ನೇತ್ರಾವತಿ ಸೇತುವೆಯಲ್ಲಿ ರಿಕ್ಷಾ ಮತ್ತು ಕಾರು ಅಫಘಾತ, ಚಾಲಕ ಸಾವು

Saturday, March 27th, 2021
Netravathi Bridge

ಉಳ್ಳಾಲ : ನೇತ್ರಾವತಿ ಸೇತುವೆಯಲ್ಲಿ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆಸಂಭವಿಸಿದೆ. ಮೃತರನ್ನು ಪಜೀರು ಸೇನೆರೆಬೈಲು ಸಂಜೀವ ಪೂಜಾರಿ ಎಂಬವರ ಪುತ್ರ ಶ್ಯಾಮಪ್ರಸಾದ್ (45)ಎಂದು ಗುರುತಿಸಲಾಗಿದೆ. ಶ್ಯಾಮಪ್ರಸಾದ್ ಬೆಳಗ್ಗೆ ಮನೆ ಸಮೀಪದ ಬಾಡಿಗೆ ದೊರಕಿತೆಂದು ಮನೆಯಲ್ಲಿ ತಿಳಿಸಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ಸಂದರ್ಭ ಕಾರು ಢಿಕ್ಕಿ ಹೊಡೆದಿದೆ. ಪಡೀಲ್ ಕಣ್ಣೂರಿನಿಂದ ತಲಪಾಡಿ ಶಾರದಾ ವಿದ್ಯಾ ಸಂಸ್ಥೆಗೆ ಸಹೋದರನನ್ನು ಬಿಡಲು ಬರುತ್ತಿದ್ದ ಕಾರು ಚಾಲಕ ರಿಕ್ಷಾಗೆ ಢಿಕ್ಕಿ […]

ನೇತ್ರಾವತಿ ಸೇತುವೆಯಯಿಂದ ಹಾರಿದ ವ್ಯಕ್ತಿ ಶವವಾಗಿ ಪತ್ತೆ

Saturday, June 20th, 2020
Surendrarai

ಮಂಗಳೂರು : ನೇತ್ರಾವತಿ ಸೇತುವೆಯಯಿಂದ ಶುಕ್ರವಾರ ಅಪರಾಹ್ನ ಹಾರಿದ ವ್ಯಕ್ತಿಯ ಶವವು ಶನಿವಾರ ಬೆಳಿಗ್ಗೆಉಳ್ಳಾಲದ ಉಳಿಯ ಎಂಬಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂದು ಗುರುತಿಸಲಾಗಿದೆ. ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು, ಅವರಿಗೆ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಶುಕ್ರವಾರ ನೇತ್ರಾವತಿ ಸೇತುವೆಯ ಮೇಲೆ ಫೋನ್ ಪತ್ತೆಯಾಗಿತ್ತು, ಇದನ್ನು ಕಂಡ ಸ್ಥಳೀಯರು ನದಿಗೆ ಯಾರೋ ವ್ಯಕ್ತಿ ಹಾರಿರಬೇಕೆಂದು ಶಂಕೆ […]

ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗದಂತೆ ತಡೆಯಲು ಸಿಸಿ ಕ್ಯಾಮರಾ, ತಂತಿ ಬೇಲಿ : ಶಾಸಕ ವೇದವ್ಯಾಸ್ ಕಾಮತ್

Thursday, April 16th, 2020
Vedavyas-Kamath

ಮಂಗಳೂರು : ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗುತ್ತಿದ್ದು ಅದನ್ನು ತಪ್ಪಿಸಲು ಸೇತುವೆಯ  ಎರಡೂ ಭಾಗಗಳಲ್ಲಿ ತಂತಿ ಬೇಲಿ ಹಾಗೂ ಸಿಸಿ ಟಿವಿ ಅಳವಡಿಕೆ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಇದೇ ಮಾತನ್ನು ವರ್ಷದ ಹಿಂದೆ ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಾಗ 2019 ರ ಸೆಪ್ಟೆಂಬರ್ ತಿಂಗಳಲ್ಲಿಯೂ ಹೇಳಿದ್ದರು. ಬಳಿಕ 2020 ರ ಜನವರಿ ತಿಂಗಳಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿಯು ಪುನರಾವರ್ತಿಸಿದ್ದರು. ಇಂದು ಮಾಧ್ಯಮಕ್ಕೆ ಮಾಹಿತಿ ನೀಡಿದಂತೆ ನೇತ್ರಾವತಿ ಸೇತುವೆಯ ಮೇಲೆ […]

ಉಳ್ಳಾಲ ನೇತ್ರಾವತಿ ಸೇತುವೆಯ ಮೇಲೆ ಶೀಘ್ರವೇ ಸಿಸಿ ಕ್ಯಾಮರಾ ಅಳವಡಿಕೆಗೆ ನಿರ್ಧಾರ : ಶಾಸಕ ವೇದವ್ಯಾಸ್ ಕಾಮತ್

Saturday, January 18th, 2020
kamath

ಮಂಗಳೂರು : ಉಳ್ಳಾಲದ ನೇತ್ರಾವತಿ ನದಿ ಸೇತುವೆಯ ಎರಡೂ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆ ಅಳವಡಿಕೆಗೆ ಕ್ರಿಯಾ ಯೋಜನೆ ಹಾಗೂ ಸೇತುವೆಯ ಎರಡೂ ಬದಿಗಳಲ್ಲಿ ತಕ್ಷಣವೇ ಸಿಸಿ ಕ್ಯಾಮರಾ ಅಳವಡಿಕೆಗೆ ಶನಿವಾರ ನಡೆದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ವೆಲೆನ್ಸಿಯಾ ಜಂಕ್ಷನ್‌ನಲ್ಲಿರುವ ಪಾರ್ಕನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಡೆಯಿಂದ ತಕ್ಷಣವೇ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ನಗರದ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗುವಂತೆ ಪಾರ್ಕ್ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾಧಿಕಾರಿ […]

ನೇತ್ರಾವತಿ ಸೇತುವೆಯಿಂದ ನದಿಗೆ ದುಮುಕಿದ ಯುವಕನ ಮೃತದೇಹ ಪತ್ತೆ

Friday, January 3rd, 2020
naveesh

ಮಂಗಳೂರು : ಮಂಗಳೂರಿನ ಹೊರವಲಯದ ನೇತ್ರಾವತಿ ಸೇತುವೆಯಿಂದ ನದಿಗೆ ದುಮುಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜ.3 ರ ಬೆಳಿಗ್ಗೆ 6:30 ಕ್ಕೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ನದಿಗೆ ಹಾರಿದ ಯುವಕನನ್ನು ಉಳ್ಳಾಲಬೈಲ್ ನಿವಾಸಿ ನವೀಶ್ ಎಂದು ಗುರುತಿಸಲಾಗಿದೆ. ಬೆಳಗ್ಗಿನ ಜಾವ ಮನೆಯಿಂದ ಹೊರಟವರು ನೇತ್ರಾವತಿ ನದಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ನದಿಗೆ ಜಿಗಿದು ಆತ್ಮಹತ್ಯೆ ನಡೆಸಿದ್ದಾರೆ. ನವೀಶ್ ಅವರು ಕುತ್ತಾರು ಸನಿಹ ಶಾಮಿಯಾನ ಹಾಗೂ ನೀರಿನ ಟ್ಯಾಂಕರ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆತ್ಮಹತ್ಯೆಯ ಹಿಂದೆ […]

ಉಳ್ಳಾಲ : ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಯುವಕನಿಗಾಗಿ ಪೊಲೀಸರಿಂದ ಶೋಧ

Friday, January 3rd, 2020
ullal

ಉಳ್ಳಾಲ : ಯುವಕನೋರ್ವ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ನಾಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನದಿಗೆ ಹಾರಿದರೆನ್ನಲಾದವರನ್ನು ಉಳ್ಳಾಲಬೈಲ್ ನಿವಾಸಿ ನವೇಶ್(30) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನಲ್ಲಿ ಅಂಗಡಿ ಹೊಂದಿರುವ ಇವರು ಇಂದು ಮುಂಜಾನೆ 6:30ರ ಸುಮಾರಿಗೆ ನದಿಗೆ ಹಾರಿದ್ದರೆನ್ನಲಾಗಿದೆ. ಇವರ ಬೈಕ್ ಸೇತುವೆಯ ಮೇಲೆ ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ನವೇಶ್‌ಗಾಗಿ ಶೋಧ ಮುಂದುವರಿಸಿದ್ದಾರೆ.  

ಪುತ್ತೂರು ಮೂಲದ ಯುವತಿ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ

Saturday, August 10th, 2019
Gajaneeshwari

ಮಂಗಳೂರು  : ನೇತ್ರಾವತಿ ಸೇತುವೆಯಿಂದ ಯುವತಿಯೊಬ್ಬಳು ಶುಕ್ರವಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಇಲ್ಲಿಗೆ ಸಮೀಪದ ಸೋಮೇಶ್ವರದಲ್ಲಿ ಶವ ಪತ್ತೆಯಾಗಿದೆ. ಪುತ್ತೂರು ಮೂಲದ ನಿವೇದಿತಾ ಗಜನೇಶ್ವರಿ (25) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ನಿವೇದಿತಾ ಗಜನೇಶ್ವರಿ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಹಾರಿದ್ದರು. ರಾತ್ರಿಯೇ ರಕ್ಷಣಾ ಪಡೆಗಳು ಹುಡುಕುವ ಕಾರ್ಯಾಚರಣೆ ನಡೆಸಿದ್ದವು. ಇಂದು ಬೆಳಿಗ್ಗೆ ಸೋಮೇಶ್ವರ‌ ಬಟ್ಟಪ್ಪಾಡಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿತ್ತು. ಈಕೆ ಸೇತುವೆ ಬಳಿ ತನ್ನ ಬ್ಯಾಗ್, […]

ನೇತ್ರಾವತಿ ಸೇತುವೆಗೆ ಸಿಸಿಟಿವಿ ಕ್ಯಾಮೆರಾ : ವೇದವ್ಯಾಸ ಕಾಮತ್

Friday, August 2nd, 2019
cctv

ಮಂಗಳೂರು :  ನೇತ್ರಾವತಿ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಲಾಗುವು ದೆಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಬಳಿಕ ಮಂಗಳೂರು- ಉಳ್ಳಾಲ ರಸ್ತೆಯಲ್ಲಿನ ನೇತ್ರಾವತಿ ಸೇತುವೆ ಹೆಚ್ಚು ಸುದ್ದಿಯಲ್ಲಿದೆ. “ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ನೆಲೆಯಾಗುತ್ತಿದೆ. ಸಿಸಿ ಟಿವಿಗಳನ್ನು ಅಳವಡಿಸಿದರೆ ಸೇತುವೆ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ […]

ನೇತ್ರಾವತಿ ಸೇತುವೆಯಿಂದ ನದಿತೀರದಲ್ಲಿ ಎನ್.ಎಂ.ಪಿ.ಟಿ ವರೆಗೆ ರಸ್ತೆ : ಶಾಸಕ ಜೆ.ಆರ್.ಲೋಬೊ

Thursday, December 21st, 2017
j-r-lobo

ಮಂಗಳೂರು: ನೇತ್ರಾವತಿ ಸೇತುವೆಯಿಂದ ನದಿ ಬದಿಯಲ್ಲಿ ಮಂಗಳೂರು ಹಳೆ ಬಂದರು, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿಯಾಗಿ ನವಮಂಗಳೂರು ಬಂದರಿಗೆ ಪರ್ಯಾಯ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಾ ಈ ಯೋಜನೆಗೆ ಸುಮಾರು ೧೦೦೦ ಕೋಟಿ ರೂಪಾಯಿ ಹೂಡಿಕೆಯಾಗಲಿದೆ ಎಂದರು. ಸುಲ್ತಾನ್ ಬತ್ತೇರಿಯಲ್ಲಿ ಸೇತುವೆಯನ್ನು ನಿರ್ಮಿಸಿ ತೂಗುಸೇತುವೆ ನಿರ್ಮಾಣವನ್ನು ಕೈಬಿಡಲು ಉದ್ದೇಶಿಸಲಾಗಿದೆ. ಸೇತುವೆ ನಿರ್ಮಾಣವಾದರೆ ತೂಗುಸೇತುವೆಯ ಅಗತ್ಯವಿರುವುದಿಲ್ಲ ಎಂದ ಅವರು ಈ ರಸ್ತೆಯನ್ನು ಬಹುಪಯೋಗಿಯ ರಸ್ತೆಯನ್ನು […]

ನೇತ್ರಾವತಿ ಸೇತುವೆ ಹಳಿ ದ್ವಿಗುಣ ರೈಲು ಸಂಚಾರ ಸಮಯ ಬದಲಾವಣೆ

Wednesday, April 25th, 2012
Netravati Railway Bridge

ಮಂಗಳೂರು : ರೈಲು ಹಳಿ ದ್ವಿಗುಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ನೇತ್ರಾವತಿ ಸೇತುವೆ ಮತ್ತು ಮಂಗಳೂರು ಜಂಕ್ಷನ್‌ (ಕಂಕನಾಡಿ) ನಡುವಿನ ರೈಲು ಸಂಚಾರ ವ್ಯವಸ್ಥೆಯನ್ನು ಕೆಲವು ನಿರ್ದಿಷ್ಟ ದಿನಗಳಿಗೆ ವ್ಯತ್ಯಯ ಮಾಡಲಾಗಿದೆ ಎಂದು ರೈಲ್ವೇ ಇಲಾಖೆಯ ಪ್ರಕಟನೆ ತಿಳಿಸಿದೆ. ಕೆಲವು ರೈಲುಗಳ ಪ್ರಯಾಣ ರದ್ದು, ಇನ್ನು ಕೆಲವು ರೈಲುಗಳ ಸಮಯ ಬದಲಾವಣೆ ಹಾಗೂ ಇನ್ನು ಕೆಲವು ರೈಲುಗಳ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಪ್ಯಾಸೆಂಜರ್‌ (ಟ್ರೈನ್‌ ನಂ. 56645) ಮತ್ತು ಸುಬ್ರಹ್ಮಣ್ಯ ರೋಡ್‌- ಮಂಗಳೂರು […]