ಸಾರ್ವಜನಿಕ ಜೀವನದಲ್ಲಿ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕೃತ್ಯಗಳು ನಡೆಯುವುದಿಲ್ಲ: ರವೀಶ್

Thursday, August 4th, 2016
Polis

ಬಂಟ್ವಾಳ: ನಮ್ಮ ನಡೆ ನುಡಿಯ ಜೊತೆ ಸಾರ್ವಜನಿಕ ಜೀವನದಲ್ಲಿ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕೃತ್ಯಗಳು ನಡೆಯುವುದಿಲ್ಲ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ರವೀಶ್ ಹೇಳಿದರು. ಅವರು ಬಂಟ್ವಾಳ ನಗರ ಠಾಣೆಯ ವತಿಯಿಂದ ಮೊಡಂಕಾಪು ಚರ್ಚ್ ಹಾಲ್‌ನಲ್ಲಿ ನಡೆದ ಮಕ್ಕಳ ಶೋಷಣೆ, ಲೈಂಗಿಕ ಶೋಷಣೆ ಮತ್ತು ಪೋಕ್ಸೊ ಕಾರ‍್ಯಗಾರ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನುಷ್ಯರಿಗೆ ಆಸೆ ಅತಿಯಾದಂತೆ ಕೆಟ್ಟ ಚಟಗಳಿಗೆ ದಾಸರಾಗುವುದು ಹೆಚ್ಚಾಗುತ್ತದೆ. ಹಾಗಾಗಿ ಮನುಷ್ಯ ಆಸೆಗಳನ್ನು ಇತಿಮಿತಿಯೊಳಗೆ ಇಟ್ಟುಕೊಂಡು ಬದುಕಬೇಕು. ಎಲ್ಲಾ ಮಕ್ಕಳನ್ನು […]

ಕೊಲ್ಲೂರು ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅಪಹರಿಸಿದ ನೌಕರ

Tuesday, February 23rd, 2016
Shivarama

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರ ಶಿವರಾಮ ಮಡಿವಾಳನನ್ನು ದೇವಸ್ಥಾನದ ಕಪಾಟಿನಲ್ಲಿದ್ದ ಚಿನ್ನಾಭರಣ ಸಮೇತ 20 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಆತ ಅಪಹರಿಸಿದ್ದಾನೆಂದು ಆರೋಪಿಸಿ ಪೊಲೀಸರು ಸೋಮವಾರ ಆತನನ್ನು ಮನೆಯಲ್ಲಿ ಬಂಧಿಧಿಸಿದ್ದಾರೆ. ಕಪಾಟಿನ ಕೀಲಿಕೈ ಸಹಿತ ಪರಾರಿಯಾಗಿ ಸಾಕಷ್ಟು ಊಹಾಪೋಹ ಮತ್ತು ಕುತೂಹಲ ಮೂಡಿಸಿದ್ದ ಆರೋಪಿ ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅತ ಅಪಹರಿಸಿದುದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ನೇತೃತ್ವದ ಪೊಲೀಸ್‌ ತಂಡವು ಆತನನ್ನು ಕೊಲ್ಲೂರು ಠಾಣೆಯಲ್ಲಿ ವಿಚಾರಣೆ […]