ಪ್ರೇಮ ವೈಫಲ್ಯ – ಮೆಡಿಕಲ್ ಕಾಲೇಜ್‌ ವಿದ್ಯಾರ್ಥಿನಿ ಆತ್ಮಹತ್ಯೆ

Monday, December 20th, 2021
Vaishali

ಮಂಗಳೂರು : ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜ್‌ವೊಂದರಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ  ಕುತ್ತಾರು ಪದವಿನಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಆನಂದ ನಗರ ನಿವಾಸಿ ವಿಜಯಕುಮಾರ್ ಗಾಯಕ್‌ ವಾಡ್ ಎಂಬವರ ಪುತ್ರಿ ವೈಶಾಲಿ ಗಾಯಕ್‌ ವಾಡ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಈಕೆ ತನ್ನ ಸಹಪಾಠಿ ಜತೆ ಮಾತನಾಡಿದ್ದನ್ನು ಮತ್ತು ಇಬ್ಬರೂ ಪ್ರತ್ಯೇಕ ರೂಮ್‌ನಲ್ಲಿ ಮಲಗಿದ್ದನ್ನು ಅಪಾರ್ಟ್‌ಮೆಂಟ್‌ನ ಇತರರು ಕಂಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 10 […]

ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ- ಡಿವೈಎಫ್ಐ

Wednesday, September 29th, 2021
Moral policing

ಮಂಗಳೂರು :  ಸುರತ್ಕಲ್ ಎನ್.ಐ.ಟಿ.ಕೆ ಸಮೀಪ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ದಾಂಧಲೆ ನಡೆಸಿ ಹಲ್ಲೆಗೆ ಯತ್ನಿಸಿದ ಬಿಜೆಪಿಯ ಗೂಂಡಾ ಕಾರ್ಯಕರ್ತರ ಕೃತ್ಯವನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸಿದೆ. ಪೊಲೀಸ್ ಇಲಾಖೆ ಈ ಕೂಡಲೇ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನಿನಡಿ ಶಿಕ್ಷೆಗೊಳಪಡಿಸಿ ಬಂಧಿಸಲು ಒತ್ತಾಯಿಸುತ್ತದೆ. ದೇರಳಕಟ್ಟೆ ಕೆ.ಎಸ್‌ ಹೆಗ್ಡೆ ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ನಡೆಸುವ ವೈದ್ಯಕೀಯ ವಿದ್ಯಾರ್ಥಿಗಳು ಮಣಿಪಾಲಕ್ಕೆ ತೆರಳಿ ಬರುವಂತಹ ಹೊತ್ತಿನಲ್ಲಿ ಸುರತ್ಕಲ್ ಬಳಿ ತಡೆದು ಹಲ್ಲೆ ನಡೆಸಿದ ಬಿಜೆಪಿ, ಬಜರಂಗದಳದ […]

ಕೋವಿಡ್‌ ಸೋಂಕಿತನನ್ನು ದಾಖಲು ಗೊಳಿಸಲು ತಡ ಮಾಡಿದ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ

Saturday, July 4th, 2020
yenepoya hospital

ಮಂಗಳೂರು  :  ಕೋವಿಡ್‌ ಸೋಂಕಿತನನ್ನು ಯೆನೆಪೋಯ ಆಸ್ಪತ್ರೆ ದಾಖಲು ಗೊಳಿಸದೆ ಆಂಬ್ಯುಲೆನ್ಸ್ ನಲ್ಲೇ ಉಳಿಸಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ಯೆನೆಪೋಯ ಹಸನ್ ಛೇಂಬರ್ಸ್ ಕಟ್ಟಡದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ. ಮುನ್ನೂರು ಭಾಗದ 25 ರ ಹರೆಯದ 20 ನಿಮಿಷಗಳ ಕಾಲ ಆಂಬ್ಯುಲೆನ್ಸ್ ನಲ್ಲೆ ಉಳಿದಿದ್ದರು. ದಾರಿಮಧ್ಯೆ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಎದುರುಗಡೆಯ ಖಾಸಗಿ ಕಟ್ಟಡದ ಎದುರುಗಡೆ ಪಿಪಿಇ ಕಿಟ್ ಧರಿಸಿದ್ದ ಮಂದಿ ಆಂಬ್ಯುಲೆನ್ಸ್ ಜೊತೆಗೆ ನಿಂತಿದ್ದರು. ಇದನ್ನು ಗಮನಿಸಿದ ಖಾದರ್ ಕಾರು ನಿಲ್ಲಿಸಿ, ಆಂಬ್ಯುಲೆನ್ಸ್ ಸಿಬ್ಬಂದಿ ಜತೆಗೆ ಮಾತನಾಡಿದಾಗ ಸೋಂಕಿತ […]

ಕೊಣಾಜೆ : ದೇರಳಕಟ್ಟೆ ಅಟೋ ಮೊಬೈಲ್ ಅಂಗಡಿಗೆ ಬೆಂಕಿ

Friday, January 17th, 2020
konaje

ಕೊಣಾಜೆ : ದೇರಳಕಟ್ಟೆಯ ಅಟೋ ಮೊಬೈಲ್ ಅಂಗಡಿಯೊಂದು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರಬಹುದು ಎಂದು ಸಂಶಯಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ‌ ನಡೆಸುತ್ತಿದ್ದಾರೆ. ದೇರಳಕಟ್ಟೆಯ ಸುರೇಶ್ ರೈ ಮಾಲಕತ್ವದ ಈ‌ ಅಂಗಡಿ ಬೆಂಕಿಗಾಹುತಿಯಾಗಿದ್ದು, ಅಪಾರ ನಷ್ಟ‌ ಉಂಟಾಗಿದೆ‌ ಎಂದು ತಿಳಿದು ಬಂದಿದೆ. ದೇರಳಕಟ್ಟೆ ವಿದ್ಯಾರತ್ನ ಕ್ರಾಸ್ ನಲ್ಲಿರುವ ಭಾರತ್ ಅಟೋ ಮೊಬೈಲ್ ಅಂಗಡಿ ಮಾಲಕ ಗುರುವಾರ ರಾತ್ರಿ ಎಂದಿನಂತೆ ಅಂಗಡಿ ಮುಚ್ಚಿ ತೆರಳಿದ್ದರು. ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ […]

ಡಿಸೆಂಬರ್ 21 ರಂದು ದೇರಳಕಟ್ಟೆಯಲ್ಲಿ ‘ರತ್ನೋತ್ಸವ 2019’

Wednesday, December 18th, 2019
Raveendra-shetty

ಮಂಗಳೂರು : ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ವತಿಯಿಂದ ನಡೆಸಲ್ಪಡುವ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಸಮ್ಮೇಳನ ನಾಡು-ನುಡಿ ವೈಭವದ ‘ರತ್ನೋತ್ಸವ 2019’ ಡಿಸೆಂಬರ್ 21, 2019ನೇ ಶನಿವಾರ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ನಲ್ಲಿ ನಡೆಯಲಿರುವುದು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು. ಬೆಳಿಗ್ಗೆ 9:00 ಗಂಟೆಗೆ ದೇರಳಕಟ್ಟೆ ಪಂಚಾಯತ್ ವಠಾರದಿಂದ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಹಾಸ್ಯ ಲೇಖಕಿ, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಭುವನೇಶ್ವರಿ ಹೆಗಡೆ ಅವರನ್ನು ಪೂರ್ಣಕುಂಭ ಕಲಶ, ಚೆಂಡೆ ವಾದನ, ಕೊಂಬು […]

ದೇರಳಕಟ್ಟೆಯಲ್ಲಿ ಡಿ.15ರಂದು ನಾಡು ನುಡಿ ವೈಭವದ ‘ರತ್ನೋತ್ಸವ’

Thursday, December 13th, 2018
Ratnotsava 2018

ಮಂಗಳೂರು  : ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ದೇರಳಕಟ್ಟೆಯ ಗ್ರೀನ್ ಗ್ರೌಂಡ್  ನಲ್ಲಿ ಕರಾವಳಿ ಕರ್ನಾಟಕದ ಸಾಹಿತ್ಯ -ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವವು ಡಿಸೆಂಬರ್ 15ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ  ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದರು. ಮಂಗಳೂರಿನ ಪ್ರತಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ಡಿಸೆಂಬರ್ 15ರಂದು ಬೆಳಗ್ಗೆ 9ಕ್ಕೆ  ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರದಿಂದ ಸಮ್ಮೇಳನಾಧ್ಯಕ್ಷರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಸಾಂಸ್ಕೃತಿಕ ದಿಬ್ಬಣದಲ್ಲಿ ವೇದಿಕೆಗೆ ಕರೆ ತರಲಾಗುವುದು. ವಿಜಯ ಕೃಷ್ಣಪ್ಪ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. […]

ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕಾರಣಿ ಸದಸ್ಯ ಹಮೀದ್ ಕುದ್ರೋಳಿ ನಿಧನ

Wednesday, September 19th, 2018
hameed

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಏ. ಏಫ್. ಫಿಶರೀಸ್ ಪಾಲುದಾರ ಹಮೀದ್ ಕುದ್ರೋಳಿ ಜಠರ ಸಂಬಂಧಿ ಕಾಯಿಲೆಯಿಂದ ಬುಧವಾರ ಬೆಳಿಗ್ಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯಕಾರಣಿ ಸದಸ್ಯರಾಗಿದ್ದು, ದ. ಕ. ಜಿಲ್ಲಾ, ಮುಸ್ಲಿಂ ಸಂಘಟನೆಗಳ ಒಕ್ಕೂಟ ದ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಸಕ್ರಿಯ ಸದಸ್ಯರಾಗಿದ್ದರು. 2010 ರಲ್ಲಿ ಏರ್ ಇಂಡಿಯಾ ವಿಮಾನ ಮಂಗಳೂರಿನಲ್ಲಿ ಪತನಗೊಂಡಾಗ ಮೃತರ ದೇಹವನ್ನು ಸಂಬಂಧಿಕರಿಗೆ ಗುರುತಿಸಿಕೊಡುವಲ್ಲಿ ಅಪಾರ ಶ್ರಮ ವಹಿಸಿದ್ದರು. ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ […]

ಭೂಗತ ಪಾತಕಿ ರವಿ ಪೂಜಾರಿಯಿಂದ ನನಗೆ ಬೆದರಿಕೆ ಕರೆ ಬಂದಿದೆ: ಕಾಂಗ್ರೆಸ್ ಮುಖಂಡ

Wednesday, September 19th, 2018
ravi-poojary

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿಯಿಂದ ನನಗೆ ಬೆದರಿಕೆ ಕರೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ, ವಕ್ಫ್ ಬೋರ್ಡ್ ಸದಸ್ಯರಾಗಿರುವ ಕಣಚೂರು ಮೋನು ದೂರು ದಾಖಲಿಸಿದ್ದಾರೆ. ಥೈಲ್ಯಾಂಡಿನಿಂದ ಕಣಚೂರು ಮೋನು ಅವರಿಗೆ ಫೋನ್ ಮಾಡಿದ ರವಿ ಪೂಜಾರಿ ತನ್ನ ಮಾತು ಕೇಳದಿದ್ದರೆ ಹತ್ಯೆಗೈಯುವುದಾಗಿ ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಕಣಚೂರು ಮೋನು ಕೂಡಲೇ ಫೋನ್ ಕಟ್ ಮಾಡಿದ್ದಾರೆ. ನಂತರ ಎಂಟು ಬಾರಿ ಕರೆ ಬಂದಿದ್ದು, ಅವರು ಕರೆಯನ್ನು ಸ್ವೀಕರಿಸಿಲ್ಲ. ದೇರಳಕಟ್ಟೆಯಲ್ಲಿ ಕಣಚೂರು ಆಸ್ಪತ್ರೆ ನಡೆಸುತ್ತಿರುವ ಕಣಚೂರು ಮೋನು ಅವರು […]

ಮಾ.13: ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ಸಂಸ್ಥಾಪಕರ ದಿನ, ಪದವಿ ಪ್ರದಾನ ಸಮಾರಂಭ

Saturday, March 10th, 2018
father-muller

ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಸಂಸ್ಥಾಪಕರ ದಿನ ಮತ್ತು ಪದವಿ ಪ್ರದಾನ ಸಮಾರಂಭ ಮಾರ್ಚ್ 13ರಂದು ಸಂಜೆ 5 ಗಂಟೆಗೆ ಫಾದರ್ ಮುಲ್ಲರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅದೇ ದಿನ ಬೆಳಗ್ಗೆ ಫಾದರ್ ಮುಲ್ಲಾರ್ ಒಳಾಂಗಣ ಕ್ರೀಡಾಂಗಣ, ಜಿಮ್ನಾಶಿಯಂ ಮತ್ತು ಬಹು ಅಂತಸ್ತಿನ ಪಾರ್ಕಿಂಗ್ ವಲಯದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೊಶಿಯಸ್ ಕೊಯೆಲ್ಲೋ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಪದವಿ ಪ್ರದಾನ ಸಮಾರಂಭದಲ್ಲಿ ವೈದ್ಯಕೀಯ ಕಾಲೇಜು ಮತ್ತು ಅಲೈಡ್ ಹೆಲ್ತ್ […]

ದೇರಳಕಟ್ಟೆ: ರಸ್ತೆ ಅಪಘಾತಕ್ಕೆ ಯುವಕ ಬಲಿ

Monday, February 26th, 2018
deralakatte

ಮಂಗಳೂರು: ಬೈಕ್ ಮತ್ತು ಆಟೊ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ದೇರಳಕಟ್ಟೆಯ ಮಸೀದಿ ಎದುರಿನ ರಸ್ತೆಯಲ್ಲಿ ರವಿವಾರ ರಾತ್ರಿ ನಡೆದಿದೆ. ಮೃತರನ್ನು ಅಂಬ್ಲಮೊಗರು ಕಂಡಿಲ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಮುಹಮ್ಮದ್ ಸಂಶೀರ್(21) ಎಂದು ಗುರುತಿಸಲಾಗಿದೆ. ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಸಂಶೀರ್ ಅವರು ಕಣಚೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಬಂಧಿಕರೊಬ್ಬರಿಗೆ ಊಟ ಕೊಂಡೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅವರು ಸಂಚರಿಸುತ್ತಿದ್ದ ಬೈಕಿಗೆ ನಾಟೆಕಲ್ ಕಡೆಯಿಂದ ಬಂದ ರಿಕ್ಷಾ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. […]