ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಆಶಯ

Thursday, September 28th, 2023
ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಆಶಯ

ಮಂಗಳೂರು : ತುಳು ನಾಟಕ ಹಾಗೂ ಸಿನಿಮಾ ರಂಗದಲ್ಲಿ ನಿರಂತರ ಕಾಮಿಡಿ ನೋಡಿ ಜನತೆಗೆ ಸಾಕಾಗಿ ಹೋಗಿದೆ. ಹಾಗಾಗಿ ಪ್ರೇಕ್ಷಕರು ಬದಲಾವಣೆ ಬಯಸಿದ್ದಾರೆ. ಗಂಭೀರ, ತಿಳಿ ಹಾಸ್ಯದ ತುಳು ನಾಟಕಗಳನ್ನು ಇಷ್ಟಪಡುತ್ತಾರೆ. ಪ್ರೇಕ್ಷಕರ ಮನೋಧರ್ಮ ಅರಿತು ತುಳು ನಾಟಕ, ಸಿನಿಮಾಗಳಲ್ಲಿ ಸದಭಿರುಚಿಯ ಬದಲಾವಣೆ ತರಬೇಕಾಗಿದೆ ಎಂದು ರಂಗಕರ್ಮಿ, ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು ತನ್ನ ರಂಗಭೂಮಿ ಹಾಗೂ […]

ಕನ್ನಡ, ತುಳು ಸಿನೆಮಾ ನಟ, ನಿರ್ದೇಶಕ ಶರತ್ ಚಂದ್ರ ಕದ್ರಿ ಇನ್ನಿಲ್ಲ

Monday, January 10th, 2022
sharathchandra Kadri

ಮಂಗಳೂರು : ಕನ್ನಡ, ತುಳು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ ಹಾಗೂ ನೂರಕ್ಕೂ ಹೆಚ್ಚು ನಾಟಕ ಗಳನ್ನು ರಚಿಸಿ ಅಭಿನಯಿಸಿದ ಹಿರಿಯ ನಟ ಹಾಗೂ ನಿರ್ದೇಶಕ ಶರತ್ ಚಂದ್ರ ಕದ್ರಿ ಅವರು ಭಾನುವಾರ ಬೆಳಿಗ್ಗೆ 4.30  ಕ್ಕೆ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆ.ಏನ್ ಟೈಲರ್ ನಾಟಕಗಳ ಮೂಲಕ ನಾಯಕ ನಟನಾಗಿ ರಂಗಭೂಮಿ ಪ್ರವೇಶಿಸಿದ ಶರತ್ ಚಂದ್ರ ಕದ್ರಿ ಕನ್ನಡದ ಕತ್ತೆಗಳು ಸಾರ್ ಕತ್ತೆಗಳು ಸಿನೆಮಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ತುಳುವಿನ ಕಟಪಾಡಿ ಕಟ್ಟಪ್ಪಾ, ದೊಂಬರಾಟ ಮೊದಲಾದ ಚಿತ್ರಗಳಲ್ಲಿ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ದೇವಸ್ಥಾನ ತಮಿಳು ನಿರ್ಮಾಪಕ

Saturday, July 24th, 2021
Arun Kumar

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಅರುಣ್ ಕುಮಾರ್(ಅಟ್ಲೀ) ದಂಪತಿ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರು ದೇವಳದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು. ದೇವಳದ ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಹರೀಶ್ ಇಂಜಾಡಿ, ಮಾಜಿ ಸದಸ್ಯ ಸುರೇಶ್ ಭಟ್ ಉಪಸ್ಥಿತರಿದ್ದರು.

ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

Thursday, July 15th, 2021
Darshan-Indrajeeth

ಬೆಂಗಳೂರು : ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಸಂದೇಶ್ ದಿ ಪ್ರಿನ್ಸ್  ಹೋಟೆಲಿನಲ್ಲಿ  ದರ್ಶನ್ನೇ ಸಪ್ಲೈಯರ್‌ಗೆ ಹೊಡೆದಿರೋದು ಎಂದು ನೇರವಾಗಿ ಆರೋಪಿಸಿದ್ದು, ಭಾರೀ ಸಂಚಲನ ಮೂಡಿಸಿದೆ. ನಾನು ಹೇಳಿದ ಎಲ್ಲ ಮಾತುಗಳು ನಿಜ ಎಂಬುದನ್ನು ಇಂದ್ರಜಿತ್ ಸ್ಪಷ್ಟ ಪಡಿಸಿದ್ದಾರೆ. ಪ್ರಕರಣದ ಸರಿಯಾದ ತನಿಖೆಯಾಗಬೇಕು ಎಂದರೆ ಸಿಸಿಟಿವಿ ದೃಶ್ಯಗಳನ್ನು ಹೊರತೆಗೆಯಬೇಕು ಎಂದು ಅವರು ಹೇಳಿದ್ದಾರೆ. ಸಣ್ಣದಾಗಿ ಗಲಾಟೆ ನಡೆದಿದ್ದು ನಿಜ, ಆದರೆ ದರ್ಶನ್ ಯಾರಿಗೂ […]

ನಾಟಕಕಾರ, ತುಳುರಂಗ ಭೂಮಿಯ ಹಿರಿಯ ನಟ ನಿರ್ದೇಶಕ ಮಾಧವ ಜಪ್ಪು ಪಟ್ನ ನಿಧನ

Thursday, October 15th, 2020
Madhava jappu patna

ಮಂಗಳೂರು : ತುಳು ರಂಗ ಭೂಮಿಯ ಹಿರಿಯ ನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪು ಪಟ್ನ (66 ವ.) ಗುರುವಾರ ನಿಧನರಾದರು. ಜಪ್ಪು ಪಟ್ನ ಅವರಿಗೆ ಜ್ವರಕಾಣಿಸಿಕೊಂಡು ಆಮ್ಲಜನಕದ ಮಟ್ಟ ಕಡಿಮೆಯಾಗಿ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿ ಕಳೆದ 24 ದಿನಗಳಿಂದ  ಚಿಕಿತ್ಸೆ ಪಡೆಯುತ್ತಿದ್ದರು, ಅದಾಗಲೇ ಕೋವಿಡ್ ಸೋಂಕಿನಿಂದ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಗುರುವಾರ ಇಹಲೋಗ ತ್ಯಜಿಸಿದರು. ಮಾಧವ ಜಪ್ಪು ಪಟ್ನ ಅವರು ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುದ್ರೋಳಿ ಶ್ರೀ ಭಗವತೀ ತೀಯಾ ಸೇವಾ […]

ಭಾಸ್ಕರ್ ಎಂ ಸಾಲ್ಯಾನ್ ರಿಗೆ ಮಾತೃ ವಿಯೋಗ

Friday, July 31st, 2020
Kamala

ಮುಂಬಯಿ : ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ ಸಾಲ್ಯಾನ್ ಅವರ ತಾಯಿ ಕಮಲಾ ಎಂ ಸಾಲ್ಯಾನ್ (82) ಜು. 30ರಂದು ಮೂಲ್ಕಿಯ ಸ್ವಗೃಹ ಕಮಲ ಸದನದಲ್ಲಿ ನಿಧನ ಹೊಂದಿದರು. ಮೃತರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ಬಿಲ್ಲವ ಸಮಾಜದ ಮುಖಂಡರಾದ ಜಯ ಸಿ. ಸುವರ್ಣರ ಹಿರಿಯ ಸಹೋದರಿ. ಸಮಾಜ ಸೇವಕ ದಿ. ಮುದ್ದು ಸಾಲ್ಯಾನ್ ಅವರ ಧರ್ಮಪತ್ನಿ. ಕಮಲಾ ಎಂ ಸಾಲ್ಯಾನ್ ಇವರು ಮಕ್ಕಳಾದ ತಾರಾ ಡಾ. ಜಗನ್ನಾಥ್, ಶಶೀಂದ್ರ ಎಂ ಸಾಲ್ಯಾನ್, ರವಿ. ಎಂ ಸಾಲ್ಯಾನ್, […]

ಕೊರೊನಾ ರೋಗಿಯ ಚಿಕಿತ್ಸೆಗೆ ಇಂಡಿಯಾನ ಆಸ್ಪತ್ರೆಯ ಬಿಲ್ 1,98,664 ರೂಪಾಯಿ

Thursday, July 16th, 2020
indiana Hospital

ಮಂಗಳೂರು : ಬಡವರನ್ನ ಹಿಂಡಿ ಹಿಪ್ಪೆ ಮಾಡುವ ಆಸ್ಪತ್ರೆಗಳು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಉಸಿರಾಟ ದ ತೊಂದರೆಯಿಂದ ಇಲ್ಲಿನ ಆಸ್ಪತ್ರೆಗಳಿಗೆ ದಾಖಲಾಗ ಬೇಕಾದರೆ ಕನಿಷ್ಠ ಒಂದು ಲಕ್ಷ ಡೆಪಾಸಿಟ್ ಇಡಬೇಕು, ಮತ್ತೆ ರೋಗಿ ಗುಣ ಮುಖನಾಗಿ ಹೊರಬರಬೇಕಾದರೆ  ಬಿಲ್ ಕಟ್ಟಲು ತನ್ನ ಅಸ್ತಿಯನ್ನೇ ಮಾರಬೇಕಾದ ಪರಿಸ್ಥಿತಿ ಬರಬಹುದು. ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಯು ಕೊರೊನಾ ರೋಗಿಗಳಿಂದ ಅಧಿಕ ಮೊತ್ತದ ಹಣವನ್ನು ಪಡೆಯುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಕೊರೊನಾ ರೋಗಿಗೆ 1,98,664 ರೂಪಾಯಿ ಬಿಲ್ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ […]