ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಹಿರಿದು- ಪಿ.ಬಿ.ಆಚಾರ್ಯ

Monday, July 1st, 2019
DKWJU

ಮಂಗಳೂರು: ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪತ್ರಕರ್ತರ ಪಾತ್ರ ಬಲು ಹಿರಿದಾದುದು ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಬಲು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. […]

ನಾಗಲ್ಯಾಂಡ್​​​ನ ರಾಜ್ಯಪಾಲ ಮಂಗಳೂರಿಗೆ ಆಗಮನ

Wednesday, December 26th, 2018
nagaland

ಮಂಗಳೂರು: ನಾಗಲ್ಯಾಂಡ್ ನ ರಾಜ್ಯಪಾಲ ಪಿ.ಬಿ.ಆಚಾರ್ಯ ಇಂದು ಸಂಜೆ ನಗರದ ಸರ್ಕಿಟ್ ಹೌಸ್ನಲ್ಲಿ‌ ಸಚಿವ ಯು.ಟಿ.ಖಾದರ್ ಅವರನ್ನು‌ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ತಮ್ಮ ವೈಯುಕ್ತಿಕ ಕಾರ್ಯಕ್ರಮಕ್ಕೆ ನ್ಯಾಗಾಲ್ಯಾಂಡ್ನಿಂದ ಮಂಗಳೂರಿಗೆ ಆಗಮಿಸಿದ ಪಿ.ಬಿ.ಆಚಾರ್ಯ, ಸರ್ಕಿಟ್ ಹೌಸ್ನಲ್ಲಿ ಉಳಿದುಕೊಂಡಿರು. ಈ ಸಂದರ್ಭ ಸಚಿವ ಯು.ಟಿ.ಖಾದರ್ ಸಭೆ ನಡೆಸಿರುವುದನ್ನು ತಿಳಿದು ಅಲ್ಲಿಗೆ ಆಗಮಿಸಿದ್ದರು. ಪಿ.ಬಿ.ಆಚಾರ್ಯ ಮೂಲತಃ ಕರ್ನಾಟಕದ ಉಡುಪಿ ಮೂಲದವರಾಗಿದ್ದು, 2014 ರಿಂದ ಅವರು ನ್ಯಾಗಾಲ್ಯಾಂಡ್ನ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಸಕ ವೇದವ್ಯಾಸ ಕಾಮತ್ ವಿನಂತಿ ಮೇರೆಗೆ ನಾಗಾಲ್ಯಾಂಡ್ ರಾಜ್ಯಪಾಲರಿಂದ ಕೊಡಗು ಜಿಲ್ಲೆಗೆ 5 ಲಕ್ಷ ರೂ. ದೇಣಿಗೆ

Wednesday, August 22nd, 2018
Vedavyas kamath

ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ವಿನಂತಿ ಮೇರೆಗೆ ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ 5 ಲಕ್ಷ ರೂ. ದೇಣಿಗೆಯನ್ನು ವೈಯ್ಯಕ್ತಿಕವಾಗಿ ನೀಡಿದ್ದಾರೆ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿರು ಹಾನಿಗೆ ಪರಿಹಾರವಾಗಿ ನಾಗಾಲ್ಯಾಂಡ್ ರಾಜ್ಯ ಸರಕಾರದ ವತಿಯಿಂದ 20 ಲಕ್ಷ ರೂಪಾಯಿಯನ್ನು ಶಾಸಕರ ಮನವಿಯಂತೆ ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ನೆರೆ ರಾಜ್ಯ ಕೇರಳಕ್ಕೂಶಾಸಕ ವೇದವ್ಯಾಸ ಕಾಮತ್ ಅವರ ವಿನಂತಿಯ ಮೇರೆಗೆ […]

ಸಾಮಾನ್ಯರಂತೆ ಹೋಟೆಲ್‌‌ನಲ್ಲಿ ಊಟ ಸವಿದ ನಾಗಾಲ್ಯಾಂಡ್‌‌‌ ರಾಜ್ಯಪಾಲ..!

Friday, May 25th, 2018
governer

ಮಂಗಳೂರು: ಮೂಲತಃ ಉಡುಪಿ ಜಿಲ್ಲೆಯವರಾದ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಸಾಮಾನ್ಯರಂತೆ ಮಂಗಳೂರಿನ ತಾಜ್‌‌ಮಹಲ್ ಹೋಟೆಲ್‌‌ನಲ್ಲಿ ಊಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ರಾಜ್ಯಪಾಲರಿಗೆ ವಿಶೇಷ ಭದ್ರತೆಯಿರುವುದರಿಂದ ಸಾಮಾನ್ಯವಾಗಿ ಆ ಹುದ್ದೆಯಲ್ಲಿರುವವರು ಜನಸಾಮಾನ್ಯರೊಂದಿಗೆ ಇರುವುದು ಬಹಳ ವಿರಳ. ಆದರೆ ಪಿ.ಬಿ. ಆಚಾರ್ಯ ಅವರು ಮಂಗಳೂರಿನ ತಾಜ್‌‌ಮಹಲ್ ಹೋಟೆಲ್‌‌ನಲ್ಲಿ ಸಾಮಾನ್ಯರಂತೆ ಬೆರೆತು ಊಟ ಮಾಡಿದರು. ಎರಡು ದಿನಗಳ ಕರಾವಳಿ ಪ್ರವಾಸದಲ್ಲಿರುವ ಪಿ.ಬಿ. ಆಚಾರ್ಯ ಪತ್ನಿ ಕವಿತಾ ಆಚಾರ್ಯ ಮತ್ತು ಸಂಬಂಧಿ ನಾರಾಯಣ ಜೊತೆ ಊಟ ಮಾಡಲು ಈ […]

ಸಮಾಜ ಸಶಕ್ತಗೊಳಿಸುವ ಶಿಕ್ಷಣ ದೊರೆಯಲಿ: ಪಿ.ಬಿ. ಆಚಾರ್ಯ

Friday, January 5th, 2018
education

ಉಡುಪಿ: ಸಮಾಜವನ್ನು ಗಟ್ಟಿಗೊಳಿಸುವ, ಎಲ್ಲರಿಗೂ ಉತ್ತಮ ಬದುಕನ್ನು ಒದಗಿಸಿ ಕೊಡುವ ಕೆಲಸ ನಡೆಯಬೇಕು. ಇದಕ್ಕೆ ಪೂರಕವಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಬೇಕಿದೆ ಎಂದು ನಾಗಾಲ್ಯಾಂಡ್‌ ರಾಜ್ಯಪಾಲ ಉಡುಪಿ ಮೂಲದ ಪಿ.ಬಿ. ಆಚಾರ್ಯ ಹೇಳಿದರು. ಮಣಿಪಾಲದ ವ್ಯಾಲಿವ್ಯೂ ಹೊಟೇಲ್‌ ಸಭಾಂಗಣದಲ್ಲಿ ಜ. 4ರಂದು ಜರಗಿದ ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಆಚಾರ್ಯ ಅವರು ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಿದೆ. ಶಿಕ್ಷಣ, ಪದವಿ ಪಡೆಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ ಸಾಮಾಜಿಕ ಸಂಬಂಧ […]

ಆಳ್ವಾಸ್‌‌ಗೆ ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಭೇಟಿ

Tuesday, September 20th, 2016
p-b-acharya

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ಗೆ ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಭೇಟಿ ನೀಡಿದರು. ಅಳ್ವಾಸ್ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಥಕ್, ಯಕ್ಷಗಾನ ನೃತ್ಯ ವೈಭವ, ಮಲ್ಲಕಂಬ, ಪುರುಲಿಯಾ ಜಾವೋ, ಶ್ರೀಲಂಕಾದ ಜನಪದ ನೃತ್ಯ, ಸ್ಟಿಕ್ ಡ್ಯಾನ್ಸ್, ಡೋಲ್ ಚಲೋ, ಬಂಜಾರ ಸಹಿತ ದೇಶದ ವಿವಿಧ ನೃತ್ಯ ಪ್ರಕಾರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಂಸ್ಕೃತಿಕ ವೈವಿಧ್ಯದ ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳು ಜ್ಞಾನವನ್ನು ನೀಡುತ್ತದೆ. ಆದರೆ ಅದು ನಿಜಾರ್ಥದಲ್ಲಿ ಉಪಯೋಗವಾಗುವುದು […]