ಬೆಂಗಳೂರು : ಮುಂದಿನ ಮೂರು ದಿನಗಳ ಕಾಲ ಬೆಂಗಳೂರಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ಸಂಜೆ ವೇಳೆ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಿಂದ ಆಗಾಗ ಪ್ರತ್ಯಕ್ಷನಾಗಿ ಆರ್ಭಟಿಸುವ ಮಳೆರಾಯ ಇನ್ನೂ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವರ್ಷಧಾರೆ ಸುರಿಸಲಿದ್ದಾನೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಅಕ್ಟೋಬರ್ 12ರವರೆಗೂ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದೆ. ನಗರದಲ್ಲಿ ಮಂಗಳವಾರವೂ ಮಳೆಯ ಆರ್ಭಟ ಮುಂದುವರೆದ […]
ಮಂಗಳೂರು : ಇತಿಹಾಸ ಹಿನ್ನಲೆಯಿರುವ ಮಂಗಳೂರಿನ ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ಸೆಪ್ಟಂಬರ್ 29 ರಿಂದ ಅಕ್ಟೋಬರ್ 8 ರವರೆಗೆ ಹತ್ತುದಿನಗಳ ಕಾಲ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿರುವ ಕೇರಳದ ತಲಂಗರೆಯಿಂದ ಹಿಡಿದು ಮಂಗಳೂರಿನ ಸಸಿಹಿತ್ಲು ವರೆಗಿನ ಮಳೆಯಾಳಿ ಬಿಲ್ಲವರ ಹದಿನೆಂಟು ಭಗವತಿ ಕ್ಷೇತ್ರಗಳ ಪೈಕಿ ಕುದ್ರೋಳಿ ಭಗವತಿ ಕ್ಷೇತ್ರ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಇಲ್ಲಿ ಹದಿನಾಲ್ಕು ಭಗವತಿಯರು ಐಕ್ಯವಾಗಿರುವುದರಿಂದ ಕೂಟಕ್ಕಳ ಎಂಬ ಹೆಸರು ಬಂದಿದೆ. ಕ್ರಿ.ಶಕ 1067 ರಲ್ಲಿ ಕ್ಷೇತ್ರದಲ್ಲಿ ವೀರಸ್ತಂಭವನ್ನು ಸ್ಥಾಪನೆ ಮಾಡಲಾಗಿದೆ. […]
ಪುತ್ತೂರು: ಯಾವುದೇ ತಪ್ಪು ಮಾಡದ ನನ್ನನ್ನು ಉದ್ದೇಶಪೂರ್ವಕವಾಗಿ ಸಂಚು ಮಾಡಿ ಜೈಲಿಗೆ ಅಟ್ಟಲಾಯಿತು. ನಾನು ಮೋಸ, ವಂಚನೆ, ಅನ್ಯಾಯ ಮಾಡಿಲ್ಲ. ಇದನ್ನು ಮಹಿಷಮರ್ದಿನಿ ದೇವಿಯ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ. ಆಕೆ ಸತ್ಯ ಹೊರ ತರುತ್ತಾಳೆ ಎಂದು ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಹೇಳಿದರು. ಅವರು ತಾಲೂಕಿನ ಮಠಂತಬೆಟ್ಟು ಮಹಿಷಮರ್ದಿನಿ ದೇವಾಲಯದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು, ಅನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೈಲು, ಕೋರ್ಟ್ ಎಂದು ಅಲೆದಿದ್ದೇನೆ. 62 ತಿಂಗಳಿನಿಂದ ಬಳ್ಳಾರಿಗೆ ಕಾಲಿಟ್ಟಿಲ್ಲ. ಯಾವ ಸಭೆ, […]
ಕೊಲ್ಲೂರು: ನೆರೆದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅ. 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಚಂಡಿಕಾ ಯಾಗ ಹಾಗೂ ರಥೋತ್ಸವ ಸಂಭ್ರಮದಿಂದ ಜರಗಿತು. ಅ. 10ರ ಸಂಜೆ ನಡೆದ ರಥೋತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಕಾರ್ಯನಿರ್ವಹಣಾಧಿಕಾರಿ ಎಸ್. ಯೋಗೇಶ್ವರ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ದೇಗುಲದ ಮುಖ್ಯ ಅರ್ಚಕರಾದ ರಾಮಚಂದ್ರ ಅಡಿಗ ನೇತೃತ್ವಧಿದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶಾಸಕ ಕೆ. […]
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ನವರಾತ್ರಿ ಉತ್ಸವಕ್ಕೆ ಹುಲಿವೇಷ ಮತ್ತು ಇತರ ವೇಷಗಳನ್ನು ಧರಿಸುವವರು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆದುಕೊಳ್ಳುವುದು ಅಗತ್ಯ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ ನವರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸುವ ಟ್ಯಾಬ್ಲೋ ವಾಹನಗಳು ಅನುಮತಿಯನ್ನು ಪಡೆದುಕೊಳ್ಳಬೇಕು. ಯಾವುದೇ ವಾಹನದಲ್ಲಿ, ಟ್ಯಾಬ್ಲೋಗಳಲ್ಲಿ ಡಿಜೆ ಬಳಸಬಾರದು. ಟ್ಯಾಬ್ಲೊ ಮತ್ತು ಇತರ ಕಡೆಗಳಲ್ಲಿ ಧರಿಸುವ ವೇಷಗಳು ಯಾವುದೇ ಧರ್ಮ ಅಥವಾ ಜಾತಿಯವರಿಗೆ ಅವಹೇಳನವಾಗುವ ಹಾಗೂ ಅಸಭ್ಯತೆ ತೋರುವ ರೀತಿಯಲ್ಲಿ ಇರಬಾರದು. ಈ ಸೂಚನೆಗಳನ್ನು ಉಲ್ಲಂಘಿಸುವವ ವಿರುದ್ಧ ಕಾನೂನು […]
ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 28ರಿಂದ ಅ. 7ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಶನಿವಾರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅ. 5ರಂದು ಸಣ್ಣ ರಥೋತ್ಸವ, 6ರಂದು ರಾತ್ರಿ 7.30ಕ್ಕೆ ರಥೋತ್ಸವ ಜರಗುವುದು. ನವರಾತ್ರಿ ಉತ್ಸದ ಅವಧಿಯಲ್ಲಿ ಪ್ರತೀದಿನ ವಿವಿಧ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮ ನೀಡಲಿವೆ. ಸುಮಾರು 2,000 ಕಲಾವಿದರು ಕಾರ್ಯಕ್ರಮ ನೀಡುಲಿದ್ದು. ಸೌಂದರ್ಯ […]