ಸ್ವಾಮಿ ಕೊರಗಜ್ಜನ ನಿಂದನೆ, ಅಪಹಾಸ್ಯ -ಮಂಗಳವಾರ ಸಾಮೂಹಿಕ ಪ್ರಾರ್ಥನೆಗೆ ಕರೆ -ವಿಶ್ವ ಹಿಂದೂ ಪರಿಷತ್

Saturday, January 8th, 2022
VHP

ಮಂಗಳೂರು  : ವಿಟ್ಲದಲ್ಲಿ ಕೊರಗಜ್ಜನನ್ನು ಅವಮಾನಿಸಿದ ಘಟನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಂಗಳವಾರ 11 ಜನವರಿ 2022 ರಂದು ನಡೆಸಲು ಸಮಸ್ತ ಹಿಂದೂ ಬಂಧುಗಳಲ್ಲಿ ವಿಶ್ವ ಹಿಂದೂ ಪರಿಷತ್ ವಿನಂತಿಸಿದೆ. ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ಮುಖಂಡರು, ಸಂಘಟನೆಗಳು, ಸಂಘ ಸಂಸ್ಥೆಗಳು, ಭಕ್ತರು, ಸಮಸ್ತ ಹಿಂದೂಗಳು ಒಟ್ಟು ಸೇರಿ ನಮ್ಮ ನಮ್ಮ ಊರುಗಳ ದೈವಸ್ಥಾನ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆನ್‌ಲೈನ್ ಬುಕ್ಕಿಂಗ್‌ ಸೇವೆಗಳು ರದ್ದು

Friday, January 7th, 2022
dharmasthala

ಮಂಗಳೂರು  : ಕೋವಿಡ್-19 ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯನ್ನು ಪ್ರಕಟಿಸಿದ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾಡಳಿತದ ಮುಂದಿನ ಆದೇಶದ ವರೆಗೆ ಆನ್‌ಲೈನ್ ಬುಕ್ಕಿಂಗ್‌ಗಳಾದ ವಸತಿ, ತುಲಾಭಾರ ಮತ್ತು ಉತ್ಸವಾದಿ ಸೇವೆಗಳನ್ನು ರದ್ದುಪಡಿಸಲಾಗಿದೆ ಹಾಗೂ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ದೇವಸ್ಥಾನದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇತರ ದಿನಗಳಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ನಾಗ ದೇವರ ಕಲ್ಲನ್ನು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ

Friday, November 19th, 2021
vishwas kumar das

ಮಂಗಳೂರು  : ಮಂಗಳೂರಿನ ಕೋಡಿಕಲ್ ನಲ್ಲಿ ನಾಗ ಬನದ ನಾಗ ದೇವರ ಕಲ್ಲನ್ನು ದುಷ್ಕರ್ಮಿಗಳು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಸ್ಥಾನ ಮತ್ತು ದೇವಸ್ಥಾನ ಕಾಣಿಕೆ ಡಬ್ಬಿಗಳಿಗೆ ಕಾಂಡೊಮ್ ಹಾಕುವುದು ಮತ್ತು ಇನ್ನಿತರ ದುಷ್ಕೃತ್ಯಗಳನ್ನು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದೆ. ನಗರ ಪೊಲೀಸ್ ಉಪ ಆಯುಕ್ತ ರವರಿಗೆ ಕೆಪಿಸಿಸಿ ಸಂಯೋಜಕ ಇಂಟಕ್ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ […]

ಇರಾ ಸೋಮನಾಥೇಶ್ವರ ದೇವಸ್ಥಾನದ ಬಳಿ ನಿಧಿಗಾಗಿ ನಾಗ ಬನದ ಹುತ್ತ ಅಗೆದ ಕಳ್ಳರು

Monday, October 25th, 2021
Ira Hutta

ಮಂಗಳೂರು : ಬಂಟ್ವಾಳ ತಾಲೂಕಿನ ಪ್ರಸಿದ್ಧ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ನಾಗ ಬನದ ಪಕ್ಕದ ಹುತ್ತವೊಂದರಲ್ಲಿ ಕಳ್ಳರು ನಿಧಿಗಾಗಿ ಭೂಮಿಯನ್ನು ಸುಮಾರು ಹತ್ತು ಅಡಿ ಆಗೆದಿದ್ದಾರೆ. ನಾಗಬನದ ಆಸುಪಾಸಿನಲ್ಲಿ ಕಂಬಳ ಗದ್ದೆ ಎಲ್ಲ ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರಣಿಕ ಬೀರುತ್ತಿರುವುದರಿಂದ ಅಲ್ಲೆಲ್ಲ ಚಿನ್ನ ವಜ್ರಗಳಿರುವ ನಿಧಿ ಇರುತ್ತದೆ, ನಾಗ ಕಾವಲು ಕಾಯುತ್ತಾನೆ ಎಂಬ ಪ್ರತೀತಿ ಇದ್ದು, ನಿಧಿ ಆಸೆಯಿಂದ ಕಳ್ಳರು ಭೂಮಿ ಅಗೆಯುವ ಪ್ರಕರಣ ಆಗಾಗ್ಗೆ ಕೇಳಿಬರುತ್ತಿದೆ. ನಿಧಿಗಾಗಿ ಕಳ್ಳರು ಪುರಾತನ ಹುತ್ತವೊಂದನ್ನು ಶನಿವಾರ ವಾರ […]

ಅವಸರದಿಂದ ದೇವಸ್ಥಾನ ಒಡೆಯಬೇಡಿ- ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ, 2 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ದೆಶನ

Wednesday, September 15th, 2021
Bommai

ಬೆಂಗಳೂರು :  ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ‌ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಬಳಿಕ ವಿಧಾನಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ […]

ಹೆಣ್ಣು ಎಂಬ ಕಾರಣಕ್ಕೆ ದೇವಸ್ಥಾನದ ಬಳಿ ಬಿಟ್ಟು ಹೋದ ದಂಪತಿ

Wednesday, July 14th, 2021
infant

ಬಳ್ಳಾರಿ:  ಹೆಣ್ಣು ಎಂಬ ಕಾರಣಕ್ಕೆ ನವಜಾತ ಶಿಶುವನ್ನು ದೇವಸ್ಥಾನದ ಬಳಿ ಬಿಟ್ಟು ಹೋಗಿರುವ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ನಡೆದಿದೆ. ಬಂಡ್ರಾಳು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಸ್ಥಳೀಯರು ದೇವಸ್ಥಾನಕ್ಕೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದ್ದು, ವಿಷಯ ತಿಳಿದು ಸ್ಥಳಕ್ಕೆ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಜಲಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗರ್ಭಾವಸ್ಥೆ ಪೂರ್ಣವಾಗದೆ ಅಕಾಲಿಕವಾಗಿ ಮಗು ಜನಿದ್ದು, ಮಗುವಿನ […]

ಯಾಕೆ ಈ ಪಾರ್ಷಿಯಾಲಿಟಿ ? ಮಂದಿರ, ಮಸೀದಿ, ಚರ್ಚ್ ಸಂಪೂರ್ಣ ಬಂದ್ !

Thursday, April 22nd, 2021
mandhir

ಉಡುಪಿ : ಸರಕಾರದ ಆದೇಶದಂತೆ ಕೊವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಮೇ4 ರವರೆಗೆ ಕರೋನ ನೈಟ್ ಕರ್ಫ್ಯೂ ಮತ್ತು ವಾರಂತ್ಯ ಕರ್ಫ್ಯೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿ ಗೊಳಿಸಿದ್ದು, ಅದರಂತೆ ಮಸೀದಿ, ದೇವಸ್ಥಾನ, ಚಚ್೯ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಂದಿನ ಆದೇಶವರೆಗೆ ಮುಚ್ಚಬೇಕು ಎಂದು ಉಡುಪಿ ಜಿಲ್ಲಾಧಿಕಾರಿ‌ ಜಿ.ಜಗದೀಶ್ ತಿಳಿಸಿದ್ದಾರೆ. ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆ ಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸಬಹುದಾಗಿದೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ […]

ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ವಿಶ್ವ ಹಿಂದೂ ಪರಿಷತ್​ನ ಪ್ರಖಂಡ ಸಂಚಾಲಕ ಬಂಧನ

Monday, March 8th, 2021
Mohan

ಮಂಗಳೂರು : ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಮಾಡಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆ ಸಾರ್ವಜನಿಕರು ಆತನನ್ನು ಹಿಡಿದು ಹತ್ತಿರದ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ಚಾಲನೆ !

Wednesday, March 3rd, 2021
Sanathana

ಮಂಗಳೂರು :  “ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ” ವತಿಯಿಂದ ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ದಿನಾಂಕ 3 ಮಾರ್ಚ್, ಬುಧವಾರದಂದು ಮಂಗಳೂರಿನಲ್ಲಿ ಚಾಲನೆ ನೀಡಿ, ಅಭಿಯಾನದ ಮುಂದಿನ ದಿಶೆಯನ್ನು ನಿರ್ಧಾರ ಮಾಡಲು, ದೇವಸ್ಥಾನಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ದೇವಸ್ಥಾನ ರಕ್ಷಣಾ ಅಭಿಯಾನವನ್ನು ಪ್ರಾರಂಭ ಮಾಡಲು. ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ, ಮಹಾಸಂಘದ ಮಹಾರಾಷ್ಟ್ರ ರಾಜ್ಯದ ವಕ್ತಾರರಾದ ಶ್ರೀ. ಸುನಿಲ್ ಘನವಟ್, ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರರಾದ […]

ದೇವಸ್ಥಾನಕ್ಕೆ 1ಲಕ್ಷ ರೂ. ದಾನ ನೀಡಿದ ಭಿಕ್ಷುಕಿ

Friday, February 5th, 2021
Ashwathamma

ಕುಂದಾಪುರ :  ಸಾಲಿಗ್ರಾಮದ ಆಂಜನೇಯ ಸ್ವಾಮಿ ಗುಡಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಗೊಳ್ಳಿಯ ಅಶ್ವತ್ಥಮ್ಮ ಎಂಬವರು ದೇವಸ್ಥಾನದಲ್ಲಿ ನಡೆಯುವ ಅನ್ನದಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕಳೆದ 30 ವರ್ಷಗಳಿಂದ ಆಂಜೆನೇಯ ಸ್ವಾಮಿ ಗುಡಿಯಲ್ಲಿ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ಅಶ್ವತ್ಥಮ್ಮ ಮದುವೆಯಾಗಿ ಎಳೆವೆಯಲ್ಲಿಯೆ ಪತಿ ಮತ್ತು ಮಕ್ಕಳನ್ನು ಕಳೆದುಕೊಂಡ ಅತಂತ್ರರಾಗಿ ಭಕ್ತರು ನೀಡಿದ ಹಣವನ್ನು ಊಟಕ್ಕೆ ಕೊಟ್ಟು ಉಳಿದ ಹಣವನ್ನು ಪಿಗ್ಮಿಗೆ ಹಾಕಿ ಉಳಿತಾಯ ಮಾಡುತ್ತಿದ್ದರು. ಹೀಗೆ ಪಿಗ್ಮಿಯಲ್ಲಿ ಒಂದು ಲಕ್ಷ ರೂ. ಸಂಗ್ರಹ ಆದಾಗ ಅದನ್ನು […]