ಕಂದಾವರ ಪಂಚಾಯತ್‌ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ ಪಿಡಿಒ, ಗ್ರಾಮಸ್ಥರಿಂದ ಪ್ರತಿಭಟನೆಗೆ ಕರೆ

Tuesday, November 30th, 2021
Umesha Kandavara

ಮಂಗಳೂರು :   ಕಂದಾವರ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಂದಾವರ ಪಂಚಾಯತ್‌ ಅಧ್ಯಕ್ಷ ಉಮೇಶ್ ಮೂಲ್ಯ ಹಲ್ಲೆಗೊಳಗಾದವರು. ಈ ನೆಲೆಯಲ್ಲಿ ಪಂಚಾಯತ್ ಸದಸ್ಯರು ಪಂಚಾಯತ್ ಕಚೇರಿಯ ಮುಂಭಾಗ ಪಿಡಿಒ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಿಗ್ಗೆ ಗ್ರಾಮಸ್ಥರು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ವಿಟ್ಲದಲ್ಲಿ ಭಗವತ್ ಧ್ವಜ ತೆರವುಗೊಳಿಸಿದ ಪಿಡಿಒ

Sunday, October 3rd, 2021
Bhagavath

ಮಂಗಳೂರು : ವಿಟ್ಲ ವೀರಕಂಬ ಗ್ರಾಮದ  ಮಂಗಳಪದವು ಎಂಬಲ್ಲಿ  ಹಾಕಲಾದ  ಭಗವತ್ ಧ್ವಜವನ್ನು ಪಿಡಿಒ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದು ಸಂಘಟನೆ ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು. ಬಳಿಕ ಭಗವತ್ ಧ್ವಜವನ್ನು ಮರು ಹಾಕುವ ಮೂಲಕ ಪ್ರಕರಣ ಇತ್ಯರ್ಥಗೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಠಾಣೆ ಮೆಟ್ಟಿಲೇರಿತ್ತು.

ಮಾಸ್ಕ್‌ ಧರಿಸದಕ್ಕೆ ಫೊಟೊ ತೆಗೆದ ಪಿಡಿಒ ಕಪಾಳಕ್ಕೊಡೆದ ನಾಲ್ವರು ಆರೋಪಿಗಳ ಬಂಧನ

Thursday, May 27th, 2021
Rajendra Shetty

ಮಂಗಳೂರು : ಕೊರೋನಾ ನಿಯಮಗಳನ್ನು ಪಾಲಿಸದೆ ಮಾಸ್ಕ್‌ ಧರಿಸದ ಕಾರಣಕ್ಕಾಗಿ ಫೊಟೊ ತೆಗೆದ  ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪರಂಗಿಪೇಟೆಯ ಮಹಮ್ಮದ್‌ ಇದಾಯತುಲ್ಲಾ(25), ಅಹ್ಮದ್‌ ಬಶೀರ್(‌30), ಕುತ್ತಾರ್‌ನ ಅಬೂಬಕರ್‌ ಸಿದ್ದಿಕ್‌(26) ಹಾಗೂ ಪರಂಗಿಪೇಟೆ ಪುದುವಿನ ಅಬ್ದುಲ್‌ ಸಿದ್ದಿಕ್‌(33) ಬಂಧಿತರು. ಇವರಲ್ಲಿ ಇದಾಯತುಲ್ಲಾ ಹಾಗೂ ಬಶೀರ್‌ ವಿರುದ್ಧ ವಿವಿಧ ಪ್ರಕರಣಗಳು ಹಿಂದೆಯೂ ದಾಖಲಾಗಿವೆ. ಮೇ 25 ರಂದು ಮಲ್ಲೂರು ರಸ್ತೆಯಲ್ಲಿ ಈ ನಾಲ್ವರು ಮಾಸ್ಕ್‌ ಧರಿಸದೆ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದ […]

ಮಂಗಳೂರು : ಗ್ರಾಮ ಪಂಚಾಯಿತಿ ಕಚೇರಿಯ ಸಮೀಪ ಮಾಸ್ಕ್ ಹಾಕಲು ಹೇಳಿದ ಪಿಡಿಒ ಕಪಾಳಕ್ಕೊಡೆದ ಯುವಕರು

Tuesday, May 25th, 2021
Rajendra Shetty

ಮಂಗಳೂರು : ಮಲ್ಲೂರ್ ಗ್ರಾಮ ಪಂಚಾಯಿತಿ ಸಮೀಪ ಅಲೆದಾಡುತ್ತಿದ್ದ  ಐದು ಮಂದಿ ಯುವಕರಿಗೆ  ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ  ಮೇ 25 ರ ಮಂಗಳವಾರ ದಂದು  ಕಪಾಳಕ್ಕೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಪಿಡಿಒ ರಾಜೇಂದ್ರ ಶೆಟ್ಟಿ ಅವರು ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲಿದ್ದ ಐದು ಮಂದಿ ಯುವಕರಿಗೆ ಮಾಸ್ಕ್  ಧರಿಸಿ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿದ್ದರು ಎಂದು ಹೇಳಲಾಗಿದೆ. ಆದರೆ ಅಬೂಬಕರ್  ಎಂಬ ವ್ಯಕ್ತಿ  ಇತರ ನಾಲ್ವರೊಂದಿಗೆ ಸೇರಿ  ಪಿಡಿಒ ಮುಖದ ಮೇಲೆ  ಹಲ್ಲೆ […]

ಹಳೆಯಂಗಡಿ : ಪಿಡಿಒ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ

Tuesday, February 18th, 2020
haleyangady

ಮಂಗಳೂರು : ಹಳೆಯಂಗಡಿ ಪಿಡಿಒ ಪೂರ್ಣಿಮಾ ಎಂಬುವರ ಮೇಲೆ‌ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಹಲ್ಲೆ ಖಂಡಿಸಿ ಜಿಲ್ಲೆಯಾದ್ಯಂತ ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕಸಹಾಯಕರು ಸೇರಿದಂತೆ ಪಂಚಾಯತ್ ರಾಜ್ ಇಲಾಖೆಯ ಎಲ್ಲ ಸರ್ಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಹಳೆಯಂಗಡಿ ಗ್ರಾಪಂನ ಇಂದಿರಾ ನಗರದಲ್ಲಿ ನೀರಿನ ಪಂಪ್ ಚಾಲಕ‌ ತಾತ್ಕಾಲಿಕ‌ ಗೈರು ಹಾಜರಾಗಿರೋದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನೀರು ಸರಬರಾಜು […]

ಐತೂರು ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ

Tuesday, June 4th, 2019
Prem-singh-nayak

ಮಂಗಳೂರು :  ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರೇಮ್ ಸಿಂಗ್ ನಾಯಕ್ ಜಾಗದ ಖಾತೆ ಬದಲಾವಣೆಗೆ ಲಂಚ ಪಡೆಯುವಾಗ ಎಸಿಬಿ ಬಲೆಗೆ  ಬಿದ್ದಿದ್ದಾರೆ. ಕಡಬ ನಿವಾಸಿ ಸಾಹುಲ್ ಹಮೀದ್ ಎಂಬುವರ ತಾಯಿಯ ಹೆಸರಿಂದ ಸಾಹುಲ್ ಹೆಸರಿಗೆ 10.4 ಸೆಂಟ್ಸ್ ಜಾಗದ ಖಾತೆ ಬದಲಾವಣೆಗೆ 9/11ರ ಅರ್ಜಿ ಸಲ್ಲಿಸಿದ್ದರು. ಮೊದಲು 8 ಸಾವಿರ ರೂ. ಜಮಾ ಮಾಡಿದ್ದಾರೆ. ಮತ್ತೆ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸೋಮವಾರ ಗುರುವಾಯನಕೆರೆಗೆ ಬಂದು ಹಣ ನೀಡುವಂತೆ ಹೇಳಿದ್ದರಂತೆ. 9 ಸಾವಿರ ನೀಡುವಾಗ […]

ಬಜಪೆ: ಸಭೆಯ ಕಲಾಪ ಹಾಗೂ ನಡವಳಿಕೆಗಳ ವೀಡಿಯೋ ಚಿತ್ರೀಕರಣ

Wednesday, October 25th, 2017
bajpe gram panchayath

ಮಂಗಳೂರು : ಬಜಪೆ ಗ್ರಾ.ಪಂಚಾಯತ್‌, ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯ ಕಲಾಪ ಹಾಗೂ ನಡವಳಿಕೆಗಳ ವೀಡಿಯೋ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿದೆ. ಸರಕಾರದ ಸುತ್ತೋಲೆ ಯಂತೆ ಈ ಹೆಜ್ಜೆಯನ್ನಿಟ್ಟ ಪ್ರಥಮ ಗ್ರಾಮ ಪಂಚಾಯತ್‌ ಇದಾಗಿದ್ದು, ಆಡಳಿತದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ. ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್‌ ರಾಜ್ಯ ಕಾಯ್ದೆ (ಸಭಾ ನಡಾವಳಿ, ಕಾರ್ಯವಿಧಾನ) 1993-94ರ ಪ್ರಕಾರ ಸಭೆಯನ್ನು ಯಾವ ರೀತಿ ನಡೆಸಬೇಕು. ನಡಾವಳಿ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಸಭಾ ಕಾರ್ಯಕಲಾಪ, ಅಡ್ಡಪ್ರಶ್ನೆ ಬಗ್ಗೆ 1994ರಲ್ಲಿ […]