ಷರತ್ತುಬದ್ದ ಜಾಮೀನಿನೊಂದಿಗೆ ಬಿಡುಗಡೆಯಾದ ಪತ್ರಕರ್ತ ನವೀನ್ ಸೂರಿಂಜೆ

Monday, March 25th, 2013
Naveen Soorinje released

ಮಂಗಳೂರು : ಪಡೀಲ್‌ನ ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಬಂಧನಕ್ಕೊಳಗಾದ ಪತ್ರಕರ್ತ ನವೀನ್ ಸೂರಿಂಜೆ ಷರತ್ತುಬದ್ದ ಜಾಮೀನಿನೊಂದಿಗೆ ಮಾರ್ಚ್ 23 ಶನಿವಾರ ಮಂಗಳೂರು ಸಬ್ ಜೈಲ್‌ನಿಂದ ಬಿಡುಗಡೆಗೊಂಡಿದ್ದಾರೆ. ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸರಿಂದ ಬಂಧಿತರಾಗಿದ್ದ ನವೀನ್ ಸೂರಿಂಜೆಯ ಬಿಡುಗಡೆಗೆ ಈವರೆಗೆ ಹಲವು ರೀತಿಯ ಹೋರಾಟಗಳು ನಡೆದಿದ್ದವು. ನಾಲ್ಕೂವರೆ ತಿಂಗಳ ಜೈಲುವಾಸವನ್ನು ಅನುಭವಿಸಿ ಇದೀಗ ಬಿಡುಗಡೆಗೊಂಡಿದ್ದಾರೆ. ಹೋಂ ಸ್ಟೇ ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ […]

ಮಾರ್ನಿಂಗ್ ಹೋಂ ಸ್ಟೇ ದಾಳಿ : ನವೀನ್ ಸೂರಿಂಜೆ ಪ್ರಕರಣ ಹಿಂತೆಗೆತಕ್ಕೆ ನಿರ್ಧಾರ

Friday, February 1st, 2013
Naveen soorinje

ಮಂಗಳೂರು : ಪಡೀಲ್ ಬಳಿ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ  ನಡೆಸಿದ ದಾಳಿಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿ ವರದಿಗಾರ ನವೀನ್ ಸೂರಿಂಜೆಯನ್ನು ನವೆಂಬರ್ 7ರಂದು ಬಂಧಿಸಲಾಗಿದ್ದು ಇದೀಗ ನವೀನ್ ಸೂರಿಂಜೆ ವಿರುದ್ಧ ದಾಖಲಿಸಲಾದ ಪ್ರಕರಣ ಹಿಂತೆಗದುಕೊಳ್ಳಲು ಸರಕಾರ ನಿರ್ಧರಿಸಿದೆ. ನಿನ್ನೆ  ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ನವೆಂಬರ್ 7ರಂದು ನವೀನ್ ಸೂರಿಂಜೆ ಬಂಧನಕೊಳಗಾದ ಮೇಲೆ ಜಾಮೀನು ಅರಸಿ, ನ್ಯಾಯಾಲಯದ ಮೊರೆ ಹೋಗಿದ್ದರೂ, ಸ್ಥಳೀಯ ಹಾಗೂ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಪತ್ರಕರ್ತರು, ಜನಪರ ಹೋರಾಟಗಾರರು […]

ಪತ್ರಕರ್ತ ನವೀನ್ ಸೂರಿಂಜೆ ಜಾಮೀನು ಅರ್ಜಿ ತಿರಸ್ಕೃತ

Thursday, December 27th, 2012
Naveen Soorinje

ಮಂಗಳೂರು : ಪತ್ರಕರ್ತ ನವೀನ ಸೂರಿಂಜೆ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ನಿನ್ನೆ ತಿರಸ್ಕಾರಗೊಂಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ದಾರಿಯೊಂದೆ ಇವರ ಪಾಲಿಗೆ ಉಳಿದಂತಾಗಿದೆ. ಪಡಿಲ್ ಮಾರ್ನಿಂಗ್  ಮಿಸ್ಟ್ ಹೋಂ ಸ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ  ನವೀನ ಸೂರಿಂಜೆಯನ್ನು ನವೆಂಬರ್ 7 ರಂದು  ಕಂಕನಾಡಿ ಪೊಲೀಸರು ಬಂದಿಸಿದ್ದರು. ನಿನ್ನೆ ಹೋಂ ಸ್ಟೇ ದಾಳಿಗೆ ಸಂಬಂಧಿಸಿ ಪತ್ರಕರ್ತ ನವೀನ ಸೂರಿಂಜೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಅದರಂತೆ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಘಟನೆಗೆ ಪೂರಕವಾದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದು […]

ಪತ್ರಕರ್ತ ನವೀನ್ ಸೂರಿಂಜೆ ಆಸ್ಪತ್ರೆಗೆ ದಾಖಲು

Wednesday, December 26th, 2012
Naveen Soorinje

ಮಂಗಳೂರು :ಕಸ್ತೂರಿ ವಾಹಿನಿಯ ವರದಿಗಾರ, ಹೋಮ್ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನವೀನ್ ಸೂರಿಂಜೆ ಚಿಕನ್ ಪಾಕ್ಸ್ ಪೀಡಿತರಾಗಿದ್ದು ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನನದ ನಂತರ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ನವೆಂಬರ್ 7ರಿಂದ ಸೂರಿಂಜೆ ಜೈಲಿನಲ್ಲಿದ್ದು ಡಿಸೆಂಬರ್ 26ರಂದು ಅವರ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸೂರಿಂಜೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಜೆಎಂಎಫ್ ಸಿ ಕೋರ್ಟ್ ಮತ್ತು ಸೆಶನ್ಸ್ ಕೋರ್ಟ್ ನಲ್ಲಿ ತನ್ನ ಜಾಮೀನು […]

ಪತ್ರಕರ್ತ ನವೀನ್ ಸೂರಿಂಜೆ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Tuesday, December 11th, 2012
DFYI SFI handcuff protest

ಮಂಗಳೂರು :ಮಾನವಹಕ್ಕುಗಳ ದಿನವಾದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಜನವಾದಿ ಮಹಿಳಾ ಸಂಘಟನೆಗಳಿಂದ ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ದಾಳಿ ಪ್ರಕರಣದ ಬಗ್ಗೆ ವರದಿ ಮಾಡಿದ ಪತ್ರಕರ್ತ ನವೀನ್ ಸೂರಿಂಜೆಯ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಇದರ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೈ ಕೋಳ ತೊಟ್ಟು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ ಡಿವೈಎಫ್‌ಐಯ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ […]