ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿದ್ದ ಯುವತಿ ನೋಡಲು ಜಮಾಯಿದ ಜನ

Friday, October 1st, 2021
another Faith

ಸುಳ್ಯ : ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಯುವತಿ ಇದ್ದಾಳೆ ಎಂದು ಯುವಕನ ಮನೆ ಮುಂದೆ ಸಾರ್ವಜನಿಕರು ಜಮಾಯಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿ ಸೆ.29 ರ ಗುರುವಾರ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟ ಹಿನ್ನಲೆಯಲ್ಲಿ ಬಳಿಕ ಪೊಲೀಸರು ಸಾರ್ವಜನಿಕರ ಗುಂಪನ್ನು ಚದುರಿಸಿದರು. ಬಳಿಕ ಪೊಲೀಸರು ಮನೆಯೊಳಗೆ ಹುಡುಕಾಡಿದಾಗ ಯುವತಿ ಇರಲಿಲ್ಲ. ಯುವತಿಯನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಯುವಕ ಸಿದ್ದೀಕ್ ನನ್ನು ವಶಕ್ಕೆ ಪಡೆದಿದ್ದಾರೆ. ಯುವಕ ದೇಲಂಪಾಡಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ […]

“ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ತುಳು, ಕನ್ನಡ ಭಕ್ತಿಗೀತೆ ಬಿಡುಗಡೆ

Monday, January 18th, 2021
kanadabolpu

ಮಂಜೇಶ್ವರ : ಇತಿಹಾಸ ಪ್ರಸಿದ್ಧವಾದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಧನು ಪೂಜಾ ಸಮಾರೋಪದ ಮಕರ ಸಂಕ್ರಮಣದಂದು “ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ಎಂಬ ತುಳು, ಕನ್ನಡ ಭಕ್ತಿಗೀತೆ  ಬಿಡುಗಡೆಗೊಂಡಿತು. ತುಳುನಾಡ ತುಡರ್ ಕ್ರಿಯೇಷನ್ ಅರ್ಪಿಸಿದ ಎ.ಡಿ.ಕೊರಗಪ್ಪ ಹಾಗೂ ಕಾರ್ತಿಕ್ ಲಾಲ್ ಭಾಗ್ ಸಾಹಿತ್ಯ ರಚಿಸಿ  ಡಿ.ಪ್ರವೀಣ್ ಕುಮಾರ್  ನಿರ್ದೇಶಿಸಿದ ಈ ಗೀತೆಯನ್ನ  ಯೂಟ್ಯೂಬ್ ನ ಕೀಲಿಮಣೆಯನ್ನ ಅದುಮುವ ಮೂಲಕ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮ ಶ್ರೀ ಗಣೇಶ ತಂತ್ರಿ ಬಿಡುಗಡೆಗೊಳಿಸಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪಧಾಧಿಕಾರಿಗಳು, […]

ಮುಂಬೈಯಿಂದ ಬಂದ ವ್ಯಕ್ತಿಯನ್ನು ಕೇರಳಕ್ಕೆ ತಲುಪಿಸಿದ ಕಾಂಗ್ರೆಸ್ ಮುಖಂಡನಿಗೆ ಕೋರೆಂಟೈನ್

Sunday, May 17th, 2020
delampady

ಪುತ್ತೂರು  : ಪಾಸ್ ಇಲ್ಲದೆ ಮುಂಬೈಯಿಂದ ಬಂದ ವ್ಯಕ್ತಿಯನ್ನು ಕಾರಿನಲ್ಲಿ ಕೇರಳಕ್ಕೆ ತಲುಪಿಸಿದ ಕಾಂಗ್ರೆಸ್ ಗ್ರಾಮ ಪಂಚಾಯತು ಸದಸ್ಯನ ವಿರುದ್ದ ಆಧೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಲಂಪಾಡಿ ಗ್ರಾಮ ಪಂಚಾಯತು ಸದಸ್ಯ, ಕಾಂಗ್ರೆಸ್ ನೇತಾರ ಕೊರಗಪ್ಪ ರೈ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮುಂಬೈಯಿಂದ ಆಗಮಿಸಿದ ದೇಲಂಪಾಡಿ, ಮಯ್ಯಳ ನಿವಾಸಿ ಜಗನ್ನಾಥ ರೈ ಎಂಬವರನ್ನು ಪುತ್ತೂರಿನಿಂದ ತನ್ನ ಕಾರಿನಲ್ಲಿ ಕೊರಗಪ್ಪ ರೈ ಕರೆ ತಂದಿದ್ದರು. ಪಾಸ್ ಸಹಿತ ಯಾವುದೇ ದಾಖಲೆ ಇಲ್ಲದೆ ಜಗನ್ನಾಥ ರೈ ಅವರನ್ನು ಊರಿಗೆ ಕರೆದುಕೊಂಡು […]