Blog Archive

ನೀತಿ ಸಂಹಿತೆ ಜಾರಿ: ಸರ್ಕಾರಿ ಕಾರು ಬಿಟ್ಟು ಬಸ್‌ನಲ್ಲೇ ಪ್ರಯಾಣಿಸಿದ ಶಾಸಕಿ ಶಕುಂತಲಾ ಶೆಟ್ಟಿ

Tuesday, March 27th, 2018
shakuntala-shetty

ಪುತ್ತೂರು: ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಪರಿಣಾಮವಾಗಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಸರ್ಕಾರಿ ಕಾರು ಬಿಟ್ಟು ಬಸ್‌ನಲ್ಲಿ ಪ್ರಯಾಣ ಬೆಳಸಿದರು. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಶಕುಂತಲಾ ಶೆಟ್ಟಿ ಅವರು ಸರ್ಕಾರಿ ಕಾರು ಬಿಟ್ಟು ಬಿಟ್ಟು ಬಸ್‌ನಲ್ಲೇ ಪ್ರಯಾಣಿಸಿದರು. ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಹಾಗಿಗಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ಪುತ್ತೂರು ಬಳಿ ಗುಡುಗು ಸಿಡಿಲಿನ ಅಬ್ಬರ… ಓರ್ವ ಸಾವು, ಇಬ್ಬರಿಗೆ ಗಾಯ

Tuesday, March 20th, 2018
puttur

ಮಂಗಳೂರು: ಸಿಡಿಲು ಬಡಿಲು ವ್ಯಕ್ತಿವೋರ್ವ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಪುತ್ತೂರು ತಾಲೂಕು ಸವಣೂರು ಗ್ರಾಮದ ಪುಣ್ಯಪ್ಪಾಡಿ ಎಂಬಲ್ಲಿ ಸಂಜೆ ನಡೆದಿದೆ. ಮೃತರನ್ನು ಧನಂಜಯ (35)ಎಂದು ಗುರುತಿಸಲಾಗಿದೆ. ಮೃತನ ಸಹೋದರಿ ಗೀತಾ ಹಾಗೂ ದೊಡ್ಡಪ್ಪ ಕುಂಡ ಎಂಬುವರು ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯನಿಗೆ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ಸ್ವೀಕರಿಸಿದ ಮುತ್ತಪ್ಪ ರೈ

Friday, March 16th, 2018
mutthappa-rai

ಮಂಗಳೂರು: ಇದು ನನ್ನ ಜೀವನದ ಒಂದು ಭಾಗ್ಯ. ಪುತ್ತೂರು ಮಹಾಲಿಂಗೇಶ್ವರನ ಕೃಪೆಯಿಂದ ಇದೀಗ ಮೂರನೇ ಬ್ರಹ್ಮರಥವನ್ನು ನೀಡುವ ಭಾಗ್ಯ ದೊರಕಿದೆ ಎಂದು ಉದ್ಯಮಿ ಎನ್.ಮುತ್ತಪ್ಪ ರೈ ಹೇಳಿದರು. ಅವರು ಮಹತೋಭಾರ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾರೂಪದಲ್ಲಿ ನಿರ್ಮಿಸಿ ಕೊಡುತ್ತಿರುವ ನೂತನ ಬ್ರಹ್ಮರಥ ನಿರ್ಮಾಣಕ್ಕೆ ವೀಳ್ಯ ಸ್ವೀಕರಿಸಿ ಮಾತನಾಡಿದರು. ಇದು ನಾವು ಕೊಡುವುದಲ್ಲ ಬದಲಾಗಿ ಸಕಲ ಭಕ್ತರ ಪರವಾಗಿ ಕುಕ್ಕೆಸುಬ್ರಹ್ಮಣ್ಯದ ಎಲ್ಲಾ ಜನತೆಯ ಪರವಾಗಿ ನಮ್ಮ ಕೈಯಿಂದ ಭಗವಂತ ಕೊಡಿಸುತ್ತಿದ್ದಾನೆ. ಭಗವಂತ ನೀಡಿದ ಭಾಗ್ಯವನ್ನು ನಾವು ಪೂರೈಸುತ್ತಿದ್ದೇವೆ. ಶ್ರೀ ದೇವರ […]

ಶಾಲೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಜ್ಯೋತಿಷಿಯಿಂದ ಅತ್ಯಾಚಾರ

Saturday, March 10th, 2018
puttur

ಪುತ್ತೂರು: ಇಲ್ಲಿಗೆ ಸಮೀಪದ ಬನ್ನೂರಿನ ಜ್ಯೋತಿಷಿವೋರ್ವ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬಾಲಚಂದ್ರ ಆಚಾರ್ಯ ಎಂಬ ಜ್ಯೋತಿಷಿ ಈ ಕೃತ್ಯ ಎಸಗಿರುವ ಆರೋಪಿ. ಬಾಲಕಿ ಶಾಲೆಗೆ ತೆರಳುತ್ತಿದ್ದ ವೇಳೆ ಜ್ಯೋತಿಷ್ಯ ಕೇಳಲು ಹೋದಾಗ ಬಾಲಚಂದ್ರ ಬಾಲಕಿ ಮೇಲೆ ಎರಗಿದ್ದಾನೆ ಎಂದು ತಿಳಿದುಬಂದಿದೆ. ಪುತ್ತೂರು ಪೊಲೀಸರು ಆರೋಪಿಯನ್ನು ನಿನ್ನೆ ಸಂಜೆ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

ಎಚ್ಚೆತ್ತುಕೊಳ್ಳದಿದ್ದರೆ ಕರಾವಳಿ ಕೈತಪ್ಪೀತು!

Tuesday, March 6th, 2018
karavali

ಪುತ್ತೂರು: ಜೆಹಾದಿ ಶಕ್ತಿಗಳನ್ನು ಸಲಹುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕಾಶ್ಮೀರದಲ್ಲಿ ಪಂಡಿತರಿಗಾದ ಗತಿ ಕರಾವಳಿಯಲ್ಲೂ ಬರಬಹುದು, ಕರಾವಳಿ ಕೈತಪ್ಪಿ ಹೋಗಬಹುದು ಎಂದು ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದರು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಆಶ್ರಯದಲ್ಲಿ ಪುತ್ತೂರಿನ ದರ್ಬೆಯಿಂದ ಬೊಳುವಾರು ವರೆಗೆ ಪಾದಯಾತ್ರೆಯ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ನಾಡು ಶಿಕ್ಷಣದ ನೆಲೆವೀಡು. ಇದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ಹಿಂದೂಗಳು ಒಗ್ಗಟ್ಟಾಗಿ ಮುನ್ನಡೆಯಬೇಕು. ಇಲ್ಲದೇ ಹೋದರೆ ಕಾಶ್ಮೀರದ […]

ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ: ಪುತ್ತೂರಿನಲ್ಲಿ ಅಮಿತ್ ಷಾ

Tuesday, February 20th, 2018
puttur

ಮಂಗಳೂರು: ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ. ಯಾವುದೇ ಹುದ್ದೆಗೆ ಹೋದರೂ ಮಾತೃಭಾಷೆ ಮರೆಯಬೇಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಷಾ, ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ. ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು ಎಂದರು. ಈಗ ವೇದಿಕೆಯಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ಈ ವೇದಿಕೆಯಲ್ಲಿ ಇರಬೇಕು. ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ […]

ರೈಲ್ವೆ ಮೇಲ್ಸೆತುವೆ ಕೆಳಗಡೆ ಸಿಲುಕಿಕೊಂಡ ಕಂಟೈನರ್: ಮಾಣಿ ಹೈವೇ ಸಂಚಾರ ಬಂದ್‌

Wednesday, February 7th, 2018
bantwala

ಮಂಗಳೂರು: ಪುತ್ತೂರು ತಾಲೂಕಿನ ಮಿತ್ತೂರಿನಲ್ಲಿ ರೈಲ್ವೆ ಮೇಲ್ಸೇತುವೆ ಕೆಳಗಡೆ ಬೃಹತ್ ಕಂಟೈನರೊಂದು ಸಿಲುಕಿಕೊಂಡು ಜನರು‌ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಹೊತ್ತಿನಲ್ಲಿ ಕಂಟೈನರ್ ಸಿಲುಕಿಕೊಂಡಿದ್ದು ಈ ರಸ್ತೆಯಲ್ಲಿ ಸಂಚಾರಕ್ಕೆ ತೊಡಕುಂಟಾಗಿದೆ. ಮಾಣಿ-ಪುತ್ತೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವುದರಿಂದ‌ ಹೆದ್ದಾರಿಯಲ್ಲಿ ಸಂಚರಿಸುವವರು ಮುಂದೆ ಹೋಗಲಾಗದೆ ಪರದಾಡುತ್ತಿದ್ದಾರೆ.

ಸರ್ಕಾರಿ ಬಸ್‌ ಕಾರಿಗೆ ಢಿಕ್ಕಿ :ನಾಲ್ವರು ಗಂಭೀರ

Friday, January 26th, 2018
car-accident

ಪುತ್ತೂರು :ಇಲ್ಲಿದ ಕಬಕ ಬಳಿಯ ಪೋಳ್ಯದಲ್ಲಿ ರಾಜಹಂಸ ಬಸ್ಸೊಂದು ಐ20 ಕಾರಿಗೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ತೂರು ಕಡೆಯಿಂದ ಬರುತ್ತಿದ್ದ ಬಸ್‌ ಮತ್ತು ಮಂಗಳೂರಿನಿಂದ ಬರುತ್ತಿದ್ದ ಕಾರು ಮುಖಾಮುಖೀ ಢಿಕ್ಕಿಯಾಗಿ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ ಚಾಲಕನ ಅಜಾಗರುಕತೆಯೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಹೊರತೆಗೆಯಲು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಅಫಘಾತ ಸ್ಥಳದಲ್ಲಿ ಯಾರೂ ಇಲ್ಲದ […]

ಕ್ಯಾಪ್ಟನ್‌ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ

Friday, January 26th, 2018
captain

ಪುತ್ತೂರು: ಕಾರ್ಗಿಲ್‌ನ ಮೈಕೊರೆವ ಚಳಿ, ಸುರಿವ ಮಂಜು, ಕ್ಷಣ ಕ್ಷಣಕ್ಕೂ ಪ್ರತಿಕೂಲ ಹವಾಮಾನ. ಆದರೆ ಇವ್ಯಾವು ದನ್ನೂ ಲೆಕ್ಕಿಸದೆ ದೇಶ ಸೇವೆಯೊಂದೇ ಉದ್ದೇಶ ಎಂದು ಗಡಿ ಕಾಯುತ್ತಿರುವವರು ಸೈನಿಕ ಕ್ಯಾಪ್ಟನ್‌ ರಾಧೇಶ್‌. ರಾಧೇಶ್‌ ಮೂಲತಃ ಪುತ್ತೂರಿನವರು. ಸದ್ಯ ಕಾರ್ಗಿಲ್‌ನ ದ್ರಾಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2015ರಲ್ಲಿ ಭಾರತೀಯ ಭೂಸೇನೆಗೆ ಅಧಿಕಾರಿಯಾಗಿ ಸೇರಿದ ರಾಧೇಶ್‌ ದೇಶ ಸೇವೆ ಮಾಡಲು ಅವಕಾಶ ಸಿಕ್ಕಿದ ಬಗ್ಗೆ ಅತೀವ ಹೆಮ್ಮೆ ಪಡುತ್ತಾರೆ. 2016 ಎಪ್ರಿಲ್‌ನಿಂದ ಚೆನ್ನೈಯಲ್ಲಿ ಕಠಿನ ತರಬೇತಿ ಪೂರೈಸಿದ್ದ ಅವರು ಬಳಿಕ ವಿಶ್ವದ […]

ಐಎಎಸ್‌ ಅಧಿಕಾರಿಗಳು ಬಂದರೂ ಅಭಿವೃದ್ಧಿ ಮರೀಚಿಕೆ

Thursday, January 4th, 2018
bridge-putur

ಪುತ್ತೂರು: ಮಂಜಲ್ಪಡ್ಪು ಬಳಿಯ ಶಿಂಗಾಣಿ ಸೇತುವೆ, ಪ್ರಮುಖ ರಸ್ತೆಗಳ ವಿಸ್ತರಣೆ, ಬಿರುಮಲೆ ಅಭಿವೃದ್ಧಿ,ಉಪ್ಪಿನಂಗಡಿ ಬಳಿಯ ನದಿ ಒತ್ತುವರಿ, ರೈಲ್ವೇ ಮೇಲ್ಸೇತುವೆ, ದಿನವಹಿ ಸಂತೆ ಹೀಗೆ ಹಲವು ವಿಷಯಗಳು ಕ್ರಮೇಣ ಮೂಲೆ ಗುಂಪಾಗುತ್ತಿವೆ. ಈ ಎಲ್ಲ ಯೋಜನೆಗಳಿಗಾಗಿ ಸಾಕಷ್ಟು ಅನುದಾನ ಬಳಸಿಕೊಳ್ಳಲಾಗಿದೆ. ಒಂದೆಡೆ ಬಳಕೆಗೂ ಲಭ್ಯವಾಗದೆ, ಇನ್ನೊಂದೆಡೆ ಅನುದಾನವೂ ಪೋಲಾಗುವ ಭೀತಿ ಎದುರಾಗಿದೆ. ಲಕ್ಷಾಂತರ ರೂ.ವನ್ನು ಯೋಜನೆಗೆ ವಿನಿಯೋಗಿಸಿದ್ದರೂ ಬಳಕೆಗೆ ಲಭ್ಯವಾಗಿಲ್ಲ. ಇದನ್ನು ಪ್ರಶ್ನಿಸಿದರೆ ಜನಪ್ರತಿನಿಧಿಗಳು ಅಧಿಕಾರಿಗಳ ಕಡೆ ಕೈ ತೋರಿಸುತ್ತಾರೆ. ಅಧಿಕಾರಿಗಳು ಮೇಲಧಿಕಾರಿಗಳ ಹೆಸರನ್ನು ಹೇಳಿ ನುಣುಚಿಕೊಳ್ಳುತ್ತಾರೆ. […]