Blog Archive

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘದ ಪ್ರತಿಭಟನೆ

Friday, September 21st, 2018
protest

ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳೂರಿನಲ್ಲಿ ಅಖಿಲ ಭಾರತ ಕಾರ್ಮಿಕ ಸಂಘದ ನೇತೃತ್ವದಲ್ಲಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಬೀಡಿ ಕಾರ್ಮಿಕರ ಆಸ್ಪತ್ರೆ ನಿರ್ಮಿಸುವ ಬಗ್ಗೆ ಮನವಿ ಸಲ್ಲಿಸಿದರು. ಅಲ್ಲದೆ ಮಸಾಜ್ ಪಾರ್ಲರ್, ಕ್ಲಬ್-ಪಬ್ ಹಾಗೂ ಇನ್ನಿತರ ಅಕ್ರಮ ದಂಧೆಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ವೇಳೆ ಪ್ರತಿಭಟನಾಕಾರರು ಕಾರ್ಮಿಕ ಇಲಾಖೆಯ […]

ರಫೇಲ್ ಡೀಲ್​ನಲ್ಲಿ ಅವ್ಯವಹಾರ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ

Tuesday, September 11th, 2018
congress

ಮಂಗಳೂರು: ರಫೇಲ್ ಡೀಲ್ನಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಮಂಗಳೂರಿನ ಜ್ಯೋತಿ ಸರ್ಕಲ್ನಿಂದ ದ.ಕ. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ರಮನಾಥ ರೈ, ರಫೇಲ್ ಡೀಲ್ನ ಹಗರಣದ ಮೂಲಕ ಬಿಜೆಪಿ ತನ್ನ ಖಜಾನೆಯನ್ನು ತುಂಬಿಸಿಕೊಂಡಿದೆ ಎಂದು ಆರೋಪಿಸಿದರು. ಅಲ್ಲದೆ ಬೋಫೋರ್ಸ್ ನಂತೆ ರಫೇಲ್ ಡೀಲ್ ಹಗರಣದ ಬಗ್ಗೆಯೂ ತನಿಖೆಯಾಗಲಿ ಎಂದು […]

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಬಿಜೆಪಿಗೆ 25, ಉಳ್ಳಾಲದಲ್ಲಿ ಕಾಂಗ್ರೆಸಿಗೆ 13, ಬಂಟ್ವಾಳದಲ್ಲಿ ಕಾಂಗ್ರೆಸಿಗೆ 12

Monday, September 3rd, 2018
puttur

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಬಿಜೆಪಿ ಪಾಲಾಗಿದೆ. ಆಗಸ್ಟ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆಗೆ ಚುನಾವಣೆ ನಡೆದಿತ್ತು. ಪುತ್ತೂರು ನಗರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜಿದ್ದಾಜಿದ್ದಿಯ ಹೋರಾಟದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪುತ್ತೂರಿನಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಧೂಳಿಪಟವಾಗಿದೆ. ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇದೇ ಮೊದಲಬಾರಿಗೆ ಪುತ್ತೂರು ನಗರಸಭೆಯಲ್ಲಿ ಎಸ್ ಡಿಪಿಐ ಖಾತೆ ತೆರೆದಿದೆ. ಆಗಸ್ಟ್ 31 ರಂದು […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 11ರವರೆಗೆ ಶೇ 30.78ರಷ್ಟು ಮತ ಚಲಾವಣೆ

Friday, August 31st, 2018
election

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್ ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಎಲ್ಲ ವಾರ್ಡ್ ಗಳಲ್ಲಿ ಏಕಕಾಲಕ್ಕೆ ಮತದಾನ ಆರಂಭವಾಯಿತು. ಬೆಳಿಗ್ಗೆ 9 ಗಂಟೆ ವೇಳೆಗೆ ಉಳ್ಳಾಲದಲ್ಲಿ ಶೇಕಡ 13ರಷ್ಟು, ಪುತ್ತೂರಿನಲ್ಲಿ ಶೇ 14ರಷ್ಟು ಮತ್ತು ಬಂಟ್ವಾಳದಲ್ಲಿ ಶೇ 15ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 11 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 30.78ರಷ್ಟು ಮತದಾನವಾಗಿದೆ. ಉಳ್ಳಾಲ ನಗರಸಭೆಯಲ್ಲಿ ಶೇ 28.70ರಷ್ಟು, […]

ಸಂಪಾಜೆ ಬಳಿ ಭಾರೀ ಭೂ ಕುಸಿತ..3 ಮನೆ ಧ್ವಂಸ!

Saturday, August 18th, 2018
road

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಬಳಿ ಭಾರೀ ಭೂ ಕುಸಿತ ಆಗಿ, 3 ಮನೆಗಳು ಧ್ವಂಸಗೊಂಡಿವೆ. ಮಣ್ಣಿನಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಮಹಿಳೆಯೊಬ್ಬರು ಮಣ್ಣಿನಡಿಗೆ ಸಿಲುಕಿರುವ ಶಂಕೆ ಇದೆ. ಮಣ್ಣಿನಡಿಗೆ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ. ಸಂಪಾಜೆಯಿಂದ ಮಡಿಕೇರಿಗೆ ಸಾಗುವ ಮಾರ್ಗ ಮದ್ಯದ ಜೋಡುಪಾಲ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಗುರುವಾರ ಸಂಜೆಯಿಂದ ಗುಡ್ಡ ಮೇಲಿನಿಂದಲೇ ಜಾರತೊಡಗಿತ್ತು. ಶುಕ್ರವಾರದಂದು ಏಕಾಏಕಿ ಗುಡ್ಡ ಜರುಗಿದೆ. ಈ ಪರಿಣಾಮ ಮೂರು ಮನೆಗಳು […]

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಜಲಾಶಯ ಕಟ್ಟಿದಲ್ಲ: ಸಿಎಂ ಕುಮಾರಸ್ವಾಮಿ

Tuesday, August 14th, 2018
kumarswamy-3

ಮಂಗಳೂರು: ಕಾವೇರಿ ನದಿ ನೀರು ಬಿಡಲು ತಮಿಳುನಾಡು ಸರ್ಕಾರ ಕಾವೇರಿ ನ್ಯಾಯಧಿಕರಣದಲ್ಲಿ ಅಫಿಡವಿಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯಲ್ಲಿ ಪ್ರತಿಕ್ರಿಯಿಸಿದ ‌ಮುಖ್ಯಮಂತ್ರಿ ಕುಮಾರಸ್ವಾಮಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಜಲಾಶಯ ಕಟ್ಟಿದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ನದಿಯಿಂದ ‌ಹೆಚ್ಚುವರಿ‌‌ ನೀರು ಬಿಡಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ನ್ಯಾಯಾಧಿಕರಣದಲ್ಲಿ ಕಾಲ ಕಾಲಕ್ಕೆ ನೀರು ಬಿಡುವಂತೆ ವಾದ ಮಾಡಿದೆ. ರಾಜ್ಯದ ಜನರ ತೆರಿಗೆಯಿಂದ ಜಲಾಶಯ ಕಟ್ಟಲಾಗಿದೆ. ತಮಿಳುನಾಡು ಅನಗತ್ಯ ಸಂಘರ್ಷಕ್ಕೆ ಅವಕಾಶ ಮಾಡಬಾರದು ಎಂದರು. […]

ಮಳೆಯ ತೀವ್ರತೆಯಿಂದ ಇಂದೂ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಣೆ..!

Tuesday, August 14th, 2018
heavy-rain

ಮಂಗಳೂರು: ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ಇಂದೂ ಕೂಡ ರಜೆ ಘೋಷಿಸಲಾಗಿದೆ. ವರ್ಷಧಾರೆಗೆ ಕರಾವಳಿಯ ಜನ ನಲುಗಿ ಹೋಗಿದ್ದಾರೆ.ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.ಮಳೆಯ ತೀವ್ರತೆಯಿಂದ ಇಂದೂ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನದಿಗಳು ತುಂಬಿ ಹಲವೆಡೆ ನೆರೆ ಕಾಣಿಸಿಕೊಂಡಿದೆ.

16 ಮೊಬೈಲ್​ನ್ನು ಎಗರಿಸಿದ್ದ ಆರೋಪಿ ಪೊಲೀಸರ ವಶಕ್ಕೆ..!

Monday, August 13th, 2018
arrested

ಮಂಗಳೂರು: ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರಿಗೆ ಕಳುಹಿಸಲಾದ ಪಾರ್ಸಲ್ಅನ್ನು ತಲುಪಿಸದೆ 16 ಮೊಬೈಲ್ನ್ನು ಎಗರಿಸಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದ ರವಿ ಎಂಬುವನು ಬೆಂಗಳೂರಿನಿಂದ ಪುತ್ತೂರುಗೆ ತಲುಪಿಸಬೇಕಾಗಿದ್ದ ಮೊಬೈಲ್ ಪಾರ್ಸಲ್ಗೆ ಕನ್ನ ಹಾಕಿ ಇದೀಗ ಬಂಧಿತನಾಗಿದ್ದಾನೆ. ಈತ ಬೆಂಗಳೂರಿನ ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಪಾರ್ಸಲ್ಅನ್ನು ಅವರ ಪುತ್ತೂರು ಪ್ರತಿನಿಧಿಗೆ ತಲುಪಿಸಬೇಕಿತ್ತು. ಆದರೆ ಅದನ್ನು ಸಂಬಂಧಪಟ್ಟವರಿಗೆ ತಲುಪಿಸದೆ, 4 ಪಾರ್ಸಲ್ನಲ್ಲಿದ್ದ 2.66 ಲಕ್ಷ ಮೌಲ್ಯದ ಒಟ್ಟು […]

ಜಿಲ್ಲೆಯಾದ್ಯಂತ ಭಾರಿ ಮಳೆ..ಹಲವೆಡೆ ತಗ್ಗು ಪ್ರದೇಶಗಳು ಜಲಾವೃತ!

Saturday, August 11th, 2018
heavy-rain

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಂಗಳೂರು ನಗರದ ಕೊಟ್ಟಾರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕೊಟ್ಟಾರದಲ್ಲಿ ಕೃತಕ ನೆರೆ ಪರಿಸ್ಥಿತಿ ಉಂಟಾಗಿದ್ದು, ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿರುವ ನೇತ್ರಾವತಿ, ಫಲ್ಗುಣಿ, ನಂದಿನಿ, ಕುಮಾರಧಾರ ನದಿಗಳು ತುಂಬಿ ಹರಿಯುತ್ತಿವೆ.

ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮನ..!

Tuesday, July 31st, 2018
dakshina-kannada

ಮಂಗಳೂರು: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಮಳೆರಾಯ ಕೊಂಚ ಬಿಡುವು ಪಡೆದಿದ್ದಾನೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಭತ್ತದ ನಾಟಿ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಕೃಷಿಕರು ಕೈಚೆಲ್ಲಿ ಕೂತಿದ್ದಾರೆ. ಆದರೆ ಈ ನಡುವೆ ದೂರದ ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. 125 ಕೃಷಿ ಕಾರ್ಮಿಕರ ಈ ತಂಡ ಮಂಗಳೂರು ತಾಲೂಕಿನ ಬಜಪೆ ಪರಸರದಲ್ಲಿ ಬೀಡು ಬಿಟ್ಟಿದ್ದು, […]