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‌‌ನಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂಗ್ಲೀಷ್ ಹಾವಳಿ ಹೆಚ್ಚುತ್ತಿದೆ ಎನ್ನುವ ಹೋರಾಟಗಳು ನಿರಂತರವಾಗಿ ನಡೆಯುತ್ತಿದೆ. ಆದರೆ, ಹೀಗೆ ಹೋರಾಟ ಮಾಡುವ, ಒದರುವ ನಾವೇ ಸರಿಯಾಗಿ ಕನ್ನಡ ಬರೆಯುವ ಯೋಗ್ಯತೆಯನ್ನು ಕಳೆದುಕೊಂಡಿದ್ದೇವೆ. ಇಂದು ಕನ್ನಡವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುವ ಬದಲು ಇಂಗ್ಲಿಷ್‌‌ನ್ನು ಕನ್ನಡಕ್ಕೆ ತರ್ಜುಮೆ ಮಾಡುವಂತಹ […]

ಕಾಲೇಜು ರಂಗೋತ್ಸವದಿಂದ ರಂಗಾಸಕ್ತರಿಗೆ ಪ್ರೇರಣೆ-ವಿ.ಜಿ.ಪಾಲ್

Friday, February 16th, 2018
prize

ಮಂಗಳೂರು : ವಿದ್ಯಾರ್ಥಿಗಳಲ್ಲಿನ ರಂಗ ಸಾಮರ್ಥ್ಯದ ಅನಾವರಣಕ್ಕೆ ವೇದಿಕೆಯಾಗಿ ನಡೆಯುತ್ತಿರುವ ಕಾಲೇಜು ರಂಗೋತ್ಸವ ಯುವ ಜನಾಂಗದಲ್ಲಿ ರಂಗ ಸ್ಫೂರ್ತಿಯಾಗಲಿದೆ ಎಂದು ಹಿರಿಯ ರಂಗ ಕರ್ಮಿ , ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರಾದ ವಿ.ಜಿ. ಪಾಲ್ ತಿಳಿಸಿದರು . ಅವರು ಶ್ರೀಭಾರತೀ ಕಾಲೇಜು ಸಭಾಂಗಣದಲ್ಲಿ ಜರಗಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಂಗಾಯಣ ಮೈಸೂರು ವತಿಯಿಂದ ಹಮ್ಮಿಕೊಂಡ ಕಾಲೇಜು ರಂಗೋತ್ಸವ-2018 ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾನಸಿಕ ಬೆಳವಣಿಗೆ ಮತ್ತು ಸೃಜನ […]

ಉಗ್ರ ಬಿನ್‌ ಲಾಡೆನ್‌ ಉತ್ಸವ ಆಚರಿಸಲಿ: ಸಂಸದ ನಳಿನ್‌

Friday, February 16th, 2018
nalin-kumar

ಮಂಗಳೂರು: ಬಹಮನಿ ಉತ್ಸವ ಆಚರಿಸಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಉತ್ಸವ ಆಚರಿಸಲಿ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಲೇವಡಿ ಮಾಡಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹಿರಿಮೆಯಾಗಿದ್ದ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ದಂಗೆಕೋರ ಬಹಮನಿ ಸುಲ್ತಾನರು, ಶ್ರೀಮಂತ ವಿಜಯನಗರ ಸಾಮ್ರಾಜ್ಯವನ್ನು ಹಾಳು ಹಂಪೆ ಮಾಡಿದ್ದರು. ಈ ಕರಾಳ ಘಟನೆಯ ಅರಿವಿದ್ದರೂ ಅಲ್ಪಸಂಖ್ಯಾತರ ಓಲೈಕೆಗೆ ಯಾವ ರೀತಿಯಲ್ಲಿ ಬೇಕಾದರೂ ನಡೆದುಕೊಳ್ಳುವ ರಾಜಕಾರಣವನ್ನು ಮಾಡುತ್ತಿದ್ದಾರೆ […]