Blog Archive

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅವಘಡ

Thursday, January 11th, 2018
mangaluru

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿದ್ದ ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಅಪಘಾತ ತಪ್ಪಿದ್ದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ರನ್ ವೇ ಸುತ್ತಲಿದ್ದ ಹುಲ್ಲು ತೆಗೆಯಲು ಟ್ರಾಕ್ಟರ್ ಕರೆಸಲಾಗಿತ್ತು. ಈ ಟ್ರಾಕ್ಟರನ್ನು ಅದರ ಚಾಲಕ ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದ. ಇನ್ನೇನು ಮುಂಬೈಗೆ ಹೊರಬೇಕಿದ್ದ ಜೆಟ್ ಏರ್ ವೇಸ್ ವಿಮಾನ ಟೇಕ್ ಆಫ್ ಆಗುವುದರಲ್ಲಿತ್ತು. ಆದರೆ ಚಾಲಕನಿಗೆ ಟ್ರಾಕ್ಟರ್ ನಿಂತಿರುವುದು ತಿಳಿದಿರಲಿಲ್ಲ. ಆಗ ಈ ಟ್ರಾಕ್ಟರ್ […]

ಗಾಂಜಾ ಸಾಗಾಟದ ಆರೋಪ, ವ್ಯಕ್ತಿಯ ಬಂಧನ

Saturday, October 21st, 2017
ganja

ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಾಟದ ಆರೋಪದಲ್ಲಿ ದುಬೈಗೆ ಪ್ರಯಾಣಿಸಬೇಕಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರದ ಅಭಿಲಾಷ್ ಪ್ರದೀಪ್ ಸುವರ್ಣ (20) ಎಂದು ಗುರುತಿಸಲಾಗಿದೆ. ತಪಾಸಣೆ ವೇಳೆ ಸುಮಾರು ಲಕ್ಷ ರೂ. ಮೌಲ್ಯದ 4 ಕೆ. ಜಿ. ಗಾಂಜಾ ಪತ್ತೆಯಾಗಿದೆ. ಈತ ಮಂಗಳೂರಿನಿಂದ ದುಬೈಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದ. ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದ್ದರಿಂದ ದುಬೈಗೆ ಹೋಗುವ ಬದಲು ಜೈಲಿಗೆ ಹೋಗುವಂತಾಗಿದೆ. ಪ್ರಕರಣವನ್ನು ಬಜ್ಪೆ ಪೊಲೀಸರಿಗ […]

26 ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನ ಬಂಧನ

Thursday, August 18th, 2016
Abdulla-Pallakkan

ಮಂಗಳೂರು: ಒಂದು ಪಾಸ್‍ಪೋರ್ಟ್ ಪಡೆಯಬೇಕಾದರೆ ದಿನಪೂರ್ತಿ ಸರತಿಯಲ್ಲಿ ನಿಲ್ಲಬೇಕು. ತಿಂಗಳುಗಟ್ಟಲೆ ಕಾಯಬೇಕು. ಅಂಥದ್ದರಲ್ಲಿ 26 ಬೇರೆಯವರ ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನನ್ನು ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಲ್ಲಕನ್ ಅಬ್ದುಲ (43) ಎಂಬಾತ ಆರೋಪಿ. 26 ಪಾಸ್‍ಪೋರ್ಟ್‍ಗಳ ಪೈಕಿ ಎರಡು ಅಮೆರಿಕಾಗೆ ಸೇರಿದ್ದಾಗಿವೆ. ಕಣ್ಣೂರಿನ ತಾಲಿಪ್ಪರಂಬು ನಿವಾಸಿಯಾದ ಮಹಮ್ಮದ್ ಪನವಪಿಲ್ ದುಬೈಯ ಕದಕ್-ಉತ್-ಲ್ಲ ಎಂಬಾತನ ಮಾಲೀಕತ್ವದ ಟ್ರಾವೆಲ್ ಏಜೆನ್ಸಿಯಲ್ಲಿ ಉದ್ಯೋಗದಲ್ಲಿದ್ದ. ಭಾರತದಿಂದ ವಿಶೇಷ ಪ್ಯಾಕೇಜ್‍ನಡಿ ಹಜ್‍ಗೆ ಹೋಗಿ ದುಬೈಗೆ ಬರುವವರ 26 […]

ಉಡುಪಿ ಮೂಲದ 20 ಮಂದಿ ಯುವಕರಿಗೆ ವಂಚನೆ

Wednesday, October 9th, 2013
gulf

ಮಂಗಳೂರು:  ದುಬೈಯಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ಹೇಳಲಾಗಿತ್ತು. ಆದರೆ ಅವರಿಗೆ ಕೊಟ್ಟಿದ್ದು ಗಿಡ ನೆಡುವ ಕೆಲಸವನ್ನು. ಇತ್ತ ಕೊಟ್ಟ ಹಣವೂ ಇಲ್ಲದೆ, ಅತ್ತ ಕೆಲಸವೂ ಇಲ್ಲದೆ ಕನಸು ಕಟ್ಟಿಕೊಂಡು ವಿದೇಶಕ್ಕೆ ಹಾರಿದವರು ಇದೀಗ ಬರಿಗೈಲಿ ಮರಳಿದ್ದರೆ. ದಕ್ಷಿಣ ಕನ್ನಡ, ಉಡುಪಿ ಮೂಲದ 2೧ ಮಂದಿ ಯುವಕರು ವಂಚನೆಗೆ ಒಳಗಾಗಿದ್ದು, ಅವರಲ್ಲಿ ಒಂಬತ್ತು ಮಂದಿ ಸಾಲ ಮಾಡಿ ಊರಿಗೆ ವಾಪಸ್ ಆಗಿದ್ದರೆ ಇನ್ನುಳಿದವರು ವಿದೇಶಿ ನೆಲದಲ್ಲಿ ಬೀದಿಪಾಲಾಗಿದ್ದಾರೆ. ಕೊಪ್ಪದ ಅಬ್ದುಲ್ ಜಾವೇದ್, ಮನೋಹರ ಕೈರೋಚ್, ಹೊನ್ನಾವರದ ಜಗದೀಶ ಮುರ್ಡೇಶ್ವರ, […]

ದುಬೈಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ

Tuesday, March 26th, 2013
Mohammad Ashraf

ಮಂಗಳೂರು : ದುಬೈಯಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ತ್ರಿಕಾರಿಪುರ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಸರಗೋಡು ತ್ರಿಕ್ಕಾರಿಪುರದ ಮುಹಮ್ಮದ್ ಕುಂಞಿ ಎಂಬವರ ಪುತ್ರ ಮುಹಮ್ಮದ್‌ಅಶ್ರಫ್ (24) ಎಂಬವರು ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ 12:30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಕಾಯಿನ್ ಬಾಕ್ಸ್‌ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದಾಗಿ ಮತ್ತು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ. […]

ಏರ್‌ ಇಂಡಿಯಾ ದುರಂತ

Saturday, August 21st, 2010
ಏರ್‌ ಇಂಡಿಯಾ ದುರಂತ

ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಅಪಘಾತಕ್ಕೀಡಾಗಿ 158 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದುಬೈಯಿಂದ ಮಂಗಳೂರಿಗೆ ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.