ಯುವತಿಯ ನಗ್ನ ಫೋಟೋ ವೈರಲ್..ಮೂವರ ಆರೋಪಿಗಳ ಬಂಧನ!

Saturday, July 14th, 2018
arrested

ಮಂಗಳೂರು: ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆ  ನಗ್ನ ಫೋಟೋ ತೆಗೆಸಿ ಕೊಂಡು ವೈರಲ್ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೊಲೀಸರು ಬಂಧಿಸಿದ್ದಾರೆ. ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತ ಆರೋಪಿಗಳು. ಸಂದೇಶ್ ಮೊದಲು ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆಗೆ ಸಲಿಗೆ ಹೆಚ್ಚಿಸಿಕೊಂಡಿದ್ದನಂತೆ. ನಂತರ ಆಕೆಯನ್ನ ಪುಸಲಾಯಿಸಿ ನಗ್ನ ಚಿತ್ರಗಳನ್ನು ಪಡೆದು ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಜೊತೆ ಶೇರ್ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಕ್ಕೂ ಅಪ್ಲೋಡ್ ಮಾಡಿದ್ದ ಎಂಬ ಆರೋಪ […]

ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ; ಬೈಕ್ ಸವಾರನಿಗೆ ಗಾಯ

Tuesday, March 27th, 2018
kadaba

ಕಡಬ: ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಡಬದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಕೋಡಿಂಬಾಳ‌ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಈತ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪಿಕಪ್ ಢಿಕ್ಕಿ ಹೊಡೆದಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ಚಾಲಕ ರಾಜು ಎಂಬಾತ ಕೆಲದಿನಗಳ ಹಿಂದೆ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದು, ಆ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಅಪಘಾತ ಎಸಗಿದ್ದಾರೆ […]

ಕಾಂಗ್ರೆಸ್‌-ಬಿಜೆಪಿ ವಿರುದ್ಧ ಮುತಾಲಿಕ್‌ ವಾಗ್ದಾಳಿ

Friday, March 2nd, 2018
muthalik

ಮಂಗಳೂರು: ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಿಡಿಕಾರಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಎರಡೂ ಪಕ್ಷಗಳು ತುಷ್ಟೀಕರಣದ ಪಕ್ಷಗಳು ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಸ್ಲಿಂ, ಬಿಜೆಪಿ ಹಿಂದೂ ತುಷ್ಟೀಕರಣದ ಪಕ್ಷ. ಈ ಎರಡೂ ಪಕ್ಷಗಳ ಉದ್ದೇಶ ಒಂದೇ. ಅದು ಅಧಿಕಾರವೇ ವಿನಃ ಜನ ಸಾಮಾನ್ಯರ ಅಭಿವೃದ್ಧಿಯಲ್ಲ. ಲೂಟಿ ಮಾಡಬೇಕೆಂಬುದೇ ಇವರ ಗುರಿ ಎಂದು ಟೀಕಿಸಿದರು. ಬಿಜೆಪಿ ಮಾ. 3ರಿಂದ ಹಮ್ಮಿಕೊಂಡಿರುವ ಜನಸುರಕ್ಷಾ ಯಾತ್ರೆಯನ್ನು ಟೀಕಿಸಿರುವ ಅವರು, ಇದೊಂದು ಡೋಂಗಿ ಯಾತ್ರೆ. ಸಾಧ್ಯವಿದ್ದರೆ ಭಟ್ಕಳದಿಂದ […]

ಹೊಸ ವರ್ಷ ಎಂದು ಕಂಠಪೂರ್ತಿ ಕುಡಿದ… ತಂದೆ ಮೇಲೆಯೇ ತಲವಾರ್‌ ಬೀಸಿದ!

Tuesday, January 2nd, 2018
Talwar-case

ಮಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ಮನೆಯಲ್ಲಿ ದಾಂಧಲೆ ನಡೆಸಿ ತಂದೆಯ ಮೇಲೆ ತಲವಾರ್‌ ದಾಳಿ ನಡೆಸಿದ ಘಟನೆ ಬೆಳ್ತಂಗಡಿಯ ಮಟ್ಲದಲ್ಲಿ ನಡೆದಿದೆ. ಮಟ್ಲದ ಜ್ಯೋತಿಷಿ ಮಂಜುನಾಥ್ ಎಂಬವವರ ಮಗ ನವೀನ್ ಈ ಕೃತ್ಯ ಎಸಗಿದವ. ಹೊಸ ವರ್ಷದ ಆಚರಣೆಯ ವೇಳೆ ಕಂಠಪೂರ್ತಿ ಕುಡಿದಿದ್ದ ನವೀನ್, ನಶೆಯಲ್ಲಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ. ಬಳಿಕ ತಂದೆಯ ಮೇಲೆ ತಲವಾರ್‌ನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.