ವರ್ಕಾಡಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ

Friday, July 8th, 2016
VRA-Research-Sub-Centre

ಮಂಜೇಶ್ವರ: ಇಲ್ಲಿನ ವರ್ಕಾಡಿ ಪ್ರಾದೇಶಿಕ ಕೃಷಿ ಸಂಶೋಧನಾ ಉಪಕೇಂದ್ರಕ್ಕೆ ಪಿಲಿಕ್ಕೋಡು ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದರು. ಕಳೆದ ದಶಕಗಳಿಂದ ಅನಾಸ್ಥೆಯಲ್ಲಿರುವ ಪ್ರಸ್ತುತ ಕೇಂದ್ರಕ್ಕೆ ಪುನಶ್ಚೇತನ ನೀಡಬೇಕೆನ್ನುವ ನಿರಂತರ ಬೇಡಿಕೆಯನ್ನು ಮನ್ನಿಸಿ ಅಧಿಕಾರಿಗಳ ನಿಯೋಗವೊಂದು ಪ್ರಸ್ತುತ ಸ್ಥಳಕ್ಕೆ ಭೇಟಿ ನೀಡಿ ವರದಿ ಸಂಗ್ರಹಿಸಿತು. ಪಿಲಿಕ್ಕೋಡು ಕೃಷಿ ಶಂಶೋಧನಾ ಕೇಂದ್ರದ ಎಡಿಆರ್ ಡಾ,ಅಬ್ದುಲ್ ಕರೀಂ ನೇತೃತ್ವದ ತಂಡದಲ್ಲಿ ಸಹಾಯಕ ಉಪನ್ಯಾಸಕ ಪಿ.ಕೆ.ರಿತೇಶ್, ಡಾ.ಶಶಿಕಾಂತ್, ಪಾರ್ಮ್ ಸುಪರಿಟೆಂಡೆಂಟ್ ಎಂ.ವಿ. ಪ್ರೇಮರಾಜನ್, ಕೃಷಿ ಭವನದ ಸಹಾಯಕ ಅಧಿಕಾರಿ ಎ.ವಿ.ರಾಧಾಕೃಷ್ಣ, ಮುಂತಾದವರು […]

ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ, ಯೂತ್ ಕಾಂಗ್ರೆಸ್‌ನಿಂದ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ

Thursday, January 28th, 2016
rohith mamulla

ಮುಳ್ಳೇರಿಯಾ: ಆಂಧ್ರ ವಿಶ್ವವಿದ್ಯಾನಿಲಯದ ಸಂಶೋಧಕ ವಿದ್ಯಾರ್ಥಿ ರೋಹಿತ್ ವೆಮುಲಾರವರ ಆತ್ಮಹತ್ಯೆ ಪ್ರಕರಣದ ನೈಜ್ಯ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪೆರಿಯ ಕೇಂದ್ರಿಯ ವಿಶ್ವವಿದ್ಯಾನಿಲಯಕ್ಕೆ ಮಾರ್ಚ್ ನಡೆಸಲಾಯಿತು. ಕೆಪಿಸಿಸಿ ಮುಖಂಡ ಅಡ್ವ ಟಿ.ಸಿದ್ದಿಕ್ ಧರಣಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರೋಹಿತ್ ವೆಮುಲಾ ಸಾವು ದೇಶದ ಅಸಹಿಷ್ಣುತೆಯ ಪ್ರತ್ಯಕ್ಷ ದರ್ಶನವಾಗಿದೆ, ರೋಹಿತ್ ಸಾವಿಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ, ನರೇಂದ್ರ ಮೋದಿ ನೇತೃತ್ವದ ಸರಕಾರ ಜಾತಿ, ಧರ್ಮದ ಹೆಸರಿನಲ್ಲಿ ನರಬೇಟೆಯಾಡುತ್ತಿದೆ […]