ದ್ವಿತೀಯ ಪಿಯು ರಿಸಲ್ಟ್; ರಾಜ್ಯದಲ್ಲೇ ದಾಖಲೆಯ ಫಲಿತಾಂಶ ಪಡೆದ ಆಳ್ವಾಸ್

Wednesday, July 21st, 2021
Alvas Kannada Medium School

ಮೂಡುಬಿದಿರೆ : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆಯುವ ಮೂಲಕ ಆಳ್ವಾಸ್ ಪದವಿ ಪೂರ್ವ ಕಾಲೇಜು ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. 600ಕ್ಕೆ 600 ಅಂಕ ಗಳಿಸಿದ ದ.ಕ ಜಿಲ್ಲೆಯ 445 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು. ಇವರಲ್ಲಿ 13 ವಿದ್ಯಾರ್ಥಿಗಳು ಆಳ್ವಾಸ್ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೆಂಬುದು ಗಮನಾರ್ಹ. ಪರೀಕ್ಷೆಗೆ ಹಾಜರಾದ 2510 ವಿದ್ಯಾರ್ಥಿಗಳಲ್ಲಿ 1637 […]

ಪಿಯುಸಿ ಫಲಿತಾಂಶ ಆಯಾ ಕಾಲೇಜುಗಳಲ್ಲಿ ಬುಧವಾರ ಅಧಿಕೃತ ಫಲಿತಾಂಶ ಪ್ರಕಟ

Tuesday, July 14th, 2020
puc-result

ಮಂಗಳೂರು  : ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಜೊತೆಗೆ ಉಡುಪಿ ಜಿಲ್ಲೆಯು ಶೇ.90.71 ಫಲಿತಾಂಶದೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ. ಪಿಯುಸಿ ಫಲಿತಾಂಶದ ಮೊದಲೆರಡು ಸ್ಥಾನಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಸ್ಪರ್ಧೆಯಲ್ಲಿತ್ತು. 2013ರಲ್ಲಿ ಉಡುಪಿ ಜಿಲ್ಲೆ ಶೇ.86.24 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, 2014 ರಿಂದ 2016ರವರೆಗೆ ಸತತ ಮೂರು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ ವನ್ನು ತನ್ನ ಬಳಿ ಉಳಿಸಿಕೊಂಡಿತ್ತು. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ […]

ಪರೀಕ್ಷೆಯಲ್ಲಿ ಅನಿತ್ತೀರ್ಣಳಾದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

Tuesday, May 7th, 2013
Veena Kundapur

ಕುಂದಾಪುರ : ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ತಲ್ಲೂರು ಗರಡಿಮನೆ ಸಮೀಪದ ನಿವಾಸಿ ನರಸಿಂಹ ಪೂಜಾರಿಯವರ ಪುತ್ರಿ ವೀಣಾ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಈಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಳು ಎನ್ನಲಾಗಿದೆ. ಆದರೆ ಸೋಮವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತಾನು ಅನುತ್ತೀರ್ಣಳಾದ ಸಂಗತಿ ತಿಳಿದು ಖಿನ್ನಗೊಂಡ ಆಕೆ ರಾತ್ರಿ ನೆರೆಮನೆಯವರ ತೋಟದ ಬಾವಿಗೆ […]