ಅರಣ್ಯ ಕಬಳಿಸಿ ಅಡಕೆ ತೋಟ ಮಾಡಿದ ಪರಿಸರವಾದಿಗಳು ?

Wednesday, May 27th, 2020
Hubli Ankola Train

ಹುಬ್ಬಳ್ಳಿ : ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕನಸು ಸುಮಾರು ದಶಕಗಳದು. ಈ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಸುಲಭವಾಗಿ ಸಂಪರ್ಕ ಸಾಧ್ಯವಾಗುತ್ತದೆ. ರೈಲು ಮಾರ್ಗ ಅನುಷ್ಠಾನಕ್ಕೆ ಒಂದೆಡೆ ಹೋರಾಟ ನಡೆಸಿದರೆ ಮತ್ತೊಂದೆಡೆ ಈ ಮಾರ್ಗ ದಿಂದ ಅರಣ್ಯನಾಶವಾಗಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬುದು ಪರಿಸರವಾದಿಗಳು ವಾದಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ವನ್ಯ ಜೀವಿ ಮಂಡಳಿ ಈ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ ಕಾಮಗಾರಿ ಆರಂಭಕ್ಕೆ ಮುನ್ನುಡಿ ಬರೆದಿದೆ. ಇತ್ತ ರೈಲು ಮಾರ್ಗ ಆರಂಭಕ್ಕೆ […]

ಬೃಹತ್ ಮರವೊಂದನ್ನು ಬುಡ ಸಮೇತ ಬೇರೆಡೆಗೆ ಸ್ಥಳಾಂತರಿಸಿದ ಪಾಲಿಕೆ

Tuesday, August 7th, 2018
Tree lifted

ಮಂಗಳೂರು : ಪರಿಸರವಾದಿಗಳು, ಮಂಗಳೂರು ಎನ್ ಇ ಸಿ ಎಫ್ ಪರಿಸರವಾದಿಗಳ ಸಂಘಟನೆ ಕಾರ್ಯಕರ್ತರಿಂದ  ತೀವ್ರ ವಿರೋಧವಾದ ಹಿನ್ನಲೆಯಲ್ಲಿ ಲೇಡಿಹಿಲ್ ನ ರಸ್ತೆ ತಿರುವಿನಲ್ಲಿದ್ದ ಬೃಹತ್ ಮರವೊಂದನ್ನು ಬುಡ ಸಮೇತ ಬೇರೆಡೆಗೆ ಸ್ಥಳಾಂತರಿಸಿ ನೆಡಲಾಗಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗುತಿದ್ದ ಹಿನ್ನೆಲೆಯಲ್ಲಿ ‘ಪೆಲ್ಟೋಫೋರಂ’ ಜಾತಿಯ ಆ ಮರವನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತ್ತು. ಮಂಗಳೂರು ಮಾಹಾನಗರ ಪಾಲಿಕೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ ಸಮೀಪದಲ್ಲೇ ಇದ್ದ ಖಾಲಿ ಜಾಗಕ್ಕೆ ಸ್ಥಳಾತಂರಿಸಲಾಯಿತು.