Blog Archive

ಕ್ಲಬ್​ವೊಂದರಲ್ಲಿ ಜೂಜಾಟ..19 ಮಂದಿ ವಶಕ್ಕೆ!

Monday, July 30th, 2018
jootata

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿನ ಕ್ಲಬ್ವೊಂದರಲ್ಲಿ ಜೂಜಾಟ ಆಡುತ್ತಿದ್ದ 19 ಮಂದಿಯನ್ನು ಬೆಳ್ತಂಗಡಿ ಪೊಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಉಜಿರೆಯಲ್ಲಿರುವ ಕ್ಲಬ್ನಲ್ಲಿ ಜೂಜಾಟವಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 19 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಎರಡು ಲಕ್ಷದ 18 ಸಾವಿರ ನಗದು , 52 ಇಸ್ಪೀಟು ಎಲೆಗಳು, 4 ದ್ವಿಚಕ್ರ ವಾಹನ, ಪೀಠೋಪಕರಣಗಳು ಹಾಗೂ 22 ವಿವಿಧ ಕಂಪನಿಯ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾರಿ ಮಳೆ..ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ‌ ಘೋಷಣೆ..!

Friday, July 20th, 2018
belthandady

ಮಂಗಳೂರು: ಪಶ್ಚಿಮಘಟ್ಟದ ತಪ್ಪಲಲ್ಲಿರುವ ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಶಾಲೆಗಳಿಗೆ ರಜೆ‌ ಘೋಷಿಸಲಾಗಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೂ ಭಾರೀ ಸಮಸ್ಯೆ ಉಂಟಾಗಿದೆ. ಹೀಗಾಗಿ ಬೆಳ್ತಂಗಡಿ ತಹಶೀಲ್ದಾರ್ ಮದನ್ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ನಾನು ಕೊಡಗು, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಎಲ್ಲಾ ಜಿಲ್ಲೆಗಳ ಮುಖ್ಯಮಂತ್ರಿ: ಕುಮಾರಸ್ವಾಮಿ

Saturday, July 14th, 2018
kumarswamy

ಬೆಂಗಳೂರು : ನಾನು ಜನರ ಮಧ್ಯೆ ಬದುಕುವ ಸಿಎಂ, ವಿಧಾನಸೌದದ ಮೂರನೇ ಮಹಡಿಯಲ್ಲಿ ಕೂರುವವನಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕ ರಾಜ್ಯ ವಿಕಲಚೇತನರ ಸೇವಾಸಂಸ್ಥೆಗಳ ಒಕ್ಕೂಟದಿಂದ ಆಯೋಜನೆಗೊಂಡಿರು ಮೈಸೂರು ಬ್ಯಾಂಕ್ ಸರ್ಕಲ್ನ ಕಾವೇರಿ ಭವನದಲ್ಲಿ ನಡೆಯುತ್ತಿರುವ ಸ್ಪಂದನ 2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಹಾಗೂ ಜನರ ಮಧ್ಯೆ ಎತ್ತಿಕಟ್ಟಲು ನೋಡಬೇಡಿ ಯಾರು ಬೇಕಾದರೂ ಬಂದು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ನನ್ನ ಶರ್ಟ್ ಹಿಡಿದು ಕೇಳಲಿ ಏನಾದರೂ ಅಗತ್ಯ ಇದ್ದರೆ. 86% ಅಂಕದೊಂದಿಗೆ […]

ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಇಂದಿರಾ ಕ್ಯಾಂಟೀನ್​ಗಳು ಮಂಜೂರು..!

Friday, July 13th, 2018
indira-canteen

ಮಂಗಳೂರು: ಒಂದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆನೆಗುದಿಗೆ ಬೀಳುತ್ತವೆ ಎಂಬ ಸಾರ್ವಜನಿಕರ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರಕರಣ ಸಾಕ್ಷಿಯಾಗುತ್ತಿದೆ. ನೆನೆಗುದಿಗೆ ಬಿದ್ದ ಅಂತಹ ಯೋಜನೆಗಳ ಪಟ್ಟಿಯಲ್ಲಿ ಈಗ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ಕೂಡ ಸೇರ್ಪಡೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಇಂದಿರಾ ಕ್ಯಾಂಟೀನ್ಗಳು ಮಂಜೂರಾಗಿದ್ದವು. ಆದರೆ ಇದೀಗ ಕಾರ್ಯಾಚರಿಸುತ್ತಿರುವುದು 5 ಕ್ಯಾಂಟೀನ್ಗಳು ಮಾತ್ರ. ಮಂಜೂರಾದ 10 […]

ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ‌ ಭಾರೀ ಮಳೆ..ಹವಾಮಾನ ಇಲಾಖೆಯಿಂದ ಎಚ್ಚರ!

Wednesday, July 11th, 2018
karavali

ಮಂಗಳೂರು: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಅಬ್ಬರಿಸತೊಡಗಿದ್ದಾನೆ . ಎರಡು ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಕ್ಷೀಣಗೊಂಡಿತ್ತು. ಆದರೆ ಇಂದು ಮಳೆ ಅಬ್ಬರ ಮತ್ತೇ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಜಡಿ ಮಳೆ ಆರಂಭಗೊಂಡಿದೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಮಂಗಳೂರಿನಾದ್ಯಂದ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು […]

ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ವತಿಯಿಂದ ಬಿ.ಎ.ಮೊಹಿದಿನ್ ರಿಗೆ ಸಂತಾಪ ಸೂಚಕ ಸಭೆ

Tuesday, July 10th, 2018
JDS-office

ಮಂಗಳೂರು: ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ ಬಿ.ಎ.ಬಿ.ಎ.ಮೊಹಿದಿನ್ ಅವರು ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞ, ಅಜಾತಶತ್ರು ಆಗಿದ್ದು ಈ ರಾಜ್ಯದ ಸಣ್ಣ ಕೈಗಾರಿಕೆ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ ಎಂದರು. ಕಾರ್ಯಧ್ಯಕ್ಷ ರಾಮಗಣೇಶ್ ಮಾತನಾಡಿ ಅವರು ಪಕ್ಷದಲ್ಲಿ ಎಲ್ಲಾ ಸರ್ವಧರ್ಮದವರನ್ನು ಸಮಾನತೆಯಿಂದ ಹಾಗೂ ಗೌರವದಿಂದ ಕಾಣುತಿದ್ದರು ಎಂದು […]

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸದ ಅನುಭವ..!

Monday, July 9th, 2018
earthqueke

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸದ ಅನುಭವವಾಗಿದೆ. ಮಧ್ಯಾಹ್ನ 12.50 ರ ಸಮಯದಲ್ಲಿ ಸುಳ್ಯ ತಾಲೂಕಿನ ಮಡಪ್ಪಾಡಿ, ಹರಿಹರಪಲ್ಲತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವು ಸೆಕೆಂಡುಗಳ ಕಾಲ‌ ಭೂಮಿ ಕಂಪಿಸಿದ ಅನುಭವ ಜನರಿಗಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ. ಮಧ್ಯಾಹ್ನ 12.55ರ ವೇಳೆಗೆ ಕೆಲ ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಹಲವೆಡೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ..ಕಾಂಪೌಂಡ್ ಕುಸಿದು ಇಬ್ಬರು ಸಾವು!

Saturday, July 7th, 2018
collapse

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಹೆಬ್ಬಾರ್ ಬೈಲ್ ಎಂಬಲ್ಲಿ ಗುಡ್ಡದ ಬದಿಯಲ್ಲಿದ್ದ ಮನೆಗೆ ಗುಡ್ಡ, ಕಾಂಪೌಂಡ್ ಕುಸಿದು ಮನೆಯಲ್ಲಿ ‌ಮಲಗಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪಾರ್ವತಿ (70), ಧನುಷ್ (11) ಎಂದು ಗುರುತಿಸಲಾಗಿದೆ. ಪುತ್ತೂರು ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ‌ ನದಿಗಳು ತುಂಬಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡಬಿದ್ರೆಯಲ್ಲಿ ಶಾಲೆಗಳಿಗೆ ರಜೆ […]

ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ..!

Thursday, July 5th, 2018
protest

ಮಂಗಳೂರು: ಮಧ್ಯಪ್ರದೇಶದ ಮಾಂಡ್ಸರ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನೆಡೆಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮತ್ತೆ ಮುಂದುವರಿದ ಮಳೆ ಅಬ್ಬರ..!

Friday, June 29th, 2018
heavy-rain

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದು ಕೂಡಾ ಮಳೆ ಮುಂದುವರೆದಿದ್ದು, ನದಿಗಳು ತುಂಬಿ ಹರಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿವೆ. ಮಳೆಗೆ ಹಲವೆಡೆ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ಮಳೆ ಅಧಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಕೊಂಚ ಅಸ್ತವ್ಯಸ್ತವಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ರಾತ್ರಿ ಕೊಂಚ ವಿರಾಮ ನೀಡಿದ್ದ ವರುಣ ಮುಂಜಾನೆ ಮತ್ತೆ ತುಂತುರು ಹನಿಗಳೊಂದಿಗೆ ಪ್ರವೆಶ ನೀಡಿದ್ದಾನೆ. ತಾಲೂಕಿನಾದ್ಯಂತ ಸುರಿಯುತ್ತಿರುವ […]